ಮುಖ್ಯಮಂತ್ರಿಗಳಿಂದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನ ಬಿಡುಗಡೆ

9:14 PM, Thursday, October 27th, 2011
Share
1 Star2 Stars3 Stars4 Stars5 Stars
(8 rating, 2 votes)
Loading...

DVS Release Logo

ಮಂಗಳೂರು: ನವೆಂಬರ್ . 18 ಮತ್ತು 19ರಂದು ಅಳಿಕೆಯ ಸತ್ಯಸಾಯಿ ವಿದ್ಯಾಸಂಸ್ಥೆಯ ಆವರಣದಲ್ಲಿ ನಡೆಯಲಿರುವ 17ನೇ ದ. ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನವನ್ನು ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡರು ನಗರದಲ್ಲಿ ಮಂಗಳವಾರ ಬಿಡುಗಡೆಗೊಳಿಸಿದರು.

ಯಕ್ಷಗಾನ ಹಾಗೂ ಕಥಕ್ಕಳಿಯ ವೇಷ, ತೆಂಗು, ಕಂಗು, ಬಾಳೆಯ ಹಿನ್ನಲೆಯನ್ನಾಗಿರಿಸಿ, ಕನ್ನಡದ ‘ಕ’ ಅಕ್ಷರದ ಮುಗುಳಿಯ ನಡುವೆ ಕನ್ನಡ ಭುವನೇಶ್ವರಿ ಹಾಗೂ ತುಳು ಜಾನಪದ ಭೂತಾರಾಧನೆಯನ್ನು ಪ್ರತಿನಿಧಿಸುವ ದೈವಗಳ ಅಣಿಯ ಆವರಣದ ನಡುವೆ ಕನ್ನಡ ಅಂಕೆಯಲ್ಲಿ 17ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ ಹಾಗೂ ಕವಿ ಕಯ್ನಾರರ ಕವನದ ಸಾಲು ‘ಐಕ್ಯವೊಂದೇ ಮಂತ್ರ, ಐಕ್ಯದಿಂದಲೇ ಸ್ವತಂತ್ರ…’ ಎಂಬ ಘೋಷ ವಾಕ್ಯವಿದೆ. ಪುತ್ತೂರಿನ 7ನೇ ತರಗತಿ ವಿದ್ಯಾರ್ಥಿ ಲಕ್ಷ್ಮೀಪ್ರಸಾದ್‌ ಕೆ. ಆಚಾರ್‌ ಅವರು ಲಾಂಛನ ರಚಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ಜೆ. ಕೃಷ್ಣ ಪಾಲೆಮಾರ್‌, ಉನ್ನತ ಶಿಕ್ಷಣ ಸಚಿವ ಡಾ| ವಿ.ಎಸ್‌. ಆಚಾರ್ಯ, ವಿಧಾನಸಭಾ ಉಪಸಭಾಧ್ಯಕ್ಷ ಎನ್‌. ಯೋಗೀಶ್‌ ಭಟ್‌, ಜಿಲ್ಲಾ ಕಸಾಪ ಅಧ್ಯಕ್ಷ ಎಸ್‌. ಪ್ರದೀಪ್‌ ಕುಮಾರ್‌ ಕಲ್ಕೂರ, ಜಿ.ಪಂ. ಅಧ್ಯಕ್ಷೆ ಕೆ.ಟಿ. ಶೈಲಜಾ ಭಟ್‌, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ. ನಾಗರಾಜ ಶೆಟ್ಟಿ, ಜಿ. ಪಂ. ಸಿಇಒ ಡಾ| ಕೆ.ಎನ್‌. ವಿಜಯ ಪ್ರಕಾಶ್‌, ಬಿಜೆಪಿ ಜಿಲ್ಲಾಧ್ಯಕ್ಷ ಪದ್ಮನಾಭ ಕೊಟ್ಟಾರಿ ಮುಂತಾದವರು ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English