ಬಿಜೆಪಿಯ ನಿಷ್ಠಾವಂತ ಕಟ್ಟಾಳು ಸಂಜೀವ ಮಠಂದೂರು

11:48 AM, Friday, May 11th, 2018
Share
1 Star2 Stars3 Stars4 Stars5 Stars
(No Ratings Yet)
Loading...

sanjeeva-matandoorಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿಯ ಅಭ್ಯರ್ಥಿಯಾಗಿ ಮತ್ತೊಮ್ಮೆ ಕಣಕ್ಕಿಳಿದಿದ್ದಾರೆ ಸಂಜೀವ ಮಠಂದೂರು. ಕಳೆದ ಬಾರಿ ಶಕುಂತಳಾ ಶೆಟ್ಟಿ ಬಿಜೆಪಿ ತೊರೆದು ಕಾಂಗ್ರೆಸ್ ಅಭ್ಯರ್ಥಿ ಆದಾಗ ಬಿಜೆಪಿ ಮಠಂದೂರುಅವರನ್ನು ಅಭ್ಯರ್ಥಿ ಮಾಡಿತ್ತು.

ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷ ಆಗಿರುವ ಸಂಜೀವ ಮಠಂದೂರು ಒಬ್ಬ ಅದರ್ಶ ಕೃಷಿಕ ,ಒಬ್ಬ ಪ್ರಾಮಾಣಿಕ ವ್ಯಕ್ತಿತ್ವ ಉಳ್ಳವರು,ಕಾರ್ಯದಕ್ಷತೆಯನ್ನು ಮೈಗೂಡಿಸಿಕೊಂಡವರು.ಮಾತು ಕಡಿಮೆ‌ ಕೆಲಸ ಜಾಸ್ತಿ ಮಾಡುವ ನಾಯಕ.

ಗ್ರಾಮ ಪಂಚಾಯತ್ ನಿಂದ ಇಲ್ಲಿಯವರೆಗೆ ಬಿಜೆಪಿಯ ಮುಖಾಂತರ ಹಿಂದುತ್ವದ ಪಕ್ಷ ಬಿಜೆಪಿಯನ್ನು ಸಂಘಟನೆ ಮಾಡಿದವರು. ರಾಜ್ಯದಲ್ಲಿ ಬಿಜೆಪಿ ಸೋತ ಕಠಿಣ ಸಂದರ್ಭದಲ್ಲಿ,ಸುಳ್ಯ ಹೊರತು ಪಡಿಸಿ ಉಳಿದೆಲ್ಲಾಕ್ಷೇತ್ರಗಳಲ್ಲಿ ಬಿಜೆಪಿ ಸೋಲು ಅನುಭವಿಸಿದಾಗ ಜಿಲ್ಲಾ ಬಿಜೆಪಿಯ ಜವಾಬ್ದಾರಿ ತೆಗೆದುಕೊಂಡು ಜಿಲ್ಲಾ ಬಿಜೆಪಿ ಅಧ್ಯಕ್ಷ ಅದರು . ಜಿಲ್ಲೆಯ ಜಿಲ್ಲಾ ಬಿಜೆಪಿ ಅಧ್ಯಕ್ಷ ಅದಮೇಲೆ ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮ ಪಂಚಾಯತ್ ಗಳಲ್ಲಿ,ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಇಂದು ಬಿಜೆಪಿ ಅಧಿಕಾರದಲ್ಲಿ ಇದೆ.

ಮಾಧ್ಯಮಗಳ ಪ್ರಚಾರದಿಂದ ದೂರು ಇರುವ ಎಲ್ಲಿಯೂ ತನ್ನ ನೇತೃತ್ವ ಎಂದು ಬಿಂಬಿಸಲು ಅಥವಾ ಪ್ರಚಾರ ಮಾಡಲು ಹೋಗದೆ ಪಕ್ಷ ನಿಷ್ಠನಾಗಿ ಪ್ರಾಮಾಣಿಕವಾಗಿ ಸಂಘಟನೆ ಇವರ ಗುಣ. ಕಳೆದ ಮೂವತ್ತು ವರ್ಷಗಳಿಂದ ಬಿಜೆಪಿ ಗಾಗಿ ತನ್ನ ಸರ್ವಸ್ವವನ್ನೂ ಬಿಜೆಪಿಗಾಗಿ ಯಾವುದೇ ಪ್ರತಿ ಫಲ‌ ಅಪೇಕ್ಷೆ ಇಲ್ಲದೆ ಪಕ್ಷದ ಕೆಲಸವನ್ನು ಮಾಡಿದ ಒಬ್ಬ ದಕ್ಷ ಪ್ರಾಮಾಣಿಕ ಸರಳ ಸಜ್ಜನಿಗ.
ಬಿಜೆಪಿಯಿಂದ ಅಜಾತ ಶತ್ರು ಸಂಜೀವ ಮಠಂದೂರು ಅವರಿಗೆ ಟಿಕೆಟ್ನೀಡಲಾಗಿದ್ದು, ಕಳೆದ ಬಾರಿಯ ಚುನಾವಣೆಯಲ್ಲಿ ಅನೇಕ ಗೊಂದಲಗಳು ಹಾಗೂ ರಾಜ್ಯಾದ್ಯಂತ ಕಂಡುಬಂದ ಬಿಜೆಪಿ ವಿರೋಧಿ ಗಾಳಿಯಿಂದಾಗಿ ಬಿಜೆಪಿ ಭದ್ರ ಕೋಟೆ ಪುತ್ತೂರಿನಲ್ಲಿ ಬಿಜೆಪಿಅಭ್ಯರ್ಥಿ ಸಂಜೀವ ಮಠಂದೂರು ಅವರು ಅಲ್ಪ ಮತದಿಂದ ಸೋಲಬೇಕಾಯಿತು. ಸೋಲೇ ಗೆಲುವಿನಮೆಟ್ಟಿಲು ಎಂಬ ಮಾತಿನಂತೆ ಕಳೆದ ಬಾರಿಯ ಸೋಲನ್ನು ಗೆಲುವಾಗಿ ಪರಿವರ್ತಿಸಲು ಕಾರ್ಯಕರ್ತರು ಶ್ರಮ ವಹಿಸಲಿದ್ದಾರೆ.

ಬಿಜೆಪಿ ಅಭ್ಯರ್ಥಿ ಸಂಜೀವ ಮಠಂದೂರು ನಿರ್ಮಲ ಮನಸ್ಸಿನ ಸ್ವಚ್ಚ ರಾಜಕಾರಣಿ.ತನ್ನ ಸಾಧನೆಯನ್ನೂ ಎಲ್ಲೂ, ಯಾರ ಬಳಿಯೂ ಹೇಳಿಕೊಳ್ಳದೆ ಕಾರ್ಯಕರ್ತರ ಪಾಲಿಗೆಗುಪ್ತಗಾಮಿನಿಯಾದವರು. ಜಾತಿ ರಾಜಕಾರಣದ ಕೊಳಕುತನವನ್ನು ತನ್ನ ಹತ್ತಿರವೂಬಿಟ್ಟುಕೊಳ್ಳದವರು. ಕಾರ್ಯಕರ್ತರ ಪಾಲಿಗೆ ನಗುಮೊಗದ ಸೌಮ್ಯ ಗುಣದವರಾದರೂ ಅಧಿಕಾರಿವರ್ಗದವರೊಂದಿಗೆ ಕಠಿಣವಾದಿ. ಜನರಿಗೆ ಆಗ ಬೇಕಾದ ಕೆಲಸದಲ್ಲಿ ರಾಜಿ ಮಾಡಿಕೊಳ್ಳುವವರಲ್ಲ.ವಿವಿಧ ಇಲಾಖೆಗಳೊಂದಿಗೆ ಅಧಿಕಾರಯುತವಾಗಿ ವರ್ತಿಸಿ ಜನ ಸೇವೆ ಮಾಡುವ ಛಲಗಾರ.

ಈ ಹಿಂದೆ ಶಕುಂತಳಾ ಶೆಟ್ಟಿಯ ಬಂಡಾಯದಿಂದ ಬಿಜೆಪಿಗೆಕಠಿಣ ಪರೀಕ್ಷೆ ಎದುರಾಗಿತ್ತು. ಆ ಸಂದರ್ಭದಲ್ಲಿ ಸಂಜೀವ ಮಠಂದೂರು ಒಬ್ಬ ಸೈನಿಕನರೀತಿಯಲ್ಲಿ ಹಗಳಿರುರುಳು ಹೋರಾಡಿದರು. ಅಕ್ಕನ ಗೆಲುವಿಗೆ ಸರ್ವವನ್ನೂ ಸಮರ್ಪಿಸಿದ ತಮ್ಮನಹಾಗೆ ದುಡಿದರು. ಪುತ್ತೂರು ವಿಧಾನಸಭಾ ವ್ಯಾಪ್ತಿಯ ಎಲ್ಲಾ ಗ್ರಾಮಗಳ ಪ್ರತಿಯೊಂದುಬೂತುಗಳಿಗೆ ಮಲ್ಲಿಕಾ ಪ್ರಸಾದ್‌ರವರನ್ನು ಪರಿಚಯಿಸಿ ಅವರಿಗಾಗಿ ಮತಭಿಕ್ಷೆ ಕೇಳಿದರು.

ಈಸಂದರ್ಭದಲ್ಲಿ ಅವರು ತನ್ನ ಮನೆ, ಸಂಸಾರ ಇತ್ಯಾದಿಗಳನ್ನು ಬದಿಗಿಟ್ಟು ತನ್ನನ್ನು ತಾನುಬಿಜೆಪಿಯ ಗೆಲುವಿಗಾಗಿ ಸಮರ್ಪಿಸಿಕೊಂಡರು. ಈ ಎಲ್ಲಾ ನಿಸ್ವಾರ್ಥ ಸೇವೆ ಹಾಗೂತ್ಯಾಗಕ್ಕಾಗಿ 2013 ರ ವಿಧಾನಸಭಾ ಚುನಾವಣೆಯಲ್ಲಿ ಪುತ್ತೂರಿನ ಸರ್ವಸಮ್ಮತಅಭ್ಯರ್ಥಿಯಾಗಿ ಆಯ್ಕೆಯಾದರು. ಆದರೆ ಹಲವಾರು ಗೊಂದಲಗಳಿಂದಾಗಿ ಅಜಾತ ಶತ್ರು ಸಂಜೀವಮಠಂದೂರು ಸೋಲಬೇಕಾಯಿತು.ಎಲ್ಲರೂ ಸೋಲಿನಿಂದ ಕಂಗೆಟ್ಟು ಹತಾಶರಾಗಿ ಕೂತರೆ ಸಂಜೀವಣ್ಣಮಾತ್ರ ಮರುದಿವಸವೇ ಪಕ್ಷದ ಕಚೇರಿಯಲ್ಲಿ ಹಾಜರಾಗಿ ಆ ದಿನದಿಂದಲೇ ಪಕ್ಷ ಚಟುವಟಿಕೆಆರಂಭಿಸಿದ್ದರು. ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸಂಚರಿಸಿ ಬಿಜೆಪಿಯನ್ನು ಮತ್ತೊಮ್ಮೆಬೇರು ಮಟ್ಟದಿಂದ ಕಟ್ಟಲು ಪ್ರಯತ್ನಿಸಿ ಅದರಲ್ಲಿ ಸಫಲರಾದರು.

ಎಲ್ಲರ ಗೆಲುವಿನಲ್ಲೂ ಪ್ರಮುಖ ಪಾತ್ರರಾದ ಮಠಂದೂರು ಸ್ವತಃ ತಾನು ಗೆಲ್ಲಲಾಗದೆಹೋದದ್ದು ವಿಪರ್ಯಾಸವೇ ಸರಿ. ಆದರೆ ಈ ಬಾರಿಯ ಚುನಾವಣೆಯಲ್ಲಿ ಸಂಜೀವಣ್ಣ ಗೆಲ್ಲಲೇ ಬೇಕು ಎನ್ನುವ ಛಲದಿಂದ ಬಿಜೆಪಿಯ ನಿಷ್ಠಾವಂತಕಾರ್ಯಕರ್ತರು ಕೆಲಸ ಮಾಡುತ್ತಿದ್ದಾರೆ.

ಹಲವು ದಶಕಗಳಿಂದ ಬಿಜೆಪಿಯ ಭದ್ರ ಕೋಟೆ ಆಗಿರುವ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಸಂಜೀವ ಮಠಂದೂರು ಅವರ ಮೂಲಕ ಮತ್ತೆ ಜಯಗಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಕಳದ ಬಾರಿ ಕಾಂಗ್ರೆಸ್ ಗೆದ್ದಿರುವುದು ಸಣ್ಣ ಮತಗಳ ಅಂತರದಿಂದ.ಕಳೆದ ಬಾರಿ ಸಂಘ ಪರಿವಾರದ ಕೆಲವು ಮಂದಿ ಮುನಿಸಿಕೊಂಡು ಮತದಾನದಲ್ಲಿ ಭಾಗವಹಿಸಿರಲಿಲ್ಲ. ಇಂದು ಅಂತಹ ಪರಿಸ್ಥಿತಿ ಇಲ್ಲದಿರುವ ಹಿನ್ನೆಲೆಯಲ್ಲಿ ಸಂಜೀವ ಮಠಂದೂರು ಗೆಲುವಿಗಾಗಿ ಹೆಚ್ಚಿನ ಪ್ರಯತ್ನ ನಡೆಯಲಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English