ಬೆಂಗಳೂರು: ನಿನ್ನೆಯಿಂದ ರಾಜ್ಯ ರಾಜಕಾರಣ ದೇಶದ ಗಮನ ಸೆಳೆಯುತ್ತಿದೆ. ರಾಜಕೀಯ ಚಟುವಟಿಕೆಗಳು ಕ್ಷಣ ಕ್ಷಣಕ್ಕೂ ರೋಚಕತೆ ಪಡೆಯುತ್ತಿವೆ.
ಬಹುಮತಕ್ಕೆ ಸಂಖ್ಯಾಬಲದ ಕೊರತೆಯ ನಡುವೆಯೂ ಬಿಜೆಪಿಯ ಯಡಿಯೂರಪ್ಪ ಸಿಎಂ ಆಗಿ ಇಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇತ್ತ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಬಿಜೆಪಿಯ ನಡೆಯ ವಿರುದ್ಧ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿವೆ.
ರಾಜ್ಯದಲ್ಲಿ ಉಂಟಾಗಿರುವ ರಾಜಕೀಯ ಅಸ್ಥಿರತೆಗೆ ನಟ ಪ್ರಕಾಶ್ ರೈ ಬೇಸರ ವ್ಯಕ್ತಪಡಿಸಿದ್ದಾರೆ. ಇಂದು ಮುಂಜಾನೆಯಿಂದ ಸರಣಿ ಟ್ವೀಟ್‌ಗಳ ಮೂಲಕ ತಮ್ಮ ಬೇಸರ ಹೊರಹಾಕಿದ್ದಾರೆ. ಇದೀಗ ಮತ್ತೊಂದು ಟ್ವಿಟ್ ಮಾಡಿರುವ ಅವರು, ರಾಜ್ಯ ರಾಜಕಾರಣವನ್ನು ಅಣುಕಿಸಿದ್ದಾರೆ. ಪ್ರಕಾಶ್ ರೈ ಮಾಡಿರುವ ಟ್ವೀಟ್ ಈ ಕೆಳಗಿನಂತಿದೆ.
”ಸರ್ಕಾರ ರಚಿಸಲು ಹಾಲಿಡೇ ರೆಸಾರ್ಟ್ ಮ್ಯಾನೇಜರ್ ಮುಂದಾಗಿದ್ದಾರೆ. ಯಾಕಂದ್ರೆ ಅವರ ಬಳಿ 116 ಎಂಎಲ್‌ಎಗಳಿದ್ದಾರೆ. ನಿಜವಾದ ಗೇಮ್ ಈಗ ಪ್ರಾರಂಭವಾಗಿದೆ. ಎಲ್ಲರೂ ರಾಜಕೀಯ ಆಶ್ರಯಿಸುತ್ತಿದ್ದಾರೆ” ಎಂದು ಪ್ರಕಾಶ್ ರೈ ಕುಟುಕಿದ್ದಾರೆ.
Click this button or press Ctrl+G to toggle between Kannada and English