ಮಂಗಳೂರು: ಸಿಪಿಎಂ ಪಕ್ಷದ ಮುಖಂಡನ ಅಂಗಡಿಗೆ ದುಷ್ಕರ್ಮಿಗಳು ಎರಡನೇ ಬಾರಿ ಬೆಂಕಿ ಹಚ್ಚಲು ಯತ್ನಿಸಿರುವ ಘಟನೆ ಸುರತ್ಕಲ್ನ ಕುಳಾಯಿಯಲ್ಲಿ ನಡೆದಿದೆ.
ಸುರತ್ಕಲ್ ಭಾಗದ ಸಿಪಿಎಂ ಮುಖಂಡ ಶ್ರೀನಾಥ್ ಕುಲಾಲ್ ಎಂಬವರಿಗೆ ಸೇರಿದ ಗೋಡೌನ್ ಇದಾಗಿದ್ದು, ಮಂಗಳೂರು ಉತ್ತರ ಕ್ಷೇತ್ರದ ಸಿಪಿಎಂ ಅಭ್ಯರ್ಥಿ ಮುನೀರ್ ಕಾಟಿಪಳ್ಳ ಪ್ರಚಾರದಲ್ಲಿ ಇವರು ತೊಡಗಿದ್ದಾರೆ.
ಕಳೆದ ಶನಿವಾರ ರಾತ್ರಿ ಬೆಂಕಿ ಹಚ್ಚಲು ಯತ್ನಿಸಿದ್ದ ದುಷ್ಕರ್ಮಿಗಳು ಮತ್ತೆ ನಿನ್ನೆ ಸಂಜೆಯೂ ಸಹ ಬೆಂಕಿ ಹಚ್ಚಲು ಯತ್ನಿಸಿದ್ದು, ಚುನಾವಣಾ ದ್ವೇಷದಿಂದ ಈ ಕೃತ್ಯ ನಡೆದಿರುವ ಶಂಕೆ ವ್ಯಕ್ತವಾಗಿದೆ.
Click this button or press Ctrl+G to toggle between Kannada and English