ಮೂಡಬಿದಿರೆಯಲ್ಲಿ ಕಮಲ ಅರಳಿಸುವ ಉಮನಾಥ ಕೋಟ್ಯಾನ್

3:09 PM, Friday, May 11th, 2018
Share
1 Star2 Stars3 Stars4 Stars5 Stars
(No Ratings Yet)
Loading...

umanath-kotiayanಮೂಡಬಿದಿರೆ: ಮೂಡಬಿದಿರೆಯ ಉಮನಾಥ ಕೋಟ್ಯಾನ್ ಮೊದಲಿಗೆ ಸಾಂಸ್ಕೃತಿಕ ಲೋಕದಲ್ಲಿ ಪ್ರಮುಖ ಹೆಸರು. ರಂಗಭೂಮಿ, ಸಿನಿಮಾ ರಂಗದಲ್ಲಿ ನಟನಾಗಿ ಗುರುತಿಸಕೊಂಡವರು. ಹಿಂದುಳಿದ ಕೃಷಿಕ ಕುಟುಂಬದಲ್ಲಿ ಹುಟ್ಟೆ ಬೆಳೆದ ತನ್ನ ಪರಿಶ್ರಮದಿಂದಲೇ ವಿವಿದ ವ್ಯವಹಾರಗಳಲ್ಲಿ ತೊಡಗಿಸಿಕೊಂಡು ಜೀವನದಲ್ಲಿ ಪ್ರಗತಿ ಕಂಡವರು. ಅನಂತರ ಇಲ್ಲಿನ ಸಂಸ್ಕೃತಿ, ಪರಂಪರೆಯ ಆದಮ್ಯ ಅಭಿಮಾನಿಯಾದ ಉಮನಾಥ ಕೋಟ್ಯಾನ್ ಅವರು ಸಹಜವಾಗಿ ಭಾರತೀಯ ಜನತಾ ಪಾರ್ಟಿಯ ಸಕ್ರಿಯ ಕಾರ್ಯಕರ್ತರಾದವರು.

ತನ್ನ ಪ್ರಮಾಣಿಕತೆ, ಪಕ್ಷ ನಿಷ್ಠೆ, ಜನಪರ ಕಾಳಜಿಯ ಕೆಲಸಗಳಿಂದಾಗಿ ತಾಲೂಕು ಪಂಚಾಯತ್ ಸದಸ್ಯರಾಗಿ ಜನಮಣ್ಣನೆ ಗಳಿಸಿದವರು. ಬಿಜೆಪಿ ಸರಕಾರದ ಅವಧಿಯಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಅಧ್ಯಕ್ಷರಾಗಿ ಪ್ರಮಾಣಿಕವಾಗಿ ಕಾರ್ಯನಿರ್ವಹಿಸಿದವರು ಕೋಟ್ಯಾನ್.

ತುಳು ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಪರವಾಗಿ ಹಲವಾರು ಕಾರ್ಯಕ್ರಮಗಳನ್ನು ಕರಾವಳಿಯ ಹಲವೆಡೆ ಆಯೋಜಿಸಿದವರು ಉಮನಾಥ ಕೋಟ್ಯಾನ್. ತುಳು ಭಾಷೆಯನ್ನು ಸಂವಿಧಾನದ ಹದಿನೆಂಟನೇ ಪರಿಚ್ಛೇದಲ್ಲಿ ಸೇರಿಸಬೇಕು ಎಂದು ಒತ್ತಾಯಿಸಿ ದೆಹಲಿ ತನಕ ಮನವಿ ಕೊಂಡು ಹೋಗಿದ್ದರು.

ಬಿಜೆಪಿಯಲ್ಲಿ ವಿವಿಧ ಹುದ್ದೆಯನ್ನು ನಿರ್ವಹಿಸಿದ ಉಮನಾಥ ಕೋಟ್ಯಾನ್ ಅವರಿಗೆ ಈ ಬಾರಿ ಮತ್ತೆ ಮೂಡಬಿದಿರೆ ಕ್ಷೇತ್ರದಲ್ಲಿ ಸ್ಪರ್ಧಿಸಲು ಅವಕಾಶ ನೀಡಲಾಗಿದೆ. ಕಳೆದ ಬಾರಿ ಕಡಿಮೆ ಅಂತರದಿಂದ ಸೋತು ಹೋದ ಕೋಟ್ಯಾನ್ ಈ ಬಾರಿ ವಿಜಯ ಗಳಿಸುತ್ತಾರೆ ಎಂಬ ಆಶಾಭಾವನ ಅವರ ಹಿತೈಷಿಗಳದ್ದು.

ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾಗಿ, ಮೂಡಬಿದಿರೆ ವಿಧಾನಸಭಾ ಕ್ಷೇತ್ರದ ಉಸ್ತುವಾರಿಯಾಗಿ, ಮೂಡಬಿದಿರೆ ಕ್ಷೇತ್ರದ ಸಮಿತಿ ಅಧ್ಯಕ್ಷರಾಗಿ ಕೂಡ ಕಾರ್ಯನಿರ್ವಹಿಸಿದ ಉಮನಾಥ ಕೋಟ್ಯಾನ್ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ ಶ್ರೀ ಉಮನಾಥ ಕೋಟ್ಯಾನ್ ಆಗಿದ್ದಾರೆ.

ಮೂಡಬಿದ್ರೆ ಎಲ್ಲಾ ರೀತಿಯಲ್ಲೂ ಆಕರ್ಷಣೀಯ ಸ್ಥಳ. ಆದರೆ ಈ ಬಾರಿ ಆಕರ್ಷಿಸುತ್ತಿರುವುದುಚುನಾವಣೆಯ ವಿಚಾರವಾಗಿ. ಮುಲ್ಕಿ ಮೂಡಬಿದ್ರೆ ಕಾಂಗ್ರೆಸ್ ನ‌ ಭದ್ರಕೋಟೆ ಎಂದರೆತಪ್ಪಾಗದು. ಸಂಘಪರಿವಾರದ ಪ್ರಾಬಲ್ಯ ಹೆಚ್ಚಿದ್ದರೂ ಬಿಜೆಪಿ ಈವರೆಗೆ ಇಲ್ಲಿ ಆಡಳಿತನಡೆಸಿಲ್ಲ.ಆದರೆ ಈ ಬಾರಿ ಇಲ್ಲಿ ಕೇಸರಿ ಬಾವುಟ ಇಲ್ಲಿ ಹಾರಿಸಲಾಗುವುದೇ ಎಂಬುದನ್ನು ಕಾದು ನಡಬೇಕಾಗಿದೆ. ಹಾಗೇನು ಆದರೆ, ಮೂಡಬಿದಿರೆಯಲ್ಲಿ ಬಿಜೆಪಿ ಮೊದಲ ಬಾರಿಗೆ ಗೆದ್ದಂತೆ ಆಗುತ್ತದೆ.

ಯುವಕರ ಸೈನ್ಯವೇ ಇಂದು ಬಿಜೆಪಿ ಅಭ್ಯರ್ಥಿ ಉಮನಾಥ್ ಕೋಟ್ಯಾನ್ ಬೆಂಗಾವಲಾಗಿ ನಿಂತಿದೆ.ಹೊಸ ಹುರುಪಿನಿಂದ ಫೀಲ್ಡ್ ಗೆ ಎಂಟ್ರಿ ಕೊಟ್ಟಿರುವ ಹಿಂದೂ ಯುವ ಸಮೂಹ ಬಿಜೆಪಿಯಗೆಲುವಿಗೆ ಕಾರಣವಾಗಲಿದ್ದಾರೆ ಎನ್ನಲಾಗುತ್ತಿದೆ.

ಕಾಂಗ್ರೆಸ್ ಪಕ್ಷದಲ್ಲಿ ಅಭ್ಯರ್ಥಿ ಆಯ್ಕೆಯ ಗೊಂದಲ ಉಮನಾಥ ಕೋಟ್ಯಾನ್ ಅವರಿಗೆ ಪ್ರಯೋಜನ ಆಗಲಿದ್ದು, ಬಿಜೆಪಿ ಇದುವರೆಗೆ ಮೂಡಬಿದಿರೆಯಲ್ಲಿ ಗೆಲ್ಲದೇ ಇರುವುದನ್ನು ಪಕ್ಷ ಒಂದು ಸವಾಲಾಗಿ ಸ್ವೀಕರಿಸಿ ಕೆಲಸ ಮಾಡಲಿದೆ ಎನ್ನುತ್ತಾರೆ.

ಬಿಜೆಪಿ ಪಕ್ಷದ ಸಂಘಟನೆಯಲ್ಲಿ ಪರಿಶ್ರಮ ವಹಿಸಿರುವ ಉಮನಾಥ ಕೋಟ್ಯಾನ್ ಅವರು ಜನಪರವಾಗಿ ಕೆಲಸ ಮಾಡಿದ್ದು, ಸರಕಾರಿ ಕಚೇರಿಗಳಲ್ಲಿ ನಡೆಯುವ ಸ್ವಜನ ಪಕ್ಷಪಾತ, ಭ್ರಷ್ಟಚಾರ ವಿರುದ್ಧ ಧ್ವನಿ ಎತ್ತಿದವರು.

ಸರಳ ಮತ್ತು ಸಜ್ಜನಿಕೆಯ ಆದರೆ, ನೇರ ನಡೆ ನುಡಿಯ ವ್ಯಕ್ತಿತ್ವ ಉಮನಾಥ ಕೋಟ್ಯಾನ್ ಅವರದಾಗಿದ್ದು, ತನ್ನ ಪ್ರತಿಸ್ಪರ್ಧಿಗೆ ಹೋಲಿಸಿದರೆ ಉತ್ತಮ ಗುನಡತೆಯವರು ಎನ್ನುತ್ತಾರೆ ಅವರ ಪಕ್ಷದವರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English