ಮಂಗಳೂರು: ಮಾಜಿ ಶಾಸಕ ದಿವಂಗತ ಯು.ಟಿ.ಫರೀದ್ ಎಂಬ ಕರಾವಳಿಯ ಜನನಾಯಕ, ಬದುಕಿನುದ್ದಕ್ಕೂ ಕಳಂಕವಿಲ್ಲದೆ ಬಾಳಿದ ಶುದ್ಧಹಸ್ತದ ಹರಿಕಾರ.ಕಾಂಗ್ರೆಸ್ ಪಕ್ಷದ ನಿಷ್ಠೆಯ ಅನುಯಾಯಿ, ಕಾರ್ಯಕರ್ತನಾಗಿ ಸಲ್ಲಿಸಿದ ಸೇವೆಯ ಫಲವಾಗಿ ಅವರ ಮಗ ಯು.ಟಿ.ಖಾದರ್ ಚಿಕ್ಕ ಪ್ರಾಯದಲ್ಲೇ ಶಾಸಕರಾಗಿ, ಸಚಿವರಾಗಿ ಜನಪ್ರಿಯರಾದವರು.
ರಾಜಕೀಯದಲ್ಲಿ ಮೇಲೇರಲು ಕಾಲೆಳೆಯುವ, ಕಾಲು ಹಿಡಿಯುವ, ಕಾಲು ಕೊಡುವ ಜನರಿದ್ದಾರೆ. ಆದರೆಯು.ಟಿ.ಫರೀದ್ ಅಂತಹವರಾಗಿರಲಿಲ್ಲ. ಪಾಲಿಗೆ ಬಂದುದು ಪಂಚಾಮೃತ. ಪಕ್ಷಸೇವೆ, ಜನಸೇವೆಯೇಪ್ರಧಾನ. ಯು.ಟಿ.ಫರೀದರ ಈ ಉದಾತ್ತ ಗುಣವು ಅವರನ್ನು ಕಾಂಗ್ರೆಸ್ ನಾಯಕರ ಮನದಲ್ಲಿಅಚ್ಚಳಿಯದ ಛಾಪು ಮೂಡಿಸಿತ್ತು.ನಾಲ್ಕು ಬಾರಿ ಶಾಸಕರಾಗಿದ್ದಾಗಲೂ ಸರಕಾರ ಕಾಂಗ್ರೆಸ್ ನದ್ದೇ ಆಗಿತ್ತು. ಆದರೂಸಚಿವ ಸ್ಥಾನಕ್ಕಾಗಿ ಹಾತೊರೆಯಲಿಲ್ಲ. ಸಚಿವ ಸ್ಥಾನ ಕೊಡಲಿಲ್ಲವೆಂದು ಅಸಮಾಧಾನ ತೋರಲೂಇಲ್ಲ.
ಆಹಾರ ಸಚಿವ ಯು.ಟಿ.ಖಾದರ್ ಕೂಡಾ ತಂದೆಯವರ ಇದೇ ಗುಣದವರು. ಅಧಿಕಾರ ಅವರನ್ನು ಹುಡುಕಿಕೊಂಡು ಬಂದಿತ್ತೇ ವಿನಃ ಅವರೆಂದೂ ಅಧಿಕಾರ ಹುಡುಕಿಕೊಂಡು ಹೋದವರಲ್ಲ.
ಒಟ್ಟಿನಲ್ಲಿ ಯು.ಟಿ.ಖಾದರ್ ಅವರದ್ದು ಕಾಂಗ್ರೆಸ್ ಪರಂಪರೆ. ಅಪ್ಪ ಒಟ್ಟು ಹದಿನೆಂಟುವರ್ಷ ವಿಧಾನಸಭೆಯಲ್ಲಿ ಕ್ಷೇತ್ರವನ್ನು ಪ್ರತಿನಿಧಿಸಿದ್ದರೆ ಮಗ ಯು.ಟಿ.ಕೆ. ಹದಿನೇಳುವರ್ಷಗಳ ಕಾಲ ಪ್ರತಿನಿಧಿಸಿದ್ದಾರೆ. ಹಾಗೆ ತಂದೆ – ಮಗರಿಬ್ಬರು ಒಟ್ಟು ಮುವತ್ತೈದು ವರ್ಷವಿಧಾನಸಭೆಯಲ್ಲಿ ಪ್ರತಿನಿಧಿಯಾಗಿ ಕ್ಷೇತ್ರದ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ ಒಂದೇಪಕ್ಷದ ನಿಷ್ಠಾವಂತ ಅನುಯಾಯಿಗಳಾಗಿ! ಇದೊಂದು ದಾಖಲೆ.
ಇದೀಗ ಇನ್ನೂ ಐದು ವರ್ಷ ಖಾದರ್ ಅವರು ಕ್ಷೇತ್ರವನ್ನು ಪ್ರತಿನಿಧಿಸಿ ನಲ್ವತ್ತುತುಂಬಲಿರುವುದು ಸರಿಸುಮಾರು ಖಾತರಿಯಾಗಿದೆ. ಕ್ಷೇತ್ರದಲ್ಲಿ ಖಾದರ್ ಹವಾ ಆ ಪರಿಬೆಳೆದಿದೆ. ಬೆಳೆಯುತ್ತಲೇ ಇದೆ. ಈ ಬಾರಿ ಕಳೆದ ಬಾರಿಗಿಂತ ಅವರ ಜಯ ಹಲವು ಕಾರಣಗಳಿಂದಅನಾಯಾಸವಾಗಿದೆ.
ಸಿದ್ದರಾಮಯ್ಯನವರು ತನ್ನ “ನುಡಿದಂತೆ ನಡೆದ” ಅಮೋಘ ಆಡಳಿತದ ಮೂಲಕ ರಾಜ್ಯದಲ್ಲಿ ಕ್ರಿಯೇಟ್ ಮಾಡಿರುವ ಹವಾ.ಯು.ಟಿ.ಖಾದರ್ ಕ್ಷೇತ್ರದಲ್ಲಿ ಜಾತಿ ಧರ್ಮ ಪಕ್ಷ ನೋಡದೇ ಎಲ್ಲರನ್ನೂ ಸಮಾನಾಗಿನೋಡಿ ಕೆಲಸ ಮಾಡಿರುವುದು. ಸರ್ವ ಧರ್ಮೀಯರ ಪ್ರೀತಿಗೆ ಪಾತ್ರರಾಗಿರುವುದು. ಯುಟಿಕೆಸರಳತೆಯಿಂದ ಕಳೆದ ಬಾರಿ ಬಿಜೆಪಿಗೆ ಹಾಕಿದ್ದ ಮತದಾರರು ಈ ಬಾರಿ ಕಾಂಗ್ರೆಸ್ ಒಲವು ತೋರುತ್ತಿರುವುದು ಖಾದರ್ ಖದರ್ ಹೆಚ್ಚಿಸಿದೆ.
ಕೋಲಾರ ಮತ್ತು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಯು.ಟಿ. ಖಾದರ್ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೇಮಕ ಮಾಡಿದ್ದರು. ಅದು ಖಾದರ್ ಮೇಲಿರುವ ಮುಖ್ಯಮಂತ್ರಿಯವರ ವಿಶ್ವಾಸ.
ಚಾಮರಾಜನಗರಜಿಲ್ಲಾ ಉಸ್ತುವಾರಿ ಸಚಿವರಾಗಿ ಎಚ್.ಸಿ ಮಹದೇವ ಪ್ರಸಾದ್ ಅವರ ದಿಢೀರ್ ನಿಧನದಹಿನ್ನೆಲೆ ಯು, ಟಿ. ಖಾದರ್ ಅವರನ್ನು ಚಾಮರಾಜನಗರದ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿನೇಮಕ ಮಾಡಲಾಗಿತ್ತು. ಯು. ಟಿ .ಖಾದರ್ ಪ್ರಸ್ತುತ ಆಹಾರ ಮತ್ತು ನಾಗರಿಕ ಸರಬರಾಜುಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದು ಕೋಲಾರ ಜಿಲ್ಲೆಯ ಉಸ್ತುವಾರಿ ಸಚಿವರಾಗಿಯೂಆಗಿದ್ದರು.
Click this button or press Ctrl+G to toggle between Kannada and English