ನವದೆಹಲಿ: ಕರ್ನಾಟಕ ವಿಧಾನಸಭಾ ಚುನಾವಣೆ ಕುರಿತಂತೆ ಬಿಬಿಸಿ ಸಮೀಕ್ಷೆ ಹೆಸರಲ್ಲಿ ಹರಿದಾಡುತ್ತಿರುವ ಸುದ್ದಿ ಬಗ್ಗೆ ಸ್ವತಃ ಬಿಬಿಸಿಯೇ ಸ್ಪಷ್ಟನೆ ನೀಡಿದೆ. ಬಿಬಿಸಿ ಹೆಸರಲ್ಲಿನ ಕರ್ನಾಟಕ ಚುನಾವಣಾ ಸರ್ವೇ ಶುದ್ಧ ಸುಳ್ಳು ಎಂದು ಬಿಬಿಸಿ ಹೇಳಿದೆ.
ಅಂತಾರಾಷ್ಟ್ರೀಯ ಸುದ್ದಿ ವಾಹಿನಿಯಾಗಿರುವ ಬಿಬಿಸಿ (British Broadcasting Corporation) ರಾಜ್ಯ ಚುನಾವಣೆ ಕುರಿತು ಸಮೀಕ್ಷೆ ನಡೆಸಿದೆ. ಈ ಸಮೀಕ್ಷೆ ಪ್ರಕಾರ ಚುನಾವಣೆಯಲ್ಲಿ ಬಿಜೆಪಿ 135 ಸ್ಥಾನಗಳನ್ನು ಪಡೆಯಲಿದ್ದರೆ, ಜೆಡಿಎಸ್ 45, ಕಾಂಗ್ರೆಸ್ 35 ಮತ್ತು ಇತರ ಪಕ್ಷಗಳು 15 ಸ್ಥಾನಗಳನ್ನು ಪಡೆಯಲಿವೆ ಎಂಬ ಸುದ್ದಿ ಸಾಮಾಜಿಕ ಜಾಲತಾಣ ಹಾಗೂ ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡುತ್ತಿತ್ತು. ‘ಬಿಬಿಸಿ ನ್ಯೂಸ್ ಇನ್ ಏಷ್ಯಾ’ ಈ ಸರ್ವೇ ಮಾಡಿದೆ ಎಂದು ಹೇಳಲಾಗಿತ್ತು.
ಇದೀಗ ಈ ಸರ್ವೇ ಫೇಕ್ ಎಂದು ಬಿಬಿಸಿ ಹೇಳಿದೆ. ಬಿಬಿಸಿ ನ್ಯೂಸ್ ಹೆಸರಲ್ಲಿ ವಾಟ್ಸ್ ಆ್ಯಪ್‌ನಲ್ಲಿ ನಕಲಿ ಕರ್ನಾಟಕ ಮತ ಸಮೀಕ್ಷೆ ಹರಿದಾಡುತ್ತಿದೆ. ಇದೊಂದು ಶುದ್ಧ ಸುಳ್ಳಾಗಿದ್ದು, ಬಿಬಿಸಿ ಇಂತಹ ಯಾವುದೇ ಸಮೀಕ್ಷೆ ನಡೆಸಿಲ್ಲ. ಭಾರತದ ಚುನಾವಣಾ ಪೂರ್ವ ಸಮೀಕ್ಷೆಗಳನ್ನು ತಮ್ಮ ಸಂಸ್ಥೆ ನಡೆಸುವುದೂ ಇಲ್ಲ ಎಂದು ಟ್ವಿಟ್ಟರ್ ಮೂಲಕ ಬಿಬಿಸಿ ಸ್ಪಷ್ಟೀಕರಣ ನೀಡಿದೆ.
Click this button or press Ctrl+G to toggle between Kannada and English