ವಿದ್ಯುತ್‌ ಕ್ಷಾಮಕ್ಕೆ ಬಿಜೆಪಿ ಸರಕಾರದ ಆಡಳಿತ ವೈಫಲ್ಯವೇ ಮುಖ್ಯ ಕಾರಣಃ ಜೈನ್‌

11:47 AM, Friday, October 21st, 2011
Share
1 Star2 Stars3 Stars4 Stars5 Stars
(5 rating, 4 votes)
Loading...

congress protest

ಮಂಗಳೂರು: ವಿದ್ಯುತ್‌ ಸಮಸ್ಯೆಯ ವಿರುದ್ಧ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್‌ ಮತ್ತು ಯುವ ಕಾಂಗ್ರೆಸ್‌ ವತಿಯಿಂದ ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನಾ ಸಭೆ ನಡೆಯಿತು. ಮೂಲ್ಕಿ- ಮೂಡಬಿದಿರೆಯ ಶಾಸಕ ಕೆ. ಅಭಯಚಂದ್ರ ಜೈನ್‌ ಪ್ರತಿಭಟನೆಯ ಸಭೆಯನ್ನು ಉದ್ಘಾಟಿಸಿದರು.

ರಾಜ್ಯದಲ್ಲಿ ಉಂಟಾಗಿರುವ ವಿದ್ಯುತ್‌ ಕ್ಷಾಮಕ್ಕೆ ಬಿಜೆಪಿ ಸರಕಾರದ ಆಡಳಿತ ವೈಫಲ್ಯವೇ ಮುಖ್ಯ ಕಾರಣ. ಅಧಿಕಾರಕ್ಕೆ ಬರುವ ಮೊದಲು ದಿನದ 24 ಗಂಟೆ ಕಾಲವೂ ವಿದ್ಯುತ್‌ ಪೂರೈಕೆ ಮಾಡುವುದಾಗಿ ಹೇಳಿ ಅಧಿಕಾರಕ್ಕೆ ಬಂದ ಬಿಜೆಪಿ ಸರಕಾರ ಕಳೆದ 5 ವರ್ಷಗಳಲ್ಲಿ ರಾಜ್ಯದ ಜನರನ್ನು ಕತ್ತಲಲ್ಲಿ ಇರಿಸಿದೆ ಎಂದರು.

ರಾಜ್ಯದಲ್ಲಿ ಇದುವರೆಗೆ ಒಂದೇ ಒಂದು ಯೂನಿಟ್‌ ಹೆಚ್ಚುವರಿ ವಿದ್ಯುತ್‌ ಉತ್ಪಾದಿಸಿಲ್ಲ. ಬದಲಾಗಿ ವಿದ್ಯುತ್‌ ದರವನ್ನು ಯೂನಿಟ್‌ಗೆ 1.25 ಏರಿಕೆ ಮಾಡುವ ಮೂಲಕ ಜನರ ಲೂಟಿಗೆ ಮುಂದಾಗಿದೆ ಎಂದು ಅಭಯಚಂದ್ರ ಜೈನ್‌ ಹೇಳಿದರು.

ಬಿಜೆಪಿ ಪರ್ಸಂಟೇಜ್‌ ಮತ್ತು ಕಮಿಷನ್‌ ವ್ಯವಹಾರದಲ್ಲಿಯೇ ಕಾಲ ಕಳೆಯುತ್ತಿದೆ. ಬಿಜೆಪಿ ರಾಜ್ಯ ಅಧ್ಯಕ್ಷರಾಗಿರುವ ಕೆ. ಎಸ್‌. ಈಶ್ವರಪ್ಪ ಅವರು ಈ ಹಿಂದೆ ಇಂಧನ ಸಚಿವರಾಗಿದ್ದಾಗ ಕಲ್ಲಿದ್ದಲು ಖರೀದಿಯಲ್ಲಿ ಕಮಿಷನ್‌ ವ್ಯವಹಾರ ನಡೆಸಿದ್ದಾರೆ ಎಂದು ಅಭಯಚಂದ್ರ ಜೈನ್‌ ಆರೋಪಿಸಿದರು.

ವಿದ್ಯುತ್‌ ಸಮಸ್ಯೆಯನ್ನು ಪ್ರತಿಭಟಿಸಿ ಶುಕ್ರವಾರ ಸಂಜೆ 7 ಗಂಟೆಗೆ ಮಂಗಳೂರು ಮಹಾನಗರ ಪಾಲಿಕೆ ಕಚೇರಿ ಎದುರು ದೊಂದಿ ಉರಿಸಿ ಪ್ರತಿಭಟನೆ ನಡೆಸಲಾಗುವುದು. “ವಿದ್ಯುತ್‌ ಕೊಡಿ ಇಲ್ಲವೇ ಅಧಿಕಾರ ಬಿಟ್ಟು ತೊಲಗಿ’ ಎಂಬ ಘೋಷಣೆಯೊಂದಿಗೆ ಈ ಕಾರ್ಯಕ್ರಮ ನಡೆಯುವುದು ಎಂದು ಐವನ್‌ ಡಿ’ಸೋಜಾ ತಿಳಿಸಿದರು.

ಕಾಂಗ್ರೆಸ್‌ ನಾಯಕರಾದ ಇಬ್ರಾಹಿಂ ಕೋಡಿಜಾಲ್‌, ಫಾರೂಕ್‌ ಉಳ್ಳಾಲ್‌, ಪದ್ಮನಾಭ ನರಿಂಗಾನ, ಎ. ಸುರೇಶ್‌ ಶೆಟ್ಟಿ, ಮಿಥುನ್‌ ರೈ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಬಿ.ಎ. ಮೊದಿನ್‌ ಬಾವಾ, ನಾಗೇಂದ್ರ ಕುಮಾರ್‌, ವಿಜಯ ಕುಮಾರ್‌ ಸೊರಕೆ, ಅಬ್ಟಾಸ್‌ ಅಲಿ, ಶ್ರೀರಾಮ ಪಕ್ಕಳ, ಲ್ಯಾನ್ಸ್‌ಲೊಟ್‌ ಪಿಂಟೊ, ಡೆನಿಸ್‌ ಡಿ’ಸಿಲ್ವಾ, ಸಂತೋಷ್‌ ಶೆಟ್ಟಿ, ಟಿ.ಕೆ. ಸುಧೀರ್‌, ಪ್ರವೀ‌ಣ್‌ ಚಂದ್ರ ಆಳ್ವ, ಯತೀಶ್‌, ಅಲ್ತಾಫ್‌, ರಕ್ಷಿತ್‌ ಶೆಟ್ಟಿ, ಪ್ರದೀಪ್‌, ಎ.ಸಿ. ವಿನಯರಾಜ್‌, ಮೆರಿಲ್‌ ರೇಗೊ, ಡೋಲ್ಫಿ ಸಿಕ್ವೇರಾ, ಬಾಜಿಲ್‌ ಡಿ’ಸೋಜಾ, ಬಿಲಾಲ್‌ ಮೊದಿನ್‌, ಗುಲ್ಜಾರ್‌ ಭಾನು, ಮಮತಾ ಶೆಣೈ ಮುಂತಾದವರು ಉಪಸ್ಥಿತರಿದ್ದರು.

1 ಪ್ರತಿಕ್ರಿಯೆ - ಶೀರ್ಷಿಕೆ - ವಿದ್ಯುತ್‌ ಕ್ಷಾಮಕ್ಕೆ ಬಿಜೆಪಿ ಸರಕಾರದ ಆಡಳಿತ ವೈಫಲ್ಯವೇ ಮುಖ್ಯ ಕಾರಣಃ ಜೈನ್‌

  1. todpebsqcxi, xkgsnrlxpyvq.com/

    bgvRve ioycxjmnltex, [url=http://atzowzdbkzfv.com/]atzowzdbkzfv[/url], [link=http://xzwbkawrkoio.com/]xzwbkawrkoio[/link], http://rjubjsxrqcjm.com/

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English