ಕಾರ್ಕಳ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮತ್ತೊಬ್ಬ ಸಜ್ಜನ ರಾಜಕಾರಣಿ ಮಾಜಿ ಶಾಸಕ ಗೋಪಾಲ ಭಂಡಾರಿ. ಉಡುಪಿ ಜಿಲ್ಲೆಯ ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ಸ್ವಜಾತಿ ಮತದಾರರಿದ್ದರು ಜಾತ್ಯತೀತವಾಗಿ ಜನಪ್ರತಿನಿಧಿಯನ್ನು ಆಯ್ಕೆ ಮಾಡುವ ಕ್ಷೇತ್ರ ಕಾರ್ಕಳ. ಮೊದಲಿಗೆ ಮಾರ್ಪಾಡಿ ವೀರಪ್ಪ ಮೊಯ್ಲಿ ಅವರ ಶಾಸಕರಾಗಿ ಮುಖ್ಯಮಂತ್ರಿಯಾದವರು ವೀರಪ್ಪ ಮೊಯ್ಲಿ. ಅದೇ ರೀತಿ ಗೇಪಾಲ ಭಂಡಾರಿ ಅವರು ಎರಡು ಬಾರಿ ಕಾರ್ಕಳ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿ ಜನರ ಪ್ರೀತಿಗೆ ಪಾತ್ರರಾದವರು.
ಕಳೆದ 40 ವರ್ಷಗಳಿಂದ ಸಾರ್ವಜನಿಕ ರಂಗದಲ್ಲಿದ್ದು, ಚುನಾವಣೆಯಲ್ಲಿಸೋತಾಗಲು ಜನರೊಂದಿಗೆ ಇದ್ದು ಸೇವೆ ಮಾಡಿದವರು ಗೋಪಾಲ ಭಂಡಾರಿ.ಈ ಬಾರಿ ತನ್ನದುಕೊನೆಯ ಚುನಾವಣೆಯಾಗಿದ್ದು, ಇನ್ನೊಮ್ಮೆ ಜನಸೇವೆ ಮಾಡಲು ಅವಕಾಶ ಮಾಡಿ ಕೊಡಿ ಎಂದುಕಾರ್ಕಳ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಚ್.ಗೋಪಾಲ ಭಂಡಾರಿ ಮನವಿ ಮಾಡಿದ್ದಾರೆ.
ಇಂದಿನ ರಾಜಕೀಯ ಸ್ಥಿತಿಯಲ್ಲಿ ಗೋಪಾಲ ಭಂಡಾರಿಯಂತಹಸಜ್ಜನ ರಾಜಕೀಯದಲ್ಲಿರುವ ಅಪರೂಪ ಎನ್ನುತ್ತಾರೆ ಕಾಂಗ್ರೆಸ್ ಮುಖಂಡ, ವಿಧಾನಪರಿಷತ್ ಸದಸ್ಯ ಕೆ.ಪ್ರತಾಪಚಂದ್ರ ಶೆಟ್ಟಿ. ಇದು ಕೇವಲ ಶೆಟ್ಟಿ ಅವರ ಮಾತಲ್ಲ ನಾಡಿನ ಎಲ್ಲ ಪ್ರಜ್ಞಾವಂತ ಜನತೆಯ ಅಭಿಪ್ರಾಯವಾಗಿದೆ.
ಗೋಪಾಲಭಂಡಾರಿಯವರಿಗೆ ಮತ ಕೇಳಲು ಯಾರಿಗೂ ಮುಜುಗರು ಆಗುವುದಿಲ್ಲ, ಅವರ ಕಾರ್ಯವೈಖರಿ ನಮಗೆಲ್ಲಹೆಮ್ಮೆ ಎನ್ನುತ್ತಾರೆ ಕಾಂಗ್ರೆಸ್ ಯುವ ಮುಖಂಡ ಅಮೃತ್ ಶೆಣೈ.
ಗೋಪಾಲ ಭಂಡಾರಿ ಕಳೆದ 40 ವರ್ಷಗಳ ರಾಜಕೀಯ ಜೀವನದಲ್ಲಿಜನಸೇವೆ ಮಾಡುತ್ತಾ ಬಂದಿದ್ದಾರೆ. ಹಣಕ್ಕೆ ಕೈ ಚಾಚದೇ ಶುದ್ಧಹಸ್ತರಾಗಿದ್ದಾರೆ. ಗೋಪಾಲಭಂಡಾರಿ ಭ್ರಷ್ಟಾಚಾರ ಮಾಡದಿರುವುದೇ ಈಗ ದೊಡ್ಡ ಅಪವಾದ ವಾಗಿದೆ ಎನ್ನುತ್ತಾರೆ ಉಡುಪಿ ಜಿಲ್ಲಾಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶೇಖರ ಮಡಿವಾಳ್ .
ಎಲ್ಲರೂ ನಾನೇ ಅಭ್ಯರ್ಥಿ, ನಾವೇ ಗೋಪಾಲ ಭಂಡಾರಿಪ್ರತಿನಿಧಿ ಎಂದು ಭಾವಿಸಿ ಕೆಲಸ ಮಾಡಿ ಗೋಪಾಲ ಭಂಡಾರಿ ಅವರನ್ನು ಗೆಲ್ಲಿಸಬೇಕಾಗಿದೆ.ಭಂಡಾರಿ ಪರವಾದ ಮತ್ತು ಸಿದ್ದರಾಮಯ್ಯ ಸರಕಾರದ ಪರವಾಗಿ ಜನರ ಅನುಕಂಪದ ಅಲೆ ಕಾರ್ಕಳಕ್ಷೇತ್ರದಲ್ಲಿದ್ದು, ಅದನ್ನು ಮತವಾಗಿ ಪರಿವರ್ತಿಸ ಬೇಕಾಗಿದೆ ಎನ್ನುತ್ತಾರೆ ಕಾಂಗ್ರೆಸ್ ಕಾರ್ಯಕರ್ತರು.
ನಾನು ಕಾರ್ಕಳದ ಅಭಿವೃದ್ಧಿ ಮಾಡಿಲ್ಲ, ಚುನಾವಣಾ ಕಣದಿಂದ ಹಿಂದೆ ಸರಿಯಬೇಕು ಎಂದುಹೇಳಲು ಕಾರ್ಕಳ ಶಾಸಕ ಸುನೀಲ್ ಕುಮಾರ್‌ಗೆ ನೈತಿಕತೆ ಇಲ್ಲ. ಗೋಪಾಲ ಭಂಡಾರಿ ಯಾರು, ಏನು, ಹೇಗೆ, ಹೇಗಿದ್ದರು, ಈಗ ಹೇಗಿದ್ದಾರೆ ಎಂದು ಹೆಬ್ರಿ ಸೇರಿ ನನ್ನ ಕ್ಷೇತ್ರದ ಜನತೆಗೆಗೊತ್ತಿದೆ ಎಂದು ಪ್ರತಿಪಕ್ಷದ ಟೀಕೆಗೆ ಕಾರ್ಕಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಚ್. ಗೋಪಾಲಭಂಡಾರಿ ಮಾರುತ್ತಾರ ನೀಡಿದ್ದಾರೆ.
Click this button or press Ctrl+G to toggle between Kannada and English