ಜನಮನ್ನಣೆ ಪಡೆದ ಜನನಾಯಕ ವಸಂತ ಬಂಗೇರ

10:51 AM, Friday, May 11th, 2018
Share
1 Star2 Stars3 Stars4 Stars5 Stars
(No Ratings Yet)
Loading...

vasanth-bangeraಮಂಗಳೂರು: ಐದು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಬೆಳ್ತಂಗಡಿಯ ವಸಂತ ಬಂಗೇರ ಇನ್ನು ಚುನಾವಣೆಯಲ್ಲಿ ಸ್ಪರ್ಧೆಮಾಡದಿರಲು ನಿರ್ಧರಿಸಿದ್ದರು. ಆದರೆ ಕಾರ್ಯಕರ್ತರ ಒತ್ತಡ ಮತ್ತು ಸ್ವತಃ ಮುಖ್ಯಮಂತ್ರಿಸಿದ್ದರಾಮಯ್ಯ ಅವರೇ ಸ್ಪರ್ಧಿಸುವಂತೆ ಒತ್ತಾಯಿಸಿದ ಮೇರೆಗೆ ನಿರ್ಧಾರ ಬದಲಾಯಿಸಿದ, ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ವಸಂತ ಬಂಗೇರ ಮತ್ತೆ ನಾಮಪತ್ರ ಸಲ್ಲಿಸಿದ್ದಾರೆ.

ರಾಜಕಾರಣದಲ್ಲಿ ಇಂಥ ವ್ಯಕ್ತಿಗಳೂ ಅಪರೂಪ, ಈ ರೀತಿ ವರ್ಚಸ್ಸು ಉಳಿಸಿಕೊಂಡವರೂವಿರಳ. ಅಧಿಕಾರವೋ ವೈಯಕ್ತಿಕ ಪ್ರತಿಷ್ಠೆಯೋ ಮತ್ಯಾವ ಕಾರಣಕ್ಕೋ ಪಕ್ಷಾಂತರ ಮಾಡುತ್ತಾರೆ.ಅಂಥವರ ರಾಜಕೀಯ ಭವಿಷ್ಯ ಆರಕ್ಕೆ ಏರಿದ್ದೂ ಇದೆ. ಮೂರಕ್ಕೆ ಕುಸಿದಿದ್ದೂ ಇದೆ. ಆದರೆದಕ್ಷಿಣ ಕನ್ನಡ ಜಿಲ್ಲೆಯ ಈ ರಾಜಕಾರಣಿ ಸಂಪೂರ್ಣ ಭಿನ್ನ.ರಾಜ್ಯ ಪ್ರಮುಖ ಮೂರು ರಾಜಕೀಯ ಪಕ್ಷಗಳಲ್ಲಿ ಅಭ್ಯರ್ಥಿಯಾಗಿ ಚುನಾವಣೆಗೆ ನಿಂತು, ಗೆಲವುಸಾಧಿಸಿ ವಿಶಿಷ್ಟ ದಾಖಲೆಯನ್ನು ಬರೆದಿದ್ದಾರೆ. ಈ ರೀತಿ ವಿಶಿಷ್ಟ ದಾಖಲೆಯನ್ನುಹೊಂದಿರುವ ರಾಜಕಾರಣಿ ಬೆಳ್ತಂಗಡಿಯ ಶಾಸಕ ವಸಂತ ಬಂಗೇರ.

ಸದ್ಯ ಕಾಂಗ್ರೆಸ್ ನಶಾಸಕರಾಗಿರುವ ಅವರು, ಈ ಹಿಂದೆ ಜೆಡಿಎಸ್ ಹಾಗೂ ಬಿಜೆಪಿ ಎರಡರಿಂದಲೂ ಚುನಾವಣೆಗೆ ಸ್ಪರ್ಧಿಸಿ ಗೆಲುವನ್ನು ಸಾಧಿಸಿದ್ದಾರೆ.1983 ಮತ್ತು 1985ರಲ್ಲಿ ವಸಂತ ಬಂಗೇರ ಬಿಜೆಪಿಯಿಂದ ಸ್ಪರ್ಧಿಸಿ, ಗೆಲುವು ಸಾಧಿಸಿದ್ದರು. ಆ ನಂತರ 1989ರಲ್ಲಿ ನಡೆದ ಚುನಾವಣೆಯಲ್ಲಿ ಪಕ್ಷೇತರರಾಗಿ ನಿಂತ ಬಂಗೇರ ಸೋಲನ್ನು ಅನುಭವಿಸಿದರು. 1994ರಲ್ಲಿ ಜನತಾದಳದ ಅಭ್ಯರ್ಥಿಯಾಗಿ ನಿಂತು ಈ ಕ್ಷೇತ್ರದಲ್ಲಿ ಗೆಲುವು ಸಾಧಿಸಿದರು.

1999 ಮತ್ತು 2004ರಲ್ಲಿ ಈ ಕ್ಷೇತ್ರ ಬಿಜೆಪಿ ಪಾಲಾಗಿತ್ತು. ಜೆಡಿಎಸ್ ನಿಂದಸ್ಪರ್ಧಿಸಿದ ವಂಸತ ಬಂಗೇರ ಅವರನ್ನು ಮೂರನೇ ಸ್ಥಾನಕ್ಕೆ ತಳ್ಳಿ, ಅವರ ಸಹೋದರ ಪ್ರಭಾಕರ ಬಂಗೇರ ಗೆಲುವು ಸಾಧಿಸಿದ್ದರು. ಆ ನಂತರ 2008ರ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದಸ್ಪರ್ಧಿಸಿದ್ದ ವಸಂತ ಬಂಗೇರ ಸಹೋದರನನ್ನು ಸೋಲಿಸಿದರು.

2013ರಲ್ಲಿ ವಸಂತ ಬಂಗೇರ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಬಿಜೆಪಿಯ ರಂಜನ್ ಗೌಡ ಅವರನ್ನು ಸೋಲಿಸಿ, ಶಾಸಕರಾಗಿ ಆಯ್ಕೆಯಾದರು. ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಹೀಗೆಮೂರು ಪಕ್ಷಗಳಿಂದಲೂ ಗೆದ್ದು ವಿಶೇಷ ದಾಖಲೆ ನಿರ್ಮಿಸಿದವರು ವಸಂತ ಬಂಗೇರ. ಬಿಜೆಪಿಯಿಂದಎರಡು ಬಾರಿ ಶಾಸಕರಾಗಿ, ಬಳಿಕ ಜೆಡಿಎಸ್ ಸೇರ್ಪಡೆಗೊಂಡು ಒಮ್ಮೆ ಶಾಸಕರಾಗಿ ಆಯ್ಕೆಯಾಗಿದ್ದರು.

94ಸಿ, 94ಸಿಸಿ ಕಾರ್ಯಕ್ರಮವನ್ನು ರಾಜ್ಯಾದ್ಯಂತಜಾರಿಗೊಳಿಸಿದ್ದರಿಂದ ಸಾವಿರಾರು ಕುಟುಂಬಗಳಿಗೆ ನಿವೇಶನ ಮತ್ತು ಮನೆ ನಿರ್ಮಿಸಲುಸಹಾಯಕವಾಗಿದೆ. ಮಹಿಳೆಯರಿಗೆ ಸ್ವಉದ್ಯೋಗಕ್ಕೆ 3ಲಕ್ಷ ರೂ. ತನಕ ಬಡ್ಡಿ ರಹಿತ ಸಾಲನೀಡಿರುವುದು ದೊಡ್ಡ ಕೊಡುಗೆಯಾಗಿದೆ.

ತಾಲೂಕಿನಲ್ಲಿ 21ಸಾವಿರಕ್ಕೂ ಅಧಿಕ 94ಸಿಹಾಗೂ 35ಸಾವಿರಕ್ಕೂ ಅಧಿಕ ಅಕ್ರಮ ಸಕ್ರಮದಲ್ಲಿ ಜಮೀನು ಮಂಜೂರು ಮಾಡಿಸಿದ್ದು ಯಾವುದೇಪಕ್ಷಭೆದವಿಲ್ಲದೆ ಈ ಕಾರ್ಯ ಮಾಡಿದ್ದೇನೆ. ಒಂದು ಸಾವಿರ ಕೋಟಿಗೂ ಅಧಿಕ ಅನುದಾನತಾಲೂಕಿಗೆ ಮಂಜೂರುಗೊಂಡಿದ್ದು ಪ್ರತೀ ಹಳ್ಳಿ ಹಳ್ಳಿಗಳ ರಸ್ತೆ, ಸೇತುವೆ, ಕಟ್ಟಡಗಳುನಿರ್ಮಾಣಗೊಂಡಿದೆ ಎಂದು ವಿವರಿಸಿದರು.

ಇಂತಹ ಅಭಿವೃದ್ದಿಯನ್ನು ನೋಡಲಾರದೆ ಬಿಜೆಪಿಯವರು ಆರೋಪಗಳನ್ನು ಮಾಡಲುಮುಂದಾಗುತ್ತಿದ್ದಾರೆ.

ಆದರೆ ತಾಲೂಕಿನ ಜನರಿಗೆ ನಾನು ಮಾಡಿರುವ ಅಭಿವೃದ್ದಿ ಕಾರ್ಯ ಏನುಎಂದು ತಿಳಿದಿದೆ.ವಸಂತ ಬಂಗೇರ ರಾಜ್ಯ ಕಂಡ ಸಜ್ಜನ ರಾಜಕಾರಣಿ. ಅವರು ಜನರ ಸೇವೆ ಮಾಡಿದ್ದಕ್ಕಾಗಿ ಋಣತೀರಿಸುವ ಕೆಲಸ ಮತದಾರರು ಮಾಡಬೇಕು. ಬಂಗೇರರಲ್ಲಿ ಇರುವ ಗಂಬೀರತೆಯಿಂದಾಗಿ , ಕೆಲಸ ಮಾಡದಅಧಿಕಾರಿಗಳಿಗೆ ಗರಂ ಆಗುವ ಸ್ವಭಾವದಿಂದಾಗಿ ಜನ ಅವರನ್ನು ಮೆಚ್ಚಿಕೊಂಡಿದ್ದಾರೆ ಎನ್ನುತ್ತಾರೆ ಅವರ ಹಿತೈಷಿಗಳು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English