ಉಡುಪಿ: ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯವಾಗಿದ್ದ ಮಲ್ಪೆ ಮಧ್ವರಾಜ್ ? ಮಾಜಿ ಸಚಿವೆ ಮನೋರಮಾ ಮಧ್ವರಾಜ್ ಅವರ ಸುಪುತ್ರರಾಗಿರುವ ಪ್ರಮೋದ್ ಮಧ್ವರಾಜ್ ತಮ್ಮ ನಾಯಕತ್ವದ ಜಾಣ್ಮೆಯಿಂದ ಉಡುಪಿಯನ್ನು ರಾಜ್ಯದಲ್ಲೇ ಒಂದು ಮಾದರಿ ವಿಧಾನಸಭಾ ಕ್ಷೇತ್ರವನ್ನಾಗಿ ಮಾಡುವ ಸಂಕಲ್ಪವನ್ನು ಹಿಂದಿನಿಂದಲೂ ಹೊಂದಿದವರು.
ಯಾವುದೇ ವಿಧಾನಸಭಾ ಕ್ಷೇತ್ರ ಅಭಿವೃದ್ಧಿಯಲ್ಲಿ ಮಾದರಿ ಆಗಬೇಕಾದರೆ ಅಲ್ಲಿನ ನಗರ, ಪಟ್ಟಣ ಪ್ರದೇಶಗಳು ಅಭಿವೃದ್ಧಿ ಆಗಬೇಕು. ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ನೇತೃತ್ವದಲ್ಲಿ ಉಡುಪಿ ನಗರದ ಸಮಗ್ರ ಅಭಿವೃದ್ಧಿಗೆ 450 ಕೋಟಿ ರೂಪಾಯಿಗಿಂತಲೂ ಹೆಚ್ಚಿನ ಕೆಲಸ ಕಾರ್ಯಗಳು ಆಗಿವೆ. ಇದರಿಂದಾಗಿ ಉಡುಪಿ ನಗರ ಸಭೆಯಲ್ಲಿ ಮೂಲಭೂತ ಸೌಕರ್ಯಗಳಿಗೆ ಹೊಸ ಆಯಾಮವೇ ದೊರೆತಿದೆ. ಇಡೀ ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಎರಡು ಸಾವಿರ ಕೋಟಿ ರೂಪಾಯಿಗೂ ಹೆಚ್ಚಿನ ಅಭಿವೃದ್ಧಿಗೆ ಕಾಮಗಾರಿಗೆ ಚಾಲನೆ ನೀಡುವಲ್ಲಿ ಪ್ರಮೋದ್ ಪರಿಶ್ರಮ ಅಡಗಿದೆ.
ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ರಾಜ್ಯದಲ್ಲಿ ಕ್ರಿಯಾಶೀಲರಾಗಿ ಕೆಲಸ ಮಾಡಬಲ್ಲ ಯುವ ರಾಜಕಾರಣಿ. ತನ್ನ ತಂದೆ ಮಲ್ಪೆ ಮಧ್ವರಾಜ್, ತಾಯಿ ಮಾಜಿ ಸಚಿವ ಮನೋರಮಾ ಮಧ್ವರಾಜ್ ಅವರ ಸಮರ್ಥ ಉತ್ತರಾಧಿಕಾರಿಯಾಗಿ ಜನಸೇವೆ ನಡೆಸುತ್ತಿರುವ ಪ್ರಮೋದ್ ಮಧ್ವರಾಜ್ ತನ್ನ ರಾಜಕೀಯ ಜೀವನದಲ್ಲಿ ಮಹತ್ವದ ಕಾರ್ಯಗಳನ್ನು ಸಾಧಿಸಿದ್ದಾರೆ. ಉಡುಪಿ ಜಿಲ್ಲೆಯ ಅದರಲ್ಲು ಉಡುಪಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮತ್ತು ಬಹುಮುಖ್ಯವಾಗಿ ಉಡುಪಿ ನಗರಸಭೆ ಪ್ರದೇಶದಲ್ಲಿ ಹಿಂದಿಗಿಂತಲೂ ಹೆಚ್ಚಿನ ಪ್ರಮಾಣದ ಅಭಿವೃದ್ಧಿ ಕಾರ್ಯಗಳು ಪ್ರಮೋದ್ ಮಧ್ವರಾಜ್ ನೇತೃತ್ವದಲ್ಲಿ ಅನುಷ್ಠಾನಗೊಂಡಿವೆ.
ಉಡುಪಿ ಎಂದಾಗ ನಿಮಗೆ ನೆನಪಾಗುವುದು ಮಲ್ಪೆ ಬೀಟ್, ಸೈಂಟ್ ಮೇರಿಸ್ ಐಲೇಂಡ್. ಅಷ್ಟೇ ಅಲ್ಲ ಉಡುಪಿ ವೈದ್ಯಕೀಯ, ಶಿಕ್ಷಣ, ಕೈಗಾರಿಕೆ, ಮಾಹಿತಿ ತಂರ್ತ್ರಜ್ಞಾನ, ಮೀನುಗಾರಿಕಾ ಕ್ಷೇತ್ರದಲ್ಲೂ ಹೆಸರುವಾಸಿ. ಯಕ್ಷಗಾನದಂಹತ ವೈವಿಧ್ಯಮಯ ಕಲಾ ಪ್ರಕಾರಗಳ ನೆಲೆವೀಡು. ಸತ್ಯನಾಪುರದ ಸಿರಿ, ದೈವ ನೇಮಗಳಂತಹ ಜಾನಪದ ಪರಂಪರೆ ಹೊಂದಿರುವ ನಾಡು. ಸುಂದರವಾದ ಸಮುದ್ರ ಕಿನಾರೆಗಳು, ನಯನ ಮನೋಹರವಾದ ನದಿ ಹಿನ್ನೀರು ಪ್ರದೇಶಗಳು, ಮ್ಯಾಂಗ್ರೋವ್ ಎನ್ನಲಾಗುವ ಕಾಂಡ್ಲ ಕಾನನಗಳು ಹೀಗೆ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶ ನೀಡುವ ಪ್ರಕೃತಿ ರಮಣೀಯ ಭೂಭಾಗಗಳು ಇಲ್ಲಿವೆ.
ಸಹಜವಾಗಿ ಪ್ರಮೋದ್ ಮಧ್ವರಾಜ್ ಉಡುಪಿ ಕ್ಷೇತ್ರದ ಶಾಸಕನಾಗಿ, ಸಚಿವನಾಗಿ ಉಡುಪಿಯ ಸಮಗ್ರ ಅಭಿವೃದ್ಧಿಗೆ ಅವಿರತ ಶ್ರಮ ವಹಿಸಿದ್ದಾರೆ. ಅದರೊಂದಿಗೆ ಪ್ರವಾಸೋದ್ಯಮ ವಲಯದಲ್ಲೂ ಅಭಿವೃದ್ಧಿಯಾಗುವಂತೆ ಪ್ರಯತ್ನ ನಡೆಸಿದ್ದಾರೆ. ಇಲ್ಲಿಗೆ ಆಗಮಿಸುವ ಪ್ರವಾಸಿಗಳ ಅನುಕೂಲಕ್ಕಾಗಿ ಮೂಲಭೂತ ಸೌಕರ್ಗಳನ್ನು ಒದಗಿಸಿಕೊಟ್ಟಿದ್ದಾರೆ.
ಧಾರ್ಮಿಕ ಕೇಂದ್ರವಾಗಿ, ವೈದ್ಯಕೀಯ ಮತ್ತು ಶೈಕ್ಷಣಿಕವಾಗಿ ಮಹತ್ವ ಪಡೆದುಕೊಂಡಿರುವ ಉಡುಪಿ ನಗರದ ಮೂಲಮೂಥ ಸೌಕರ್ಯ ಹೆಚ್ಚಿಸಿ, ಸ್ವಚ್ಛತೆಯನ್ನು ಕಾಪಾಡುವ ನಿಟ್ಟಿನಲ್ಲಿ ಕೈಗೊಂಡ ಕೆಲಸಗಳು ಉಡುಪಿಯ ಸ್ವರೂಪವನ್ನೇ ಬದಲಾಯಿಸಿದೆ. ಇಂದು ಉಡುಪಿಗೆ ಹೊಸ ರೂಪವನ್ನು ನೀಡುವಲ್ಲಿ ಪ್ರಮೋದ್ ಮಧ್ವರಾಜ್ ಶ್ರಮ ಮಹತ್ತರವಾದುದು.
ಉಡುಪಿ ವಿಧಾನ ಸಭಾ ಕ್ಷೇತ್ರದಲ್ಲಿರುವ ಸ್ವಂತ ನಿವೇಶನ ಇಲ್ಲದ, ಅಶಕ್ತರಾದ ಕಡುಬಡವರಿಗೆ, ದಾನಿಗಳ ನೆರವಿನಿಂದ 100 ಮನೆಗಳನ್ನು ಒದಗಿಸುವ ಗುರಿ ಹೊಂದಿದ್ದು,ಈಗಾಗಲೇ 80 ಮನೆಗಳನ್ನು ನಿರ್ಮಿಸಿ ಹಸ್ತಾಂತರಿಸಲಾಗಿದೆ. ಪಟ್ಟಣ ಪ್ರದೇಶದ ಬಡವರಿಗೂ ಕೂಡ ಸ್ವಂತ ವಸತಿ ಸೌಲಭ್ಯ ಒದಗಿಸಲಾಗಿದೆ. ಸರಕಾರದ ಯಾವುದೇ ಸೌಲಭ್ಯ ಪಡೆಯಲು ಸಾಧ್ಯವಿಲ್ಲದ, ಸ್ವಂತ ನಿವೇಶನ ಇಲ್ಲದ, ಬಡವರಿಗೆ, ದಾನಿಗಳ , ಕಟ್ಟಡ ನಿರ್ಮಾಣ ಮಾಲೀಕರ ಮನವೊಲಿಸಿ, ಅವರ ಮೂಲಕ 1.50 ಲಕ್ಷ ವೆಚ್ಚದಲ್ಲಿಮನೆಗಳನ್ನು ನಿರ್ಮಿಸಲಾಗಿದೆ.
Click this button or press Ctrl+G to toggle between Kannada and English