ಬೆಂಗಳೂರು: ಭಾರತೀಯ ಜನತಾ ಪಕ್ಷವನ್ನು ಅಧಿಕಾರಕ್ಕೆ ಬರದಂತೆ ತಡೆಯಬೇಕು, ಬಿಎಸ್ ಯಡಿಯೂರಪ್ಪ ಅವರು ಮತ್ತೊಮ್ಮೆ ಸಿಎಂ ಆಗಬಾರದು, ಜಾತಿವಾದಿ ಪಕ್ಷ ಅಧಿಕಾರಕ್ಕೆ ಬರಬಾರದು ಎಂಬ ಉದ್ದೇಶದಿಂದ ಕಾಂಗ್ರೆಸ್ ಈಗ ತನ್ನ ಅಧಿಕಾರ ಉಳಿಸಿಕೊಳ್ಳಲು ಕಸರತ್ತು ಆರಂಭಿಸಿದೆ. ಗೋವಾದಲ್ಲಿ ಆದ ಆಘಾತವನ್ನು ಕರ್ನಾಟಕದಲ್ಲಿ ಆಗದಂತೆ ನೋಡಿಕೊಳ್ಳಲು ಹಿರಿಯ ಕಾಂಗ್ರೆಸ್ಸಿಗ ಗುಲಾಂ ನಬಿ ಅಜಾದ್ ಮುಂದಾಗಿದ್ದಾರೆ. ಇದಕ್ಕಾಗಿ ಜಾತ್ಯಾತೀತ ಜನತಾ ದಳ ಜತೆ ಮೈತ್ರಿ ಸಾಧಿಸಲು ಕಾಂಗ್ರೆಸ್ ಮುಂದಾಗಿದೆ.
ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಅವರ ಎಲ್ಲಾ ಬೇಡಿಕೆಗೆ ಒಪ್ಪಿಗೆ ಸೂಚಿಸಿ, ಎಚ್ ಡಿ ಕುಮಾರಸ್ವಾಮಿ ಅವರನ್ನು ಸಿಎಂ ಆಗಿ ಮಾಡಲು ಮುಂದಾಗಿದ್ದಾರೆ. ಆಂಟಿ ಕ್ಲೈಮ್ಯಾಕ್ಸ್ ಹಂತ ತಲುಪಿರುವ ಚುನಾವಣೆ ಬ್ಲಾಕ್ ಬಸ್ಟರ್ ಸೋನಿಯಾ ಗಾಂಧಿ ಅವರಿಂದ ಸೂಚನೆ ಎಚ್ ಡಿ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿ, ಅಧಿಕಾರ ಉಳಿಸಿಕೊಳ್ಳಿ ಎಂದು ಗುಲಾಂ ನಬಿ ಅಜಾದ್ ಹಾಗೂ ಸಿದ್ದರಾಮಯ್ಯ ಅವರಿಗೆ ಸೂಚಿಸಿದ್ದಾರೆ.
ಇದಲ್ಲದೆ, ಖುದ್ದು ಸೋನಿಯಾ ಅವರು ಎಚ್ ಡಿ ಕುಮಾರಸ್ವಾಮಿ ಅವರಿಗೆ ಫೋನ್ ಕರೆ ಮಾಡಿ, ಮೈತ್ರಿಗೆ ಆಹ್ವಾನ ನೀಡಿದ್ದಾರೆ ಎಂಬ ಸುದ್ದಿಯಿದೆ. ಕರ್ನಾಟಕ ವಿಧಾನಸಭೆ ಚುನಾವಣಾ ಫಲಿತಾಂಶ 2018: ಗೆದ್ದವರ ಸಂಪೂರ್ಣ ಪಟ್ಟಿ ಇದಾದ ನಂತರ ಗುಲಾಂ ನಬಿ ಅಜಾದ್ ಅವರು ಕುಮಾರಸ್ವಾಮಿ ನೇತೃತ್ವದಲ್ಲಿ 117 ಶಾಸಕರಬೆಂಬಲದಿಂದ ಅಧಿಕಾರ ಸ್ಥಾಪಿಸಲು ಹಕ್ಕು ಮಂಡಿಸಲು, ರಾಜ್ಯಪಾಲ ವಜುಭಾಯಿ ವಾಲರನ್ನು ಭೇಟಿ ಮಾಡಲು ಮುಂದಾಗಿದ್ದು, ಕಾಲಾವಕಾಶ ಕೋರಿದ್ದಾರೆ.
ಆದರೆ, ಅತಿದೊಡ್ಡ ಪಕ್ಷಕ್ಕೆ ಅವಕಾಶ ನೀಡುವುದಾಗಿ ಹೇಳಿದರೆ ಮಾತ್ರ, ಬಿಜೆಪಿ ಕೂಡಾ ತನ್ನ ಹಕ್ಕು ಮಂಡಿಸಬಹುದಾಗಿದೆ. ಈ ಸಮಯಕ್ಕೆ 2.35ಕ್ಕೆ * ಬಲಾಬಲ 222/224: ಬಿಜೆಪಿ 104, ಕಾಂಗ್ರೆಸ್ 77, ಜೆಡಿಎಸ್ 39, ಇತರೆ 2 * ಅಧಿಕಾರ ಸ್ಥಾಪನೆಗೆ ಬೇಕಾದ ಸಂಖ್ಯೆ : 112 * ಉಪ ಚುನಾವಣೆ ನಡೆಯಬೇಕಾಗಿರುವ ಕ್ಷೇತ್ರಗಳು : 2+1(ಕುಮಾರಸ್ವಾಮಿ ಎರಡು ಕ್ಷೇತ್ರಗಳಲ್ಲಿ ಗೆದ್ದಿದ್ದಾರೆ, ಒಂದು ಕ್ಷೇತ್ರಕ್ಕೆ ಮತ್ತೆ ಚುನಾವಣೆ ನಡೆಯಲಿದೆ. * ಗೆದ್ದಿರುವ ಇತರೆ ಪೈಕಿ ಬಿಎಸ್ಪಿ ಅಭ್ಯರ್ಥಿ ಜೆಡಿಎಸ್ ಬೆಂಬಲ ನೀಡಲಿದ್ದಾರೆ. ಕೆಪಿಜೆಪಿಯ ಅಭ್ಯರ್ಥಿ ಬಿಜೆಪಿಗೆ ಬೆಂಬಲಿಸಲಿದ್ದಾರೆ.
Click this button or press Ctrl+G to toggle between Kannada and English