ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳ ಮತಗಟ್ಟೆಗಳಲ್ಲಿ ಮತದಾರರು ಬೆಳಗ್ಗೆ 7 ರಿಂದ ಮತ ಚಲಾವಣೆ ಆರಂಭಿಸಿದರು.
ಜಿಲ್ಲೆಯಲ್ಲಿ ಒಟ್ಟು 1858 ಮತಗಟ್ಟೆಗಳಿಲ್ಲಿ ಇಂದು ಮತದಾನ ನಡೆಯುತ್ತಿದ್ದು, 13,176 ಸಿಬ್ಬಂದಿಗಳು ಚುನಾವಣಾ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 517 ಕ್ಲಿಷ್ಟ ಮತಗಟ್ಟೆಗಳನ್ನು ಗುರುತಿಸಲಾಗಿದೆ. ಅವುಗಳಲ್ಲಿ 97 ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್, 221 ಮತಗಟ್ಟೆಗಳಲ್ಲಿ ಮೈಕ್ರೋ ವೀಕ್ಷಕರ ಕಣ್ಗಾವಲಿನೊಂದಿಗೆ ಮತದಾನ ನಡೆಯುತ್ತಿದೆ.
ಉರ್ವಾದ ಗಾಂಧಿನಗರ ಮತಗಟ್ಟೆಯಲ್ಲಿ ಡಿ. ವೇದವ್ಯಾಸ ಕಾಮತ , ಸಂಸದ ನಳಿನ್ ಕುಮಾರ್ ಕಟೀಲ್. ಗಣಪತಿ ಹೈಸ್ಕೂಲ್ ನಲ್ಲಿ ಶ್ರೀಕರ ಪ್ರಭು, ಬೆಂದೂರುನ ಸಂತ ಸೆಬಾಸ್ಟಿಯನ್ ಶಾಲೆಯ ಮತಗಟ್ಟೆಯಲ್ಲಿ ಜೆ ಆರ್ ಲೋಬೋ ಮತ ಚಲಾಯಿಸಿದರು.
ಬೆಳಗ್ಗೆ 9.30 ಕ್ಕೆ ಮಂಗಳೂರು ಉತ್ತರ 11%, ಮಂಗಳೂರು (ಉಳ್ಳಾಲ) 14%, ಬಂಟ್ವಾಳ 9%, ಬೆಳ್ತಂಗಡಿ 16%, ಮೂಡಬಿದಿರಿ 10.76%, ಪುತ್ತೂರ್ 13% ಮತ್ತು ಸುಳ್ಯ16%. ಮತ ಚಲಾವಣೆ ಆಗಿದೆ.
Click this button or press Ctrl+G to toggle between Kannada and English