ಬೆಂಗಳೂರು: ನಮ್ಮ ಒಬ್ಬ ಶಾಸಕರನ್ನು ಹೊರತುಪಡಿಸಿದರೆ ಎಲ್ಲರೂ ಜತೆಯಲ್ಲೆ ಇದ್ದಾರೆ. ಯಾರೂ ಬಿಟ್ಟು ಹೋಗಿಲ್ಲ ಎಂದು ಶಾಸಕ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಬೆಂಗಳೂರಿನ ಅಶೋಕ ಹೋಟೆಲ್‌ನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಸಂಪರ್ಕಕ್ಕೆ ಸಿಗದಿರುವ ಶಾಸಕರ ಬಗ್ಗೆ ಈಗ ಏನನ್ನೂ ಹೇಳಲ್ಲ. ಅವರು ನಮ್ಮೊಂದಿಗೆ ಇಲ್ಲ ಅಷ್ಟೆ, ಸಂಪರ್ಕದಲ್ಲಿದ್ದಾರೆ. ನಮ್ಮ ಶಾಸಕರು ನಮ್ಮೊಂದಿಗೆ ಇದ್ದಾರೆ, ಎಲ್ಲಿಯೂ ಹೋಗಲ್ಲ. ಅಗತ್ಯ ಸಂದರ್ಭ ಬಂದಾಗ ನಮ್ಮ ಬಲ ತೋರಿಸುತ್ತೇವೆ. ನಾವು ನಮ್ಮ ನಡೆಯನ್ನು ಈಗ ತಿಳಿಸಲ್ಲ. ಅಗತ್ಯ ಬಂದಾಗ ನಿಮಗೇ ಅರಿವಾಗುತ್ತದೆ ಎಂದರು.
ನಮಗೆ ನೀಡಿದ್ದ ಸುರಕ್ಷತೆ, ಪೊಲೀಸ್ ಭದ್ರತೆ ವಾಪಸ್ ಪಡೆಯಲಾಗಿದೆ. ಮುಖ್ಯಮಂತ್ರಿಯಾಗಿ ಅವರಿಗೆ ಯಾವುದೇ ಸಂವಿಧಾನದತ್ತ ಅಧಿಕಾರ ಇಲ್ಲ. ಆಗಲೇ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಬಿಎಸ್‌ವೈ ಅವಸರದಲ್ಲಿ ಎಂಎಸ್‌ಸಿ ನೇಮಕ, ಅಧಿಕಾರಿಗಳ ನೇಮಕ ಮಾಡುತ್ತಿದ್ದಾರೆ ಎಂದರು.
ಶಾಸಕರಿಗೇ ರಕ್ಷಣೆ ಕೊಡಲಾಗದವರು, ಸಾಮಾನ್ಯರಿಗೆ ಹೇಗೆ ರಕ್ಷಣೆ ಕೊಡುತ್ತಾರೆ. ನಮಗೆ ನಮ್ಮದೇ ರಕ್ಷಣಾ ವ್ಯವಸ್ಥೆ ಇದೆ. ಕಾರ್ಯಕರ್ತರು ಇದ್ದಾರೆ. ನಮ್ಮ ಶಾಸಕರನ್ನು ಒಳಗೆ ಅಥವಾ ಹೊರಗೆ ಎಲ್ಲಿಯೇ ಆದರೂ ಕರೆದೊಯ್ದು ರಕ್ಷಿಸಿಕೊಳ್ಳುತ್ತೇವೆ ಎಂದರು.
ಯಡಿಯೂರಪ್ಪ ಬಹಳ ಅರ್ಜೆಂಟಲ್ಲಿ ಇದ್ದಾರೆ. ರಾಜ್ಯಪಾಲರ ಮೂಲಕ ಒಬ್ಬ ನಾಮನಿರ್ದೇಶನ ಸದಸ್ಯರನ್ನು ನೇಮಿಸಿದ್ದಾರೆ. ಪೊಲೀಸ್ ಅಧಿಕಾರಿ ವರ್ಗದವರನ್ನು ವರ್ಗಾಯಿಸಿದ್ದಾರೆ. ತಮಗೆ ಬೇಕಾದವರನ್ನು ನೇಮಿಸಿದ್ದಾರೆ. ರಾಮನಗರದ ಈಗಲ್‌ಟನ್ ರೆಸಾರ್ಟ್ ಭದ್ರತೆ ಹಿಂಪಡೆದಿದ್ದಾರೆ. ನಮ್ಮ ಶಾಸಕರಿಗೆ ರಕ್ಷಣೆಯ ಅವಶ್ಯಕತೆ ಇಲ್ಲ. ರಕ್ಷಣೆಗೆ ಯಡಿಯೂರಪ್ಪ ಬೇಕಿಲ್ಲ. ಕಾರ್ಯಕರ್ತರು ಇದ್ದಾರೆ ಎಂದರು.
Click this button or press Ctrl+G to toggle between Kannada and English