ಕಾಂಗ್ರೆಸ್ ಬಿಜೆಪಿಗೆ ವ್ಯತ್ಯಾಸ ಇಲ್ಲ: ಸುನೀಲ್ ಕುಮಾರ್ ಬಜಾಲ್
9:42 PM, Saturday, May 5th, 2018
Loading...
ಮಂಗಳೂರು : ಮಂಗಳೂರಿನ ಸರ್ವಾಂಗೀಣ ಅಭಿವೃದ್ಧಿಗೆ ಕಾಂಗ್ರೆಸ್ ಬಿಜೆಪಿ ಕೊಡುಗೆ ಶೂನ್ಯ. ಕಳೆದೆರಡು ಅವಧಿಯಲ್ಲಿ ಈ ವಿಧಾನ ಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದ ಬಿಜೆಪಿಯ ಯೋಗೀಶ್ ಭಟ್ ಹಾಗೂ ಕಾಂಗ್ರೆಸ್‌ನ ಜೆ.ಆರ್.ಲೋಬೋ ಇವರಿಬ್ಬರ ಆಡಳಿತಾವಧಿಯಲ್ಲಿ ಅಭಿವೃದ್ಧಿಯ ಕೊರತೆ, ಜನಸಾಮಾನ್ಯರ ಸಂಕಷ್ಟಗಳ ಯಥಾಸ್ಥಿತಿ, ಸರಕಾರಿ ಆಸ್ಪತ್ರೆಗಳ ಕಡೆಗಣನೆ, ಮುಕ್ತಿ ಕಾಣದ ಒಳಚರಂಡಿ ವ್ಯವಸ್ಥೆ ಹೀಗೆ ಕ್ಷೇತ್ರದ ಜನರ ಬಗ್ಗೆ ನೀರಾ ಶಕ್ತಿಯನ್ನು ಹೊಂದಿದೆ. ಆದ್ದರಿಂದ ಕಾಂಗ್ರೆಸ್ ಹಾಗೂ ಬಿಜೆಪಿ ಆಡಳಿತಕ್ಕೆ ಯಾವುದೇ ವ್ಯತ್ಯಾಸ ಇಲ್ಲ ಎಂದು ಮಂಗಳೂರು ನಗರ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ಸುನೀಲ್ ಕುಮಾರ್ ಬಜಾಲ್ ನಿನ್ನೆ ಪಕ್ಕಲಡ್ಕದಲ್ಲಿ ನಡೆದ ಚುನಾವಣಾ ಪ್ರಚಾರ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಮಂಗಳೂರಿನ ಮುಖ್ಯ ರಸ್ತೆಗಳಿಗೆ ಕಾಂಕ್ರೀಟ್ ಕರಣಗೊಳಿಸಿದ ಕೂಡಲೇ ಅಭಿವೃದ್ಧಿಯೆಂದು ಒಪ್ಪಲು ಸಾದ್ಯವಿಲ್ಲ. ಇದನ್ನೇ ಅಭಿವೃದ್ಧಿಯೆಂದು ಬಡಾಯಿ ಕೊಚ್ಚಿಕೊಳ್ಳುವ ಕಾಂಗ್ರೆಸ್ ನ ಶಾಸಕರಿಗೆ ಗೊತ್ತಿರಬೇಕು. ಮಂಗಳೂರಿನ ಬಡವರು ಸ್ವಂತ ಮನೆಯಿಲ್ಲದೆ ಬಾಡಿಗೆ ಮನೆಯಲ್ಲಿ ವಾಸವಿದ್ದು ಸ್ವಂತ ಸೂರಿಗಾಗಿ ಅಂಗಲಾಚುತ್ತಿದ್ದಾರೆ. ಇನ್ನು ಕೆಲವರು ಹಕ್ಕು ಪತ್ರಗಳಿಲ್ಲದೆ ಕಂಗಲಾಗಿದ್ದಾರೆ. ಬೀಡಿ ಕಾರ್ಮಿಕರ ಸಮಸ್ಯೆ ಇನ್ನು ಸರಿಯಾಗಿ ಬಗೆ ಹರಿದಿಲ್ಲ. ಯುವಜನರ ಉದ್ಯೋಗ, ಉದ್ಯೋಗ ಭದ್ರತೆ ಇಲ್ಲದೆ ದಾರಿ ತಪ್ಪುತ್ತಿದ್ದಾರೆ. ಮಂಗಳೂರಿನ ಬಡವರ ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕಾಗಿ ಇಲ್ಲಿ ಒಂದು ಸರಕಾರಿ ಮೆಡಿಕಲ್ ಕಾಲೇಜ್ ಅಥವಾ ಇಂಜಿನಿಯರಿಂಗ್ ಕಾಲೇಜ್ ಗಳು ಇಲ್ಲ. ಇಂತಹ ಗಂಭೀರ ಸಮಸ್ಯೆಗಳನ್ನು ಬಗೆಹರಿಸದೆ ಮಂಗಳೂರಿನ ಅಭಿವೃದ್ಧಿ ಸಾಧ್ಯವೇ ಇಲ್ಲ. ಈ ಕ್ಷೇತ್ರದಿಂದ ಕಾಂಗ್ರೆಸ್ ಹಾಗೂ ಬಿಜೆಪಿಯಿಂದ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳು ಕ್ಷೇತ್ರದ ಶ್ರೀಮಂತರ ಹಿತಾಸಕ್ತಿಗಳನ್ನು ಕಾಯ್ದುಕೊಳ್ಳುವ ವ್ಯಾಪಾರಿ ಮನೋಭಾವದವರಾಗಿರುತ್ತಾರೆ. ಇಂತಹವರು ಈ ಕ್ಷೇತ್ರದಲ್ಲಿರುವ ಶೇ 90%ರಷ್ಟಿರುವ ಬಡವರ ಬಗ್ಗೆ ಯಾವುದೇ ಕಾಳಜಿ ವಹಿಸಿಲ್ಲ. ಈ ನಿಟ್ಟಿನಲ್ಲಿ ಸಿಪಿಐಎಂ ನ ಸ್ಪರ್ಧೆ ಶೇ 90%ರಷ್ಟಿರುವ ಬಡವರನ್ನು ಪ್ರತಿನಿಧಿಸಿ ಆಗಾಗಿ ತಾವುಗಳು ಈ ಬಾರಿಯ ಚುನಾವಣೆಯಲ್ಲಿ ಸಿಪಿಐ(ಎಂ) ಪಕ್ಷಕ್ಕೆ ಮತ ನೀಡಿ ಮಂಗಳೂರಿನ ಸರ್ವಾಂಗೀಣ ಅಭಿವೃದ್ಧಿಗಾಗಿ ಕೈ ಜೋಡಿಸಬೇಕೆಂದು ವಿನಂತಿಸಿದರು.
ಈ ವೇಳೆ ವೇದಿಕೆಯಲ್ಲಿ ಸಿಪಿಐ(ಎಂ) ಜಿಲ್ಲಾ ಮುಖಂಡರಾದ ಜೆ. ಬಾಲಕೃಷ್ಣ ಶೆಟ್ಟಿ, ಚುನಾವಣಾ ಪ್ರಚಾರ ಕಾರ್ಯದರ್ಶಿ ಸಂತೋಷ್ ಬಜಾಲ್, ಸಂತೋಷ್ ಶಕ್ತಿನಗರ, ಸ್ಥಳೀಯ ಮಾಜಿ ಮ.ನ.ಪಾ. ಸದಸ್ಯೆ ಜಯಂತಿ ಬಿ.ಶೆಟ್ಟಿ, ಸುರೇಶ್ ಬಜಾಲ್, ಪ್ರಿತೇಶ್, ಧೀರಾಜ್, ಅಶೋಕ್ ಸಾಲ್ಯಾನ್ ಉಪಸ್ಥಿತರಿದ್ದರು.