ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಯ ಜನಾದೇಶ ಪಡೆಯುವ ಕಾಲ ಇದೀಗ ಬಂದಿದೆ. 224 ವಿಧಾನಸಭಾ ಕ್ಷೇತ್ರಗಳ ಪೈಕಿ 222 ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, ಮೇ 12ರಂದು ಮತದಾನವಾಗಿದ್ದು, ಚುನಾವಣಾ ಪೂರ್ವ ಸಮೀಕ್ಷೆ, ಅಭಿಪ್ರಾಯಗಳ ಸಂಗ್ರಹ ಕುತೂಹಲಕಾರಿ ಫಲಿತಾಂಶವನ್ನು ನೀಡಿದೆ. ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಅಲ್ಲದೆ ಸರಿ ಸುಮಾರು 28ಕ್ಕೂ ಅಧಿಕ ಪ್ರಮುಖ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದವು.
2,622 ಅಭ್ಯರ್ಥಿಗಳಿದ್ದು, ಪುರುಷ ಅಭ್ಯರ್ಥಿಗಳು 2,405, ಮಹಿಳೆಯರು 217. ಪಕ್ಷವಾರು: ಬಿಜೆಪಿ 222, ಕಾಂಗ್ರೆಸ್ 220, ಜೆಡಿಎಸ್ 199, ಬಿಎಸ್ಪಿ 18, ಇತರೆ 1963. ಮೊಳಕಾಲ್ಮೂರಿನಲ್ಲಿ ಮಾಜಿ ಸಚಿವ ಬಿ ಶ್ರೀರಾಮುಲು ಅವರು ಉತ್ತಮ ಅಂತರದಲ್ಲಿ ಮುನ್ನಡೆ, 7215 ಮತಗಳ ಅಂತರದಿಂದ ಮುಂದಿದ್ದಾರೆ.
ಬಿಜೆಪಿ ಬಂಡಾಯ ಅಭ್ಯರ್ಥಿ ತಿಪ್ಪೇಸ್ವಾಮಿ ಹಿನ್ನಡೆ ಹೊಂದಿದ್ದಾರೆ. ಸಮಯ 10.08ರ ಸುಮಾರಿಗೆ * ಶ್ರೀರಾಮುಲು 14,459 ಮತಗಳು * ಕಾಂಗ್ರೆಸ್ಸಿನ ಡಾ. ಯೋಗೇಶ್ ಬಾಬು : 7244 * ಎಸ್ ತಿಪ್ಪೇಸ್ವಾಮಿ : 3512
Click this button or press Ctrl+G to toggle between Kannada and English