ಬೆಂಗಳೂರು: ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್ ಬಿಜೆಪಿ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿ ಈ ಹೇಳಿಕೆ ನೀಡಿದ್ದಾರೆ.
‘2019 ರಲ್ಲಿ ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿ ಆಗುವುದಿಲ್ಲ,ನಾನೇ ಪ್ರಧಾನಿಯಾಗಿ ಆಯ್ಕೆಯಾಗುತ್ತೇನೆ’ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
‘ಬಿಜೆಪಿಯವರು ವ್ಯವಸ್ಥಿತವಾಗಿ ಪ್ರಜಾಪ್ರಭುತ್ವವನ್ನು ಅಸ್ಥಿರಗೊಳಿಸುತ್ತಿದ್ದಾರೆ.ಪ್ರಧಾನಿ ಮೋದಿ ಅವರು ನಿರಂತರವಾಗಿ ಕರ್ನಾಟಕಕ್ಕೆ ಬರುತ್ತಿದ್ದಾರೆ. ಅವರು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ಅವರಿಗೆ ನನ್ನ ಪ್ರಶ್ನೆ ಏನೆಂದರೆ ಯಾಕೆ ಭ್ರಷ್ಟ, ಜೈಲು ಪಾಲಾಗಿದ್ದ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿಸಿದ್ದೀರಿ ? ಯಾಕೆ ಸ್ವಚ್ಛ ಚಾರಿತ್ರ್ಯ ಉಳ್ಳ ವ್ಯಕ್ತಿಯನ್ನು ಆಯ್ಕೆ ಮಾಡಿಲ್ಲ? 35 000 ಕೋಟಿ ರಾಜ್ಯದ ಹಣ ಲೂಟಿ ಹೊಡೆದ ಗಣಿ ಉದ್ಯಮಿಗಳನ್ನೇಕೆ ಪಕ್ಷದಲ್ಲಿ ಉಳಿಸಿಕೊಂಡಿದ್ದೀರಿ? ಯುವಜನರಿಗೆ 2 ಕೋಟಿ ಉದ್ಯೋಗ ನೀಡುತ್ತೇವೆ ಅಂದಿದ್ದೀರಲ್ಲ, ಸದ್ಯ ದೇಶದಲ್ಲಿ ಅತೀ ಹೆಚ್ಚಿನ ನಿರುದ್ಯೋಗ ಇರುವ ದಾಖಲೆ ನಿರ್ಮಾಣವಾಗಿದೆ. ಯಾಕೆ ಉದ್ಯೋಗ ಕೊಡುತ್ತಿಲ್ಲ’ ಎಂದು ಪ್ರಶ್ನಿಸಿದರು,ಪ್ರಧಾನಿ ಉತ್ತರ ನೀಡಲಿ ಎಂದರು.
ರಾಫೇಲ್ ಡೀಲ್ ಬಗ್ಗೆಯೂ ಪ್ರಶ್ನಿಸಿ ‘ಎಚ್‌ಎಎಲ್ ಕರ್ನಾಟಕದ್ದು, ಈ ಹಗರಣದ ಮೂಲಕ ಕನ್ನಡಿಗರಿಗೆ ಪ್ರಧಾನಿ ಮೋಸ ಮಾಡಿದ್ದಾರೆ’ ಎಂದು ಕಿಡಿ ಕಾರಿದರು.
Click this button or press Ctrl+G to toggle between Kannada and English