ಮಂಗಳೂರು: ದ.ಕ.ಜಿಲ್ಲೆಯ 8 ವಿಧಾನ ಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವ ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸಲು ಪಕ್ಷದ ಕಾರ್ಮಿಕ ಘಟಕ ವಾದ ಇಂಟಕ್ ಕರೆ ನೀಡಿದೆ.
ಶನಿವಾರ ಇಂಟಕ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಇಂಟಕ್ ಜಿಲ್ಲಾಧ್ಯಕ್ಷ ಮನೋಹರ ಶೆಟ್ಟಿ ಇಂಟಕ್‌ನ ಸರ್ವ ಸದಸ್ಯರೂ ಕೂಡ ಬೂತ್ ಮಟ್ಟದಲ್ಲಿ ಸಕ್ರಿಯವಾಗಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಕೆಲಸ ಮಾಡಬೇಕು. ತಮ್ಮ ಕುಟುಂಬದ ಸರ್ವರನ್ನೂ ಕೂಡ ಮತದಾನ ಮಾಡುವಂತೆ ಪ್ರೇರೇಪಿಸಬೇಕು ಎಂದರು.
ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಅಭ್ಯರ್ಥಿ ಜೆ.ಆರ್.ಲೋಬೊ ಇಂಟಕ್‌ನ ಹಲವು ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ. ಹಾಗಾಗಿ ಅವರ ಗೆಲುವಿಗಾಗಿ ಹೆಚ್ಚಿನ ಶ್ರಮ ವಹಿಸಬೇಕು. ಇಂಟಕ್‌ನ ದ.ಕ.ಜಿಲ್ಲಾ ಮತ್ತು ರಾಜ್ಯ ಅಧ್ಯಕ್ಷರಾಗಿದ್ದ ರಾಕೇಶ್ ಮಲ್ಲಿಗೆ ಕಾಂಗ್ರೆಸ್ ಪಕ್ಷವು ಕುಂದಾಪುರದಲ್ಲಿ ಸ್ಪರ್ಧಿಸಲು ಅವಕಾಶ ನೀಡಿದೆ. ಕಾಂಗ್ರೆಸ್ ಹೊರತು ಬೇರೆ ಯಾವ ರಾಜಕೀಯ ಪಕ್ಷವೂ ಕಾರ್ಮಿಕ ಘಟಕಕ್ಕೆ ಇಂತಹ ಅವಕಾಶ ನೀಡಿಲ್ಲ. ಇದನ್ನು ಕಾರ್ಮಿಕರು ಅರ್ಥ ಮಾಡಿಕೊಂಡು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಇಂಟಕ್ ಕಾರ್ಯದರ್ಶಿಗಳಾದ ಶಶಿರಾಜ್ ಅಂಬಟ್, ಪಿ.ಕೆ. ಸುರೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಿತ್ತರಂಜನ್ ಶೆಟ್ಟಿ ಬೊಂಡಾಲ, ದಕ್ಷಿಣ ಬ್ಲಾಕ್ ಅಧ್ಯಕ್ಷ ಉಮೇಶ್ ದೇವಾಡಿಗ, ಉತ್ತರ ಬ್ಲಾಕ್ ಅಧ್ಯಕ್ಷ ಉಮೇಶ್ ಕೋಟ್ಯಾನ್, ಯುವ ಇಂಟಕ್ ಜಿಲ್ಲಾಧ್ಯಕ್ಷ ದೀಕ್ಷಿತ್ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ಜಗನ್ನಾಥ ಶೆಟ್ಟಿ, ಚಿತ್ತರಂಜನ್ ಶೆಟ್ಟಿ, ಕೆನರಾ ಚೇಂಬರ್ ಎಸೋಸಿಯೇಶನ್‌ನ ರಹ್ಮಾನ್, ಸುಧೀರ್ ಕಡೆಕಾರು, ಮನೀಶ್ ರಾಜ್, ಚಂದ್ರಶೇಖರ್ ಪೂಂಜಾ, ಶಮೀಮ್, ಮಹಾಬಲ ಪೂಜಾರಿ, ನವಾಝ್ ಜಪ್ಪು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English