ಮಂಗಳೂರು: ಉಳ್ಳಾಲ ವಿಧಾನಸಭಾ ಕ್ಷೇತ್ರದ ಕಲ್ಲಾಪು, ಮುಡಿಪು, ದೇರಲಕಟ್ಟೆ ಮುಂತಾದ ಕಡೆಗಳಲ್ಲಿ ಯು.ಟಿ.ಖಾದರ್ ಪರವಾಗಿ ಸರಕಾರಿ ಮುಖ್ಯ ಸಚೇತಕ ಐವನ್ ಡಿಸೋಜಾ ಮತಯಾಚನೆ ಮಾಡಿದರು. ರಾಜ್ಯದಲ್ಲಿ ಸಚಿವರಾಗಿ ಹಾಗೂ ಸಕ್ರಿಯ ರಾಜಕೀಯದಲ್ಲಿ ತೊಡಗಿಸಿಕೊಂಡಿರುವ ಯು.ಟಿ ಖಾದರ್ ಅವರು ರಾಜ್ಯಕ್ಕೆ 2000ಕ್ಕೂ ಅಧಿಕ ಕೋಟಿ ಅನುದಾನವನ್ನು ದೊರಕಿಸಿಕೊಟ್ಟಿದ್ದಾರೆ. ಈ ಮೂಲಕ ಮಂಗಳೂರು ಕ್ಷೇತ್ರಅಭಿವೃದ್ಧಿಪಡಿಸಿದ್ದು, ಯು.ಟಿ. ಖಾದರ್ ಅವರನ್ನು ಅತ್ಯಂತ ಹೆಚ್ಚಿನ ಮತದಿಂದ ಆರಿಸಬೇಕೆಂದು ಹೇಳಿ ಕಲ್ಲಾಪು ದೇರಲಕಟ್ಟೆ, ಮುಡಿಪು ಮುಂತಾದ ಕಡೆಗಳಲ್ಲಿ ತೆರಳಿ ಮತ ಯಾಚನೆ ಮಾಡಿದರು.
ಉಳ್ಳಾಲದಂತಹ ಕ್ಷೇತ್ರದಲ್ಲಿ ಖಾದರ್ ಮಾಡಿರುವ ಅಭಿವೃದ್ಧಿಯಿಂದಾಗಿ ಕ್ಷೇತ್ರದ ಜನರು ಖಾದರ್‌ರನ್ನು ಬೆಂಬಲಿಸುತ್ತಾರೆ. ಸಿದ್ದರಾಮಯ್ಯ ಅವರು ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿಯಾಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ನಗರ ಸಭೆ ಸದಸ್ಯಉಸ್ಮಾನ್ ಕಲ್ಲಾಪು. ಅಮೀರ್ ಕಿನ್ಯಾ, ಮುಸ್ತಫಾ, ನಗರಾಭಿವೃದ್ದಿ ಪ್ರಾಧಿಕಾರದ ಸದಸ್ಯ ಮುರಳಿ ಮುಂತಾದವರು ಉಪಸ್ಥಿತರಿದ್ದರು.
ಫೊಟೋ ಸುನಿಲ್ ಕುಮಾರ್ 01…02ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಸಿಪಿಎಂ ಅಭ್ಯರ್ಥಿ ಸುನೀಲ್ ಕುಮಾರ್ ಬಜಾಲ್ ಅವರನ್ನು ಬೆಂಬಲಿಸಿ ನಿನ್ನೆ ನಗರದ ಜಪ್ಪಿನಮೊಗರಿನಿಂದ ಬಜಾಲ್ ಪಕ್ಕಲಡ್ಕ ಮಾರ್ಗವಾಗಿ ಪೈಸಲ್ ನಗರದವರೆಗೆ 7 ಕಿ.ಲೋ. ಮೀಟರ್ ಅಂತರದ ಪಾದಯಾತ್ರೆ ನಡೆಯಿತು.ಈ ವೇಳೆ ಉಪಸ್ಥಿತರಿದ್ದ ಅಭ್ಯರ್ಥಿ ಸುನೀಲ್ ಕುಮಾರ್ ಬಜಾಲ್ ಅವರು ಮತ ಯಾಚನೆ ಮಾಡಿದರು. ಸಂತೋಷ್ ಬಜಾಲ್ ,ಯೋಗೀಶ್ ಜಪ್ಪಿನಮೊಗರು ಉದಯಚಂದ್ರ ರೈ , ದಿನೇಶ್ ಶೆಟ್ಟಿ, ಸುರೇಶ್ ಬಜಾಲ್, ಪ್ರೀತೇಶ್ ಬಜಾಲ್, ಧಿರಾಜ್ ಪಕ್ಕಲಡ್ಕ ಮುಂತಾದವರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English