ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಬಹುದೊಡ್ಡ ಪಕ್ಷವಾಗಿ ಹೊರ ಹೊಮ್ಮಿದೆ. ಇದ್ರಿಂದ ಬೇರೆ ಪಕ್ಷಗಳು ರೆಸಾರ್ಟ್ ರಾಜಕಾರಣ ಮಾಡ್ತಿದಾರೆ. ಜೆಡಿಎಸ್ನಲ್ಲಿ ಬಂಡಾಯ ಎದ್ದವರನ್ನು ಪಕ್ಷಕ್ಕೆ ಮತ್ತೆ ಸೇರಿಸಿಕೊಂಡಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಕಿಡಿಕಾರಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ಗೆ ಈಗಲಾದ್ರು ಬುದ್ಧಿ ಬರಬೇಕಿತ್ತು. ಸಿದ್ದರಾಮಯ್ಯರದು ದುರಾಂಕಾರ, ಜಾತಿ , ಷಡ್ಯಂತ್ರದ ರಾಜಕಾರಣ. ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸದಂತೆ ಕುತಂತ್ರ ನಡೆಸಿದ್ರು. ಆದರೆ ಯಾರು ಏನೇ ಮಾಡಿದ್ರು ಇನ್ನ ಎರಡು ಮೂರು ದಿನದಲ್ಲಿ ಯಡಿಯೂರಪ್ಪ ಬಹುಮತ ಸಾಬೀತು ಪಡಿಸ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬೇರೆ ಪಕ್ಷಗಳಲ್ಲಿ ಗೆದ್ದವರನ್ನ ರೆಸಾರ್ಟ್ಗಳಲ್ಲಿ ಕೂಡಿ ಹಾಕಿದ್ದಾರೆ. ಕಾಂಗ್ರೆಸ್ ಆಡಳಿತದಲ್ಲಿ ಸಾಕಷ್ಟು ಸಂಘರ್ಷಗಳು ನಡೆದಿವೆ. ಅದನ್ನು ನಾಡಿನ ಜನತೆ ಕಂಡಿದ್ದಾರೆ. ಕಾಂಗ್ರೆಸ್ನವರು ಸುಪ್ರೀಂ ಕೋರ್ಟ್ ತೀರ್ಪನ್ನ ತರಿಸಿ ಓದಿಕೊಳ್ಳಬೇಕು. ಯಡಿಯೂರಪ್ಪನವರು ರಾಜ್ಯಪಾಲರಿಗೆ 15 ಮತ್ತು 16 ರಂದು ಪತ್ರ ಬರೆದಿದ್ರು. ಆ ಪತ್ರವನ್ನ ಕೋರ್ಟ್ಗೆ ನೀಡುವಂತೆ ಆದೇಶವಾಗಿದೆ ಅಷ್ಟೇ. ಆ ಪತ್ರವನ್ನ ನಾವು ತಲುಪಿಸಿದ್ದೇವೆ.ಯಾರು ಏನೇ ಕುತಂತ್ರ ನಡೆಸಿದ್ರು ನಾವು ಸರ್ಕಾರ ರಚಿಸುತ್ತೇವೆ ಎಂದರು.
Click this button or press Ctrl+G to toggle between Kannada and English