ಕಾಂಗ್ರೆಸ್ ಗೆ ನಾಳೆ ಸದನವನ್ನು ಎದುರಿಸುವ ಧೈರ್ಯವಿಲ್ಲ: ಶೋಭಾ ಕರಂದ್ಲಾಜೆ

5:51 PM, Friday, May 18th, 2018
Share
1 Star2 Stars3 Stars4 Stars5 Stars
(No Ratings Yet)
Loading...

shobha-karandlajeಬೆಂಗಳೂರು: ಕಾಂಗ್ರೆಸ್ ಗೆ ಸದನ ಎದುರಿಸುವ ಧೈರ್ಯವಿಲ್ಲ. ಕಾಂಗ್ರೆಸ್ ನ ಶಾಸಕರು ಹತಾಶರಾಗಿದ್ದಾರೆ. ಭಯಗೊಂಡಿದ್ದಾರೆ. ಹೀಗಾಗಿ ಕಾಂಗ್ರೆಸ್ ಮುಖಂಡರು ಹಂಗಾಮಿ ಸ್ಪೀಕರ್ ಆಗಿ ಕೆ.ಜಿ. ಬೋಪಯ್ಯ ಅವರ ನೇಮಕವನ್ನು ವಿರೋಧಿಸುತ್ತಿದ್ದಾರೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ವ್ಯಂಗ್ಯವಾಡಿದ್ದಾರೆ.

ಹಂಗಾಮಿ ಸ್ಪೀಕರ್ ಆಗಿ ಕೆ.ಜಿ. ಬೋಪಯ್ಯ ನೇಮಕಕ್ಕೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸುತ್ತಿರುವ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೋಪಯ್ಯ ಅವರು 4ನೇ ಬಾರಿ ಆಯ್ಕೆಯಾಗಿದ್ದಾರೆ. ಸ್ಪೀಕರ್ ಆಗಿ ಕೆಲಸ ಮಾಡಿದ ಅನುಭವವಿದೆ. ಹಿಂದೆ ವಿಧಾನಸಭೆಯ ಗೊಂದಲದ ಪರಿಸ್ಥಿತಿಯಲ್ಲಿ ಯಶಸ್ವಿಯಾಗಿ ಸ್ಪೀಕರ್ ಆಗಿ ಕೆಲಸ ನಿಭಾಯಿಸಿದ್ದಾರೆ ಎಂದು ಹೇಳಿದರು.

ನನಗೆ ಕಾಂಗ್ರೆಸ್ ನ ಮಾನಸಿಕತೆ ಅರ್ಥವಾಗುತ್ತಾ ಇಲ್ಲ. ಕಾಂಗ್ರೆಸ್ ಯಾಕೆ ಹತಾಶವಾಗಿದೆ ಗೊತ್ತಾಗ್ತಾ ಇಲ್ಲ. ೫ ವರ್ಷ ಆಳಿದ ಕಾಂಗ್ರೆಸ್ ೭೮ ಸ್ಥಾನ ಗಳಿಸಿ ಮಾನಸಿಕ ಕೀಳರಿಮೆಯಿಂದ ತೊಳಲಾಡ್ತಾಇದೆ. ಈಗ ಸ್ಪೀಕರ್ ಅಧಿಕಾರ ಸ್ವೀಕಾರ ಮಾಡಿದ್ರೆ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸುತ್ತದೆ.2008ರಲ್ಲಿ ನಿಮ್ಮ ಯುಪಿಎ ಸರ್ಕಾರ ನೇಮಿಸಿದ ಗವರ್ನರ್ ಹಂಸರಾಜ ಭಾರಧ್ವಾಜ್ ಅವರು ಕೆ.ಜಿ. ಬೋಪಯ್ಯ ಅವರನ್ನು ಸ್ಪೀಕರ್ ಆಗಿ ನೇಮಿಸಿದಾಗ ನಿಮ್ಮ ಆಕ್ಷೇಪ ಎಲ್ಲಿ ಹೋಗಿತ್ತು ಎಂದು ಪ್ರಶ್ನಿಸಿದರು.

ಬೋಪಯ್ಯ ಅವರಿಗೆ ಅವರದ್ದೇ ಆದ ವಿದ್ವತ್ ಇದೆ. ಅವರು ವಕೀಲರು, ಕಾನೂನು ತಿಳಿದಿದ್ದಾರೆ. ವಿಧಾನಸಭೇಯನ್ನು ಯಶಸ್ವಿಯಾಗಿ ನಡೆಸಿದ್ದಾರೆ. ಆದರೆ ಕಾಂಗ್ರೆಸಿಗರು ಮೊಸರಲ್ಲಿ ಕಲ್ಲು ಹುಡುಕುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ.

ಇದು ಯಾವ ಶೋಚನೀಯ ಸ್ಥಿತಿಗೆ ಇಳಿದಿದೆ ಎನ್ನುವುದಕ್ಕೆ ಸಾಕ್ಷಿ. ಕಾಂಗ್ರೆಸ್ ಕಾರ್ಯಕರ್ತರು ನಮ್ಮನ್ನು ಜೆಡಿಎಸ್ ಹೇಗೆ ನಡೆಸಿಕೊಳ್ಳುತ್ತೆ ಎಂದು ಭಯಗೊಂಡಿದ್ದಾರೆ. ಭಯದಲ್ಲಿ ಕಾಂಗ್ರೆಸ್ ಈ ರೀತಿ ಮಾತನಾಡುತ್ತಿದೆ. 120ಕ್ಕಿಂತಲೂ ಹೆಚ್ಚು ಸದಸ್ಯರು ಬಿಜೆಪಿ ಬೆಂಬಲಕ್ಕೆ ಇದ್ದಾರೆ ಎಂದು ಶೋಭಾ ಹೇಳಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English