ಕಾಂಗ್ರೆಸ್, ಬಿಜೆಪಿಯಿಂದ ಕಾರ್ಯಕರ್ತರ ಒಪ್ಪಿಗೆ ಇಲ್ಲದೆ ಅಭ್ಯರ್ಥಿಗಳ ಆಯ್ಕೆ – ಶ್ರೀಕರ ಪ್ರಭು

8:56 PM, Saturday, May 5th, 2018
Share
1 Star2 Stars3 Stars4 Stars5 Stars
(No Ratings Yet)
Loading...

sreekar-prabhuಮಂಗಳೂರು  : ಈ ಬಾರಿಯ ವಿಧಾನ ಸಭಾ ಚುನಾವಣದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದಿಂದ ನಿಷ್ಠಾವಂತ ಕಾರ್ಯಕರ್ತರ ಅಭಿಪ್ರಾಯ ಪಡೆಯದೇ ಅಭ್ಯರ್ಥಿಗಳ ಆಯ್ಕೆ ಮಾಡಿರುವುದು ತನ್ನ ಗೆಲುವಿಗೆ ಸಹಕಾರಿಯಾಗಲಿದೆ ಎಂದು ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾದ ಶ್ರೀಕರ ಪ್ರಭು ಅವರು ತಮ್ಮ ಚುನಾವಣಾ ಕಾರ್ಯಾಲಯದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ತಿಳಿಸಿದರು. ಇದರಿಂದ ಕೆಲವು ನಾಯಕರುಗಳ ಸ್ವಾರ್ಥಕ್ಕೆ ಕಾರ್ಯಕರ್ತರನ್ನು ಕಡೆಗಣಿಸಿರುವುದರಿಂದ ಆ ಪಕ್ಷಗಳಲ್ಲಿ ಅಸಮಾಧಾನ ಶುರುವಾಗಿದೆ ಎಂದು ಅವರು ಈ ಸಂದರ್ಭದಲ್ಲಿ ನುಡಿದರು. ಈಗ ರಾಜಕೀಯ ಪಕ್ಷದಲ್ಲಿ ಜಾತಿ ಬಲ ಹಣ ಬಲವೇ ಕೆಲಸ ಮಾಡುತ್ತಿದೆ ಎನ್ನುವುದಕ್ಕೆ ಕಾಂಗ್ರೆಸ್ ಮತ್ತು ಬಿಜೆಪಿಯ ಅಭ್ಯರ್ಥಿಯ ಆಯ್ಕೆ ನೋಡಿದಾಗ ತಿಳಿಯುತ್ತದೆ, ಇದರಿಂದ ನಿರಾಶೆಯಲ್ಲಿರುವ ಹಾಗು ಅಸಮಾಧಾನ ಹೊಂದಿರುವ ಕಾರ್ಯಕರ್ತರು ಪಕ್ಷ ಬಿಟ್ಟು ವ್ಯಕಿತ್ತ್ವಕ್ಕೆ ಬೆಲೆ ಕೊಡುವುದರಲ್ಲಿ ಸಂಶಯವಿಲ್ಲ ಎಂದ ಅವರು ಇದು ನನ್ನ ಗೆಲುವಿಗೆ ಸಹಕಾರಿಯಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಈ ಚುನಾವಣೆಯಲ್ಲಿ ನನ್ನ ಗೆಲುವು ನಿಶ್ಷಿತ ಹಾಗೂ ಈ ಗೆಲುವು ಜನ ಸಾಮಾನ್ಯರ ಮತ್ತು ನಿಷ್ಠಾವಂತ ಕಾರ್ಯಕರ್ತರ ಗೆಲುವಾಗಲಿದೆ ಎಂಬ ವಿಶ್ವಾಸ ವ್ಯಕ್ತ ಪಡಿಸಿದ ಶ್ರೀಕರ ಪ್ರಭು ತನ್ನ ಸಿದ್ಧಾಂತ ಬದಲಾಗಲಿಲ್ಲ ಮತ್ತು ತನ್ನನ್ನು ಜನ ಸೇವೆಯಿಂದ ದೂರ ಇಡುವ ಪ್ರಯತ್ನ ಸಫಲಗೊಳ್ಳುವುದಿಲ್ಲ ಎಂದು ಕಾರ್ಯಕರ್ತರಲ್ಲಿ ವಿಶ್ವಾಸ ಮೂಡಿಸಿದರು

ಮತದಾರರೇ ನನ್ನ ಹೈಕಮಾಂಡ್, ಕಾರ್ಯಕರ್ತರ ಒಪ್ಪಿಗೆ ಪಡೆಯದೇ ಅಭ್ಯರ್ಥಿಗಳ ಆಯ್ಕೆ ಮಾಡಿರುವ ಕಾಂಗ್ರೆಸ್ ಹಾಗು ಬಿಜೆಪಿಯ ಕೆಲವು ನಾಯಕರು ಈ ಚುನಾವಣೆ ನಂತರ ಮನೆ ಸೇರಲಿದ್ದಾರೆ ಮಾತ್ರವಲ್ಲ ಅವರಿಂದ ಅವರ ಪಕ್ಷಗಳಿಗೆ ಸೋಲಾಗಲಿದೆ. ಎರಡು ಪಕ್ಷದ ಅಭ್ಯರ್ಥಿಗಳ ಘೋಷಣೆ ಮಾಡುವ ಮೊದಲಿನ ಗೊಂದಲವೇ ಇದಕ್ಕೆ ಉದಾಹರಣೆ ಎಂದರು.

ಇಂದು ನಾನು ಮಂಗಳೂರಿನ ಪ್ರಮುಖ ಪರಿಸರವಾಗಿರುವ ಶಿವಭಾಗ್, ಬೆಂದೂರ್ ವೆಲ್, ಬಲ್ಮಠ ಹಾಗೂ ಮಲ್ಲಿಕಟ್ಟೆ ಪ್ರದೇಶದಲ್ಲಿ ಪಾದಯಾತ್ರೆ ನಡೆಸುವ ಸಂಧರ್ಭದಲ್ಲಿ ನೂರಾರು ಕಾರ್ಯಕರ್ತರು ಭಾಗವಹಿಸಿದರು, ನನ್ನಬಗ್ಗೆ ಉತ್ತಮ ಜನಾಭಿಪ್ರಾಯವು ಮೂಡಿಬಂದಿದೆ ಹಾಗು ಮತನೀಡಿ ವಿಜಯಿಗೊಳಿಸುವ ಭರವಸೆಯನ್ನು ನೀಡಿರುತ್ತಾರೆ. ಅದರಲ್ಲೂ ವಿಶೇಷವಾಗಿ ನಮ್ಮ ಚಿಹ್ನೆ ಆಟೋರಿಕ್ಷಾವಾಗಿರುವುದರಿಂದ ವಿಶೇಷವಾಗಿ ಎಲ್ಲಾ ಆಟೋರಿಕ್ಷಾ ಚಾಲಕ ಮಾಲಕ ವರ್ಗ ಕೂಡ ಉತ್ಸಾಹದಿಂದ ಬೆಂಬಲ ನೀಡಿ ನಮ್ಮೊಂದಿಗೆ ಸೇರಿಕೊಳ್ಳುತ್ತಿದ್ದರೆ ಎಂಬ ವಿಶ್ವಾಸದ ಮಾತುಗಳನ್ನು ಶ್ರೀಕರ ಪ್ರಭುರವರು ಕಾರ್ಯಕರ್ತರ ಕರಾಡತನದ ನಡುವೆ ಘೋಷಿಸಿದರು. ಈ ಸಂದರ್ಭದಲ್ಲಿ ಶ್ರೀಕರ ಪ್ರಭು ಅಭಿಮಾನಿ ಬಳಗದ ಅದ್ಯಕ್ಷರಾದ ಕೆ.ಪಿ. ಶೆಟ್ಟಿ ಬೇಡೆಮಾರ್, ಕಾರ್ಯದರ್ಶಿ ಪ್ರೇಮ್ ಚಂದ್ರ, ಉಸ್ತುವಾರಿ ಸುರೇಶ ಶೆಟ್ಟಿ, ಸಂಯೋಜಕ ಅವಿನಾಶ್ ಶೆಟ್ಟಿ, ಅಶ್ವಿತ್ ಕುಮಾರ್, ವೆಂಕಟರಮಣ ಮಲ್ಯ, ಜೈರಾಮ್ ಕಾಮತ್, ಸುನಿಲ್ ಬಜಿಲಕೇರಿ, ಯತೀಶ್ ಕುಮಾರ್ ನಾಗೇಶ್ ಶೆಣೈ ಮತ್ತಿತರು ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English