ಈ ದೇಶದ ನಂ ಒನ್ ಸುಳ್ಳುಗಾರ ಪ್ರಧಾನಿ ಮೋದಿ: ರಮಾನಾಥ ರೈ

10:26 AM, Wednesday, May 9th, 2018
Share
1 Star2 Stars3 Stars4 Stars5 Stars
(No Ratings Yet)
Loading...

ramanath-raiಕಡಬ: ನಮ್ಮಲ್ಲಿ ಇಬ್ಬರು ಸುಳ್ಳುಗಾರರಿದ್ದಾರೆ, ಅದರಲ್ಲಿ ಒಂದನೆ ಸುಳ್ಳುಗಾರ ಸಂಸದ ನಳಿನ್ ಕುಮಾರ್ ಕಟೀಲ್, ಮತ್ತೊಬ್ಬ ಮಹಾನ್ ಸುಳ್ಳುಗಾರ ಇದ್ದರೆ ಅವರು ಈ ದೇಶದ ಪ್ರಧಾನಿ ಮೋದಿಯವರು. ಇನ್ನು ಮುಂದೆ ಜನ ಅವರನ್ನು ನಂಬುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಅರಣ್ಯ ಸಚಿವ ಬಿ. ರಮಾನಾಥ ರೈ ಹೇಳಿದರು.

ಅವರು ಮಂಗಳವಾರ ಕಡಬ ಮೇಲಿನ ಪೇಟೆಯಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿ, ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಿಲ್ಲ ಎಂಬ ಕಾರಣಕ್ಕಾಗಿ ನಾನು ಈ ಕ್ಷೇತ್ರದ ಅಭಿವೃದ್ದಿಗೆ ಸಾಕಷ್ಟು ಪ್ರಯತ್ನ ಮಾಡಿದ್ದೆನೆ, ಕಡಬ ತಾಲೂಕು ಘೋಷಣೆ ಆಗಿದ್ದು ಇದರ ಉದ್ಘಾಟನೆ ಮಾಡಬೇಕು ಎಂದಿದ್ದರೂ ಅದಕ್ಕೆ ಅಡ್ಡಗಾಲು ಹಾಕಿದ್ದು ಈ ಕ್ಷೇತ್ರದ ಶಾಸಕ ಎಸ್. ಅಂಗಾರ ಆದರೆ ಮುಂದಿನ ದಿನಗಳಲ್ಲಿ ಇಲ್ಲಿನ ಶಾಸಕರಾಗುವ ಡಾ ರಘುರವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ರಾಜಕೀಯದಲ್ಲಿ ಮಾತು ಉಳಿಸಿಕೊಂಡ ಮುಖ್ಯಮಂತ್ರಿ ಇದ್ದರೆ ಅದು ಈ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾತ್ರ, ನಾವು ಈ ಭಾಗದಲ್ಲಿ ಸಾಕಷ್ಟು ಅಭಿವೃದ್ದಿ ಕೆಲಸ ಮಾಡಿದ್ದೆವೆ, ಇಚಿಲಂಪಾಡಿ ಸೇತುವೆ ನಿರ್ಮಾಣ ಮಾಡಿದ್ದೆವೆ, ಉದನೆ ಸೇತುವೆ ಕೆಲಸ ಪ್ರಾರಂಭ ಆಗಿದೆ, ಕೊಲದಲ್ಲಿ ಪಶು ವೈದ್ಯಕೀಯ ಕಾಲೇಜು ಆಗಬೇಕಿದ್ದರೆ ನಮ್ಮ ಪ್ರಯತ್ನ ಇದೆ, ಸುಬ್ರಹ್ಮಣ್ಯ, ಕಡಬ ಸಮುದಾಯ ಆಸ್ಪತೆ ನಿರ್ಮಾಣ, 94ಸಿಯಡಿಯಲ್ಲಿ 9 ಸೆಂಟ್ಸ್ ಜಾಗ ಕೊಟ್ಟಿದ್ದೇವೆ.

ಅರಣ್ಯ ಗುಪ್ಪೆಗೆ ಹತ್ತಿರ ಇರುವವರಿಗೆ ಜಾಗ ಕೊಟ್ಟಿದ್ದೇವೆ, ಸುಳ್ಯ ವಿಧಾನಸಭಾ ಕ್ಷೇತ್ರದ ಅಭಿವೃದ್ದಿಗೆ ಪ್ರಯತ್ನ ಮಾಡಿದ್ದೇವೆ. ಆದರೆ ಅಂಗಾರರವರು ನಾನು ಮಾಡಿದ್ದು ಅಂತಾ ಸುಳ್ಳು ಹೇಳುತ್ತಿದ್ದಾರೆ, ಬೆಳಂದೂರು ಕಾಲೇಜು ಮಾಡಲು ನಾವು ಪ್ರಯತ್ನ ಮಾಡಿದ್ದೇವೆ, ಇಲ್ಲಿಯ ಸಾಕಷ್ಟು ಅಭಿವೃದ್ದಿ ಕೆಲಸ ಆಗಿದೆ, ಇಲ್ಲಿಯ ಲೋಕಸಭಾ ಸದಸ್ಯರು ಸುಳ್ಳು ಹೇಳುತ್ತಿದ್ದಾರೆ ಅವರಿಂದ ಜಾಸ್ತಿ ಸುಳ್ಳು ಹೇಳುವರಿದ್ದಾರೆ ಅವರು ಮೋದಿ ಸಾಹೇಬ್ರು, ಅಂತಾರಾಷ್ಟಿಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಕಡಿಮೆಯಾದರೂ ಡಿಸೇಲ್ ಪೆಟ್ರೋಲ್ ಬೆಲೆ ಇಳಿಸಲಿಲ್ಲ, ಗ್ಯಾಸ್ ಬೆಲೆ ಕಡಿಮೆ ಆಗಿಲ್ಲ, ಅಚ್ಚೆ ದಿನ್ ಬರ್ತದೆ ಅಂತ ಕಾದರೆ ಆ ದಿನ ಬರಲೇ ಇಲ್ಲ, ಕಪ್ಪು ಹಣ ಬರಲೇ ಇಲ್ಲ, ರೈತರ ಸಾಲ ಮನ್ನಾ ಮಾಡಿದ್ದೇವೆ, ಮೋದಿಯವರು ರೈತರ ಸಾಲ ಮಾಡದೆ ದೊಡ್ಡ ದೊಡ್ಡ ಉದ್ದಿಮೆದಾರರ ಸಾಲ ಮನ್ನಾ ಮಾಡಿದ್ದಾರೆ, ಇವರಿಗೆ ನಾಚಿಕೆ ಆಗುವುದಿಲ್ಲ, ಜಿ.ಎಸ್.ಟಿ.ಯಿಂದ ಜನ ಸಾಮಾನ್ಯರು ಬೀದಿಗೆ ಬಂದಿದ್ದಾರೆ. ಬಿಜೆಪಿ ಆಡಳಿತ ಇರುವಲ್ಲಿ ಉಚಿತ ಅಕ್ಕಿ ಕೊಡಲಿಲ್ಲ, ಹಸಿವು ಮುಕ್ತ ಕರ್ನಾಟಕ ನಿರ್ಮಾಣ ಮಾಡಿದ ಸಿದ್ದರಾಮಯ್ಯನವರನ್ನು ಮುಂದಿನ ಬಾರಿಯೂ ಅಧಿಕಾರಕ್ಕೆ ತರಬೇಕಿದೆ, ಬಹು ಮುಖ್ಯವಾಗಿ ಸುಳ್ಯ ಕ್ಷೇತ್ರದಲ್ಲಿ ಬದಲಾವಣೆ ಆಗಬೇಕಿದೆ ಇದಕ್ಕಾಗಿ ಕಾರ್ಯಕರ್ತರು ಇನ್ನು ಇರುವ ದಿನದಲ್ಲಿ ಸಾಕಷ್ಟು ಪ್ರಯತ್ನ ಮಾಡಬೇಕು ಎಂದು ಕರೆ ನೀಡಿದರು.

ಮಾಜಿ ಸಚಿವ ಕಾಂಗ್ರೆಸ್ ಮುಖಂಡ ಗಂಗಾಧರ ಗೌಡ ಮಾತನಾಡಿ, ಈ ದೇಶದಲ್ಲಿ ಕೃಷಿ ಉತ್ಪನ್ನಗಳಿಗೆ ಬೆಲೆ ಇಲ್ಲದೆ ರೈತರು ಕಂಗಾಲು ಆಗಿದ್ದಾರೆ, ಆದರೆ ಬಿಜೆಪಿಯವರಿಗೆ ಯಾವುದು ಕಾಣುತ್ತಿಲ್ಲ, ಜನರಿಗೆ ತೆರಿಗೆಗಳನ್ನು ಯಥೆಚ್ಚವಾಗಿ ಹಾಕಿ ಸಾಮಾನ್ಯ ಜನತೆಯನ್ನು ಬೀದಿಗೆ ಹಾಕಿದ್ದಾರೆ, ಚುನಾವಣೆ ಬಂದಾಗ ಬಿಜೆಪಿಯವರು ಧರ್ಮದ ಹೆಸರನ್ನು ಹೇಳುತ್ತಾರೆ, ಕಾಂಗ್ರೆಸ್ ಸರಕಾರಗಳು ಎಲ್ಲ ಮೀಸಲಾತಿಗಳನ್ನು ನೀಡಿ ಸಮಾನ ಅಧಿಕಾರವನ್ನು ಜನತೆಗೆ ನೀಡಿದೆ. ನಾವು ಇಂದು ಕಾಂಗ್ರೆಸ್ ಪಕ್ಷದಿಂದ ಅನೇಕ ಪ್ರಯೋಜನವನ್ನು ಪಡೆದಿದ್ದೆವೆ, ಅದನ್ನು ಜನರಿಗೆ ಪುನಃ ನೆನಪು ಮಾಡುವ ಕೆಲಸ ಆಗಬೇಕಿದೆ ಎಂದರು.

ಸುಳ್ಯ ವಿಧಾನ ಸಭಾ ಕ್ಷೇತ್ರದ ಉಸ್ತುವಾರಿ ಸವಿತಾ ರಮೇಶ್ ಮಾತನಾಡಿ, ಸುಳ್ಯ ಕ್ಷೇತ್ರಕ್ಕೆ ಬಿಜೆಪಿಯವರು ಏನು ಮಾಡಿಲ್ಲ, ಡಿ.ವಿ ಸದಾನಂದ ಗೌಡರು ಮುಖ್ಯ ಮಂತ್ರಿ ಆಗಿದ್ದಾಗ ಅವರದ್ದೆ ಕ್ಷೇತ್ರಕ್ಕೆ ಏನು ಮಾಡಿದ್ದಾರೆ, ಈ ರಾಜ್ಯದಲ್ಲಿ ಕೆಲಸ ಮಾಡಲು ಆಗದ ಶಾಸಕ ಅಂದರೆ ಅಂಗಾರ ಮಾತ್ರ, ಅವರನ್ನು ಈ ಬಾರಿ ಗೆಲ್ಲಿಸಬೇಡಿ, ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಮೋದಿಯವರು ಉದ್ಯೋಗಗಳನ್ನು ಸೃಷ್ಟಿ ಮಾಡದೆ ಇರುವುದರಿಂದ ಯುವ ಜನತೆ ಕಂಗಲಾಗಿದ್ದಾರೆ ಎಂದ ಸವಿತಾ ರಮೇಶ್ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಎಲ್ಲ ಭಾಗ್ಯಗಳನ್ನು ನೀಡಿದ್ದಾರೆ, ಈ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಬೇಕೆಂದು ಅವರು ಹೇಳಿದರು.

ಜಿ.ಪಂ. ಸದಸ್ಯ ಪಿ.ಪಿ.ವರ್ಗೀಸ್ ಮಾತನಾಡಿ, ಸುಳ್ಯ ಕ್ಷೇತ್ರದಲ್ಲಿ ಡಾ. ರಘು ಮತ್ತು ಅಂಗಾರರವರು ಪಡೆಯುವ ಮತಗಳ ಅಂತರ ಕಡಿಮೆಯಾಗುತ್ತಿದೆ, ಈ ಬಾರಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಡಾ ರಘುರವರ ಗೆಲುವು ಖಚಿತ, ರಾಜ್ಯ ಕಾಂಗ್ರೆಸ್ ಈ ಹಿಂದೆ ನೀಡಿದ 165 ಪ್ರಣಾಳಿಕೆಯನ್ನು ಈಡೇರಿಸಿದ್ದಾರೆ, ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಖಚಿತ ಎಂದು ಹೇಳಿದರು.

ಕಾಂಗ್ರೆಸ್ ಅಭ್ಯರ್ಥಿ ಡಾ ರಘು, ಎಐಸಿಸಿಯ ಡಾ ಅಭಿಲಾಷ್, ಕಣಚ್ಚೂರು ಮೋನು, ಮಾತನಾಡಿದರು. ವೇದಿಕೆಯಲ್ಲಿ ವೆಂಕಟೇಶ್, ಜಿಲ್ಲಾ ಅಧ್ಯಕ್ಷ ಹರೀಶ್ ಕುಮಾರ್, ಜಿಲ್ಲಾ ಉಸ್ತುವಾರಿ ಯು.ಬಿ. ವೆಂಕಟೇಶ್, ಜಿ.ಪಂ. ಸದಸ್ಯ ಸವೋತ್ತಮ ಗೌಡ, ತಾ.ಪಂ. ಸದಸ್ಯರಾದ ಆಶಾ ಲಕ್ಷ್ಮಣ್, ಫಝಲ್ ಕೋಡಿಂಬಾಳ, ಗಣೇಶ್ ಕೈಕುರೆ, ಟಿ.ಎಂ. ಶಯಿದ್, ಮಾಜಿ ಶಾಸಕ ಕೆ. ಕುಶಲ, ಎ.ಸಿ. ಜಯರಾಜ್, ಮಾಜಿ ಜಿ.ಪಂ. ಸದಸ್ಯೆ ಕುಮಾರಿ ವಾಸುದೇವನ್, ಎಸ್. ಅಬ್ದುಲ್ ಖಾದರ್, ಸಿ.ಪಿಲಿಫ್, ಸೈಮನ್ ಸಿ.ಜೆ, ವಿಜಯ ಕುಮಾರ್ ರೈ ಕರ್ಮಾಯಿ, ಎಚ್.ಕೆ. ಇಲ್ಯಾಸ್, ಕೆ.ಪಿ.ತೋಮಸ್, ನೀಲಾವತಿ ಶಿವರಾಮ, ಉಷಾ ಅಂಚನ್, ವಿಜಯ ಕುಮಾರ್ ಸೊರಕೆ, ಸೆಭಾಸ್ಟಿಯನ್ ಶಿರಾಡಿ, ಡೇನಿಸ್ ಫೆರ್ನಾಂಡಿಸ್, ರಾಮಕೃಷ್ಣ ಹೊಳ್ಳಾರು, ಷೇರಿಪ್ ಎ.ಎಸ್. ಎ.ಸಿ. ಮ್ಯಾತ್ಯೂ, ಸುದೀರ್ ಕುಮಾರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಬಳಿಕ ಕಡಬ ಪೇಟೆಯಲ್ಲಿ ರೋಡ್ ಶೊ ನಡೆಸಿ ಮತ ಯಾಚನೆ ನಡೆಸಲಾಯಿತು. ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ದಿವಾಕರ ಗೌಡ ಸ್ವಾಗತಿಸಿ, ಪ್ರಚಾರ ಸಮಿತಿಯ ಅಧ್ಯಕ್ಷ ರಾಯ್ ಅಬ್ರಹಾಂ ವಂದಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English