ಬೆಂಗಳೂರು: ಸುಪ್ರಿಂ ಕೋರ್ಟ್ ಆದೇಶ ಪಾಲಿಸಲು ನಾವು ಬದ್ಧವಾಗಿದ್ದೇವೆ ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.
ನಾಳೆ ವಿಧಾನಸಭೆ ಅಧಿವೇಶನ ಕರೆಯಲಾಗುವುದು. ಅಧಿವೇಶನ ಕರೆಯುವ ಸಲುವಾಗಿ ಸಚಿವ ಸಂಪುಟ ಸಭೆ ನಡೆಸುತ್ತೇನೆ ಎಂದಿದ್ದಾರೆ.
ಸರ್ಕಾರ ರಚನೆಗೆ ಅಗತ್ಯವಿರುವಷ್ಟು ಸಂಖ್ಯೆಯ ಶಾಸಕರ ಬಲ ಹೊಂದಿದ್ದೇವೆ. ನಾವು ವಿಶ್ವಾಸಮತ ಸಾಧಿಸುತ್ತೇವೆ. ಯಾವುದೇ ಅನುಮಾನವಿಲ್ಲ. ಇಷ್ಟೊಂದು ರಾಜಕೀಯ ಹೈಡ್ರಾಮಾ ನಡುವೆಯೂ ನಾವು ವಿಶ್ವಾಸಮತ ಸಾಬೀತುಪಡಿಸುತ್ತೇವೆ ಎಂದಿದ್ದಾರೆ.
ಸುಪ್ರಿಂ ಕೋರ್ಟ್ ಆದೇಶವನ್ನು ಸ್ವಾಗತಿಸಿದ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ, ಸುಪ್ರಿಂ ಕೋರ್ಟ್ ನೀಡಿದ ನಿರ್ದೇಶನವನ್ನು ಪಾಲಿಸುತ್ತೇವೆ.
ಇದರ ಇನ್ನಷ್ಟು ಮಾಹಿತಿ ಸಿಗಬೇಕು. ನಾನು ನಿರ್ಣಾಯ ವ್ಯಕ್ತಿಯಲ್ಲ. ಅತ್ಯಂತ ಅವಸರದಲ್ಲಿ ಯಾವುದೇ ನಿರ್ಧಾರ ಕೈಗೊಳ್ಳಲಾಗದು. ರಾಜ್ಯ ಬಿಜೆಪಿ ನಾಯಕರು ಈ ಬಗ್ಗೆ ಕ್ರಮ ಕೈಗೊಳ್ಳುತ್ತಾರೆ. ನಾವು ವಿಶ್ವಾಸ ಮತ ಗೆಲ್ಲುತ್ತೇವೆ ಎನ್ನುವ ನಂಬಿಕೆ ಇದೆ ಎಂದಿದ್ದಾರೆ.
Click this button or press Ctrl+G to toggle between Kannada and English