ಬೆಳ್ತಗಡಿ ಕ್ಷೇತ್ರದ ಜನಪ್ರಿಯ ಅಭ್ಯರ್ಥಿ ಹರೀಶ್ ಪೂಂಜ

1:12 PM, Friday, May 11th, 2018
Share
1 Star2 Stars3 Stars4 Stars5 Stars
(No Ratings Yet)
Loading...

harish-poonjaಬೆಳ್ತಗಡಿ: ಬೆಳ್ತಗಡಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ ಜಿಲ್ಲಾಯುವ ಮೋರ್ಚಾ ಅಧ್ಯಕ್ಷ. ರಾಜ್ಯದ ಎರಡಡ ಜನ್‌ ಯುವ ಅಭ್ಯರ್ಥಿಗಳಲ್ಲಿ ಹರೀಶ್ ಪೂಂಜ ಕೂಡ ಒಬ್ಬರು. ಮೂವತ್ತಾರರ ಹರೆಯದ ಯುವರಾಜಕಾರಣಿ ಮತ್ತು ಉದ್ಯಮಿ ಹರೀಶ್ ಪೂಂಜ ಅಧಿಕೃತ ಅಭ್ಯರ್ಥಿಯಾಗಿ ಹೊರಹೊಮ್ಮಿದ್ದು ಬಿಜಿಪಿಯ ಯುವಕರಲ್ಲಿ ಹೊಸ ಹೊಮ್ಮಸ್ಸು ಮೂಡಿಸಿದೆ.

ಜಿಲ್ಲಾ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷರಾಗುವ ಮೂಲಕ ರಾಜಕೀಯ ಪ್ರವೇಶಿಸಿದ ಅವರು ಸಾಮಾಜಿಕ, ಧಾರ್ಮಿಕಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದು, ಮಾತ್ರವಲ್ಲದೇ ಪದವಿಯಜೊತೆಗೆ, ಕಾನೂನು ಅಭ್ಯಾಸ ನಡೆಸಿ ರಾಜ್ಯಉಚ್ಚನ್ಯಾಯಾಲಯದಲ್ಲಿ ವಕೀಲರಾಗಿ, ಜೊತೆಗೆಓರ್ವಉದ್ಯಮಿಯಾಗಿಯೂ ಬೆಳೆದು ಬಂದಿದ್ದು, ಕ್ಷೇತ್ರದಜನತೆ ಈ ಕ್ರಿಯಾಶೀಲ ಯುವಕನನ್ನು ಗುರುತಿಸಿದ್ದಾರೆ.

ಹರೀಶ್ ಪೂಂಜ ಧಾರ್ಮಿಕ ಕ್ಷೇತ್ರದ ಮೂಲಕ ದೇವಸ್ಥಾನ ಅಭಿವೃದ್ಧಿ ಕ್ಷೇತ್ರದಲ್ಲಿ ತೊಡಗಿಸಿಕೊಂಡು ತಾಲೂಕಿನ ಮೂಲೆ ಮೂಲೆಗಳಲ್ಲೂ ತನ್ನದೇಆದಯುವ ಪಡೆ ಮತ್ತು ಅಭಿಮಾನಿಗಳನ್ನು ಬೆಳೆಸಿಕೊಂಡಿದ್ದಾರೆ. ಎಬಿವಿಪಿ ಮೂಲಕ ವಿದ್ಯಾರ್ಥಿ ಹೋರಾಟಕ್ಷೇತ್ರದಲ್ಲಿ ಸಂಘಟನಾಚತುರತೆ ಮೆರೆದಿರುವಅವರು ಬೆಳ್ತಂಗಡಿ ತಾಲ್ಲೂಕಿನ ಮಾತ್ರವಲ್ಲದೇ ಹಲವಾರು ದೇವಸ್ಥಾನಗಳ ಜೀರ್ಣೋದ್ಧಾರ, ಬ್ರಹ್ಮಕಲಶೋತ್ಸವದಲ್ಲಿ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡಿದ್ದಾರೆ.

ಎ.ಬಿ.ವಿ.ಪಿತಾಲೂಕು ಪ್ರಮುಖ್ ಆಗಿ, ಜಿಲ್ಲಾ ಸಂಚಾಲಕರಾಗಿ, ರಾಜ್ಯ ಸಹ ಕಾರ್ಯದರ್ಶಿಯಾಗಿ, ರಾಷ್ಟ್ರೀಯಕಾರ್ಯಕಾರಿಣಿ ಸದಸ್ಯರಾಗಿ ಹಾಗೂ ಅನೇಕ ಸ್ಥಾನಗಳು ಹರೀಶ್ ಪೂಂಜಅವರಿಗೆಒಲಿದು ಬಂದಿದೆ. ಇದೀಗ ಬೆಳ್ತಂಗಡಿ ತಾಲ್ಲೂಕಿನಯುವಕರಅಭಿಪ್ರಾಯದಂತೆ ಬಿಜೆಪಿ ಅಭ್ಯರ್ಥಿಯಾಗಿ ಹರೀಶ್ ಪೂಂಜಅವರನ್ನುಅಧಿಕೃತವಾಗಿ ಪಕ್ಷದ ಮುಖಂಡರು ಫೋಷಣೆ ಮಾಡಿರುವುದುಯುವಕರಉತ್ಸಾಹಕ್ಕೆಕಾರಣವಾಗಿದೆ.

ಬೆಳ್ತಂಗಡಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ. ಎಬಿವಿಪಿ ರಾಷ್ಟ್ರೀಯಕಾರ್ಯಕಾರಿಣಿ ಸದಸ್ಯ, ಪೂರ್ಣಾವಧಿ ಸಂಘಟನಾ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದವರು. ಲೀವ್ಡೋ ಆಯೋಗದ ಮುಂದೆ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆಗಳ ಮಹತ್ವದಕುರಿತಾಗಿ ವಾದ ಮಾಡಿ ವಿಜಯಶಾಲಿಯಾಗಿದ್ದಅವರುಆರ್‌ಎಸ್‌ಎಸ್‌ಕಾರ್ಯಕರ್ತ.

ಕಾಲೇಜು ದಿನಗಳಲ್ಲಿ ಜಗತ್ತಿನ ನಂಬರ್ ವನ್ ವಿದ್ಯಾರ್ಥಿ ಸಂಘಟನೆಯಾದ ಎಬಿವಿಪಿಯ ನಗರ ಕಾರ್ಯದರ್ಶಿಯಾಗಿ ಹರೀಶ್ ಪೂಂಜ ೨೦೦೧ರಿಂದ ೨೦೦೭ರ ವರೆಗೆ ಕರಾವಳಿಯ ವಿದ್ಯಾರ್ಥಿಅಂದೋಲನವನ್ನು ಪ್ರಬಲವಾಗಿ ಸಂಘಟಿಸಿದ ವಿದ್ಯಾರ್ಥಿ ನಾಯಕ. ವಿದ್ಯಾರ್ಥಿ ಸಂಘಟನೆಯರಾಜ್ಯಕಾರ್ಯಕಾರಿಣಿ ಸದಸ್ಯರಾಗಿಜಿಲ್ಲಾ ಸಂಚಾಲಕರಾಗಿಕರ್ನಾಟಕರಾಜ್ಯ ಸಹಕಾರ್ಯದರ್ಶಿಯಾಗಿ ತನ್ನ ವಿದ್ಯಾಭ್ಯಾಸದ ನಂತರ ಪೂರ್ಣಾವಧಿಕಾರ್ಯಕರ್ತರಾಗಿ ಎಬಿವಿಪಿ ಬೆಳಗಾವಿ ನಗರ ಸಂಘಟನಾ ಕಾರ್ಯದರ್ಶಿಯಾಗಿ ಜವಬ್ದಾರಿ ನಿರ್ವಹಿಸಿದವರು.

ಈ ಮಧ್ಯೆ ಎಬಿವಿಪಿ ರಾಷ್ಟೀಯಕಾರ್ಯಕಾರಿಣಿ ಸದಸ್ಯರಾಗಿ .ಕಾಲೇಜು ವಿಧ್ಯಾರ್ಥಿ ಸಂಘಗಳ ಚುನಾವಣೆ ವಿಚಾರವಾಗಿ ಅಂದೀನ ಕೇಂದ್ರ ಸರ್ಕಾರದ ಲಿಂಗ್ಡೋ ಆಯೋಗದಕರ್ನಾಟಕರಾಜ್ಯದ ಪ್ರತಿನಿಧಿಯಾಗಿದೇಶದ್ಯಾಂತ ಪ್ರವಾಸ ಮಾಡಿದಇವರು ಭಯೋತ್ಪಾದಕ ವಿರೋಧಿಅಂದೋಲನದಜಿಲ್ಲಾ ಸಂಚಾಲಕರಾಗಿ ವಿದ್ಯಾರ್ಥಿ ಶಕ್ತಿಯನ್ನು ಸಂಘಟಿಸಿದವರು.

ಇಂಜೀನಿಯರೀಂಗ್ ವಿದ್ಯಾರ್ಥಿಗಳ ರಾಜ್ಯ ಮಟ್ಟದ ಅವಿಷ್ಕಾರ ಪ್ರದರ್ಶನದ ಸ್ರಷ್ಟಿಕಾರ್ಯಕ್ರಮವನ್ನು ಮಂಗಳೂರಿನಲ್ಲಿ ಯಶಸ್ವಿಯಾಗಿ ಸಂಘಟಿಸಿದವರು. ಅಕ್ರಮ ಬಾಂಗ್ಲ ವಲಸಿಗರ ವಿರುದ್ದ ಎಬಿವಿಪಿ ರೂಪಿಸಿದ್ದ ಜನಾಂದೋಲನದಗಡೀ ಸರ್ವೆಕ್ಷಣೆಯಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡವರು.

ಬೆಳ್ತಂಗಡಿಯಲ್ಲಿ ಮೂರು ಬೇರೆ ಬೇರೆ ಪಕ್ಷಗಳಿಂದ ಅವರು 5 ಬಾರಿ ವಿಧಾನಸಭೆ ಪ್ರವೇಶಿಸಿದ, ಸತತ ಮೂರನೇ ಬಾರಿಗೆಚುನಾವಣೆಗೆಲ್ಲಲು ಸ್ಪರ್ಧಿಸುತ್ತಿರುವ ಹಾಲಿ ಶಾಸಕ ವಸಂತ ಬಂಗೇರಅವರು ಹರೀಶ್ ಪೂಂಜಾ ಪ್ರತಿಸ್ಪರ್ಧಿ. ದಕ್ಷಿಣಕನ್ನಡದ ಪಾಲಿಗೆ ಜೆಡಿಎಸ್ ಗೆ ಸ್ವಲ್ಪವಾದರೂ ನೆಲೆ ಇದ್ದ ಭಾಗಅಂದರೆಅದು ಬೆಳ್ತಂಗಡಿ ಮತ್ತು ಮೂಡುಬಿದಿರೆ. ಆದರೆ ವಸಂತ ಬಂಗೇರರ ನಿರ್ಗಮನದ ನಂತರಕ್ಷೇತ್ರದಲ್ಲಿಜೆಡಿಎಸ್ ನೆಲಕಚ್ಚಿದ್ದು ಕೇವಲ ಕಾಂಗ್ರೆಸ್, ಬಿಜೆಪಿ ನಡುವೆ ನೇರ ಸ್ಪರ್ಧೆಇದೆ.

೨೦೦೮ರಲ್ಲಿ ಮತ್ತು ೨೦೧೩ರಲ್ಲಿ ವಸಂತ ಬಂಗೇರರು ಸತತ 16 ಸಾವಿರ ಮತಗಳ ಅಂತರದಿಂದಗೆದ್ದಿದ್ದರು. ಈ ಬಾರಿಇವರಿಬ್ಬರು ಮಧ್ಯೆ ನೇರ ಸ್ಪರ್ಧೆ ನಡೆಯಲಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English