ಮಂಗಳೂರು: ತಾನು ಪ್ರತಿನಿಧಿಸುವ ಅಮೇಠಿ ಕ್ಷೇತ್ರದಲ್ಲೇ ಅಭಿವೃದ್ಧಿ ಮಾಡದ ರಾಹುಲ್, ಇಲ್ಲಿ ಬಂದು ಅಭಿವೃದ್ಧಿಯ ಭಾಷಣ ಮಾಡುತ್ತಾರೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಟೀಕಿಸಿದ್ದಾರೆ.
ಬೆಳ್ತಂಗಡಿಯಲ್ಲಿಂದು ತಮ್ಮ ಅಭ್ಯರ್ಥಿ ಪರ ಪ್ರಚಾರ ನಡೆಸಿದ ಬಳಿಕ ಮಾತನಾಡಿದ ಅವರು, ರಾಹುಲ್ ಗಾಂಧಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ರು. ಗಾಂಧಿ ಕುಟುಂಬ 60 ವರ್ಷಗಳಿಂದ ಅಮೇಠಿ ಕ್ಷೇತ್ರ ಪ್ರತಿನಿಧಿಸುತ್ತಿದೆ. ಆದರೆ, ಅಲ್ಲಿ ಕನಿಷ್ಠ ರೈಲ್ವೆ ಹಳಿಯನ್ನು ತರಲು ಸಾಧ್ಯವಾಗಿಲ್ಲ.
ಅಲ್ಲಿನ ಬಡಜನರ ಕಷ್ಟವನ್ನು ನೋಡಲಾಗದು. ನಾಲ್ಕು ತಲೆಮಾರುಗಳಿಂದ ಸಾಧ್ಯವಾಗದ ಕೆಲಸ ಅಮೇಠಿಯಲ್ಲಿ ಈಗ ಆಗ್ತಿದೆ. ಅಮೇಠಿಗೆ ರೈಲ್ವೆ ಹಳಿ ಬರಲು ಮೋದಿ ಬರಬೇಕಾಯ್ತು ಅಂತಾರೆ ಅಲ್ಲಿಯ ಜನ.
ತನ್ನ ಕ್ಷೇತ್ರವನ್ನೇ ಸುಧಾರಣೆ ಮಾಡಲಾಗದ ವ್ಯಕ್ತಿ ಕರ್ನಾಟಕದಲ್ಲಿ ಅಭಿವೃದ್ಧಿ ಪಾಠ ಮಾಡ್ತಾರೆ. ಮೋದಿ ಸರ್ಕಾರದ ಅಭಿವೃದ್ಧಿಯಿಂದ ರಾಹುಲ್ ಗಾಂಧಿಗೆ ಚಿಂತೆಯಾಗಿದೆ ಎಂದು ಹರಿಹಾಯ್ದರು.
Click this button or press Ctrl+G to toggle between Kannada and English