ಅಭಿಷೇಕ್ ಅಂಬರೀಷ್ ಗೌಡ ಪ್ರೇಮಾಯಣ

7:58 PM, Wednesday, October 19th, 2011
Share
1 Star2 Stars3 Stars4 Stars5 Stars
(5 rating, 5 votes)
Loading...

Nicole-Faria

ಬೆಂಗಳೂರು : ಬೆಂಗಳೂರಿನ ಕ್ರೈಸ್ಟ್ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿರುವ ಅಂಬರೀಷ್-ಸುಮಲತಾ ದಂಪತಿಯ ಪುತ್ರ ಅಭಿಷೇಕ್ ಗೌಡ ಮಾಡೆಲ್ ಕಮ್ ಫೆಮಿನಾ ಮಿಸ್ ಇಂಡಿಯಾ ನಿಕೋಲೆ ಫರಿಯಾರನ್ನು ಪ್ರೀತಿಸುತ್ತಿದ್ದಾರೆ ಎಂದು ಇಂದ್ರಜಿತ್ ಲಂಕೇಶ್ ಸಂಪಾದಕತ್ವದ ‘ಲಂಕೇಶ್ ಪತ್ರಿಕೆ’ ವರದಿ ಮಾಡಿತ್ತು.

ಈ ವರದಿ ಪ್ರಕಟವಾದ ಬೆನ್ನಲ್ಲೇ ಅಂಬಿ ಅಭಿಮಾನಿಗಳು, ಮೈಸೂರು ರಸ್ತೆಯಲ್ಲಿನ ರಾಜರಾಜೇಶ್ವರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಪತ್ರಿಕಾ ಕಚೇರಿಗೆ ದಾಳಿ ನಡೆಸಿ ಅಲ್ಲಿದ್ದ ವಾಚ್‌ಮನ್ ಮತ್ತು ಸಹಾಯಕನ ಮೇಲೆ ಹಲ್ಲೆ ನಡೆಸಿದರು. ಅಲ್ಲ್ದೆ ಕಚೇರಿಯಲ್ಲಿದ್ದ ಪೀಠೋಪಕರಣಗಳು, ಕಂಪ್ಯೂಟರುಗಳನ್ನು ಧ್ವಂಸ ಮಾಡಿದರು.

 ಸುದ್ದಿ ತಿಳಿದ ಪೊಲೀಸರು ತಕ್ಷಣವೇ ಸ್ಥಳಕ್ಕಾಗಮಿಸಿದ್ದರಿಂದ, ಹೆಚ್ಚಿನ ಅನಾಹುತ ನಡೆದಿಲ್ಲ.  ದಾಳಿ ನಡೆದ ಸಂದರ್ಭದಲ್ಲಿ ಸಂಪಾದಕ ಇಂದ್ರಜಿತ್ ಕಚೇರಿಯಲ್ಲಿರಲಿಲ್ಲ.

ಅಭಿಷೇಕ್ ಗೌಡ ವಿರುದ್ಧ ಅವಹೇಳನಕಾರಿ ಲೇಖನವನ್ನು ಪತ್ರಿಕೆಯಲ್ಲಿ ಬರೆಯಲಾಗಿದೆ. ಅಂಬರೀಷ್ ವಿರುದ್ಧವೂ ಆರೋಪ ಮಾಡಲಾಗಿದೆ. ಅವರನ್ನು ಜರೆಯಲಾಗಿದೆ. ಕೀಳು ಭಾಷೆಯಲ್ಲಿ   ಅನವರನ್ನು ಹೀಗೆಳೆಯಲಾಗಿದೆ ಎಂದು ಅಭಿಮಾನಿಗಳು ಆರೋಪಿಸಿದ್ದಾರೆ. ಪ್ರಕರಣದ ಬಗ್ಗೆ ಅಂಬರೀಷ್ ಅಥವಾ ಸುಮಲತಾ ಯಾವುದೇ ಹೇಳಿಕೆ ನೀಡಿಲ್ಲ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English