ಶಕ್ತಿ ಪ್ರದರ್ಶನಕ್ಕೆ ಕ್ಷಣಗಣನೆ… ಕಲಾಪಕ್ಕೆ ಇಬ್ಬರು ಶಾಸಕರು ಗೈರು..!

11:40 AM, Saturday, May 19th, 2018
Share
1 Star2 Stars3 Stars4 Stars5 Stars
(No Ratings Yet)
Loading...

yedeyurappaಬೆಂಗಳೂರು: ಬಿಜೆಪಿ ಸರ್ಕಾರ ಬಹುಮತವನ್ನು ಸದನದಲ್ಲಿ ಇಂದು ಸಂಜೆ 4ಗಂಟೆಗೆ ಸಾಬೀತುಪಡಿಸಿಲು ಸುಪ್ರೀಂ ಕೋರ್ಟ್‌ ಆದೇಶಿಸಿದ್ದು, ಇಂದು ರಾಜಕೀಯ ಬೆಳವಣಿಗಳು ತೀವ್ರಗೊಂಡಿವೆ. ಮೂರು ಪಕ್ಷಗಳು ಮ್ಯಾಜಿಕ್‌ ನಂಬರ್‌‌ ಗೇಮ್‌ಗಾಗಿ ತಮ್ಮ ರಾಜಕೀಯ ಪಟ್ಟುಗಳನ್ನು ಪ್ರಯೋಗಿಸುತ್ತಿದ್ದಾರೆ.

ಕಾಂಗ್ರೆಸ್‌ ಶಾಸಕರಾದ ಆನಂದ್‌ ಸಿಂಗ್‌, ಪ್ರತಾಪ್‌‌ ಗೌಡ ಪಾಟೀಲ್‌ ಸದನಕ್ಕೆ ಗೈರಾಗಿದ್ದಾರೆ.

10.14 : ಒಮ್ಮೆಗೆ 10 ಶಾಸಕರಂತೆ ಪ್ರಮಾಣವಚನ ಸ್ವೀಕಾರ ಮುಂದುವರಿಕೆ
11.13: ಮೊದಲ ಹಂತದಲ್ಲಿ 10 ಮಂದಿ ಶಾಸಕರಿಂದ ಪ್ರಮಾಣವಚನ ಸ್ವೀಕಾರ
11.12 : ಸದನದಲ್ಲಿ ಶಾಸಕರಿಂದ ಪ್ರಮಾಣವಚನ ಸ್ವೀಕಾರ ಆರಂಭ
ಹಂಗಾಮಿ ಸ್ಪೀಕರ್‌ ಆಗಿ ಕೆ.ಜಿ. ಬೋಪಯ್ಯ ಮುಂದುವರಿಕೆ: ಸುಪ್ರೀಂಕೋರ್ಟ್‌ ಆದೇಶ
11.11 : ಹಂಗಾಮಿ ಸ್ಪೀಕರ್‌ ಬೋಪಯ್ಯ ವಿರುದ್ಧ ಕಾಂಗ್ರೆಸ್‌ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್‌
11.10 ಸದನಕ್ಕೆ ಆಗಮಿಸಿ ಜೆಡಿಎಸ್‌ ರಾಜ್ಯಾಧ್ಯಕ್ಷ ಹೆಚ್‌.ಡಿ.ಕುಮಾರಸ್ವಾಮಿ
ಬೋಪಯ್ಯ ವಿಶ್ವಾಸಮತಯಾಚನೆ ವೇಳೆ ಇರದಿದ್ದರೇ, ಮತ್ಯಾರು ವಿಶ್ವಾಸಮತ ಯಾಚನೆಗೆ ಇರುತ್ತಾರೆ. ನಿಮ್ಮ ವಾದದಲ್ಲೇ ಗೊಂದಲವಿದೆ ಎಂದು ಸಿಬಲ್‌ಗೆ ತಿಳಿಸಿದ ನ್ಯಾಯಮ
11.05 ವಿಧಾನಸಭೆ ಕಲಾಪ ಆರಂಭ, ಸದನವನ್ನು ಅಲಂಕರಿಸಿದ ಹಂಗಾಮಿ ಸ್ಪೀಕರ್‌ ಕೆ.ಜಿ.ಬೋಪಯ್ಯ
11.04 ಹಂಗಾಮಿ ಸ್ಪೀಕರ್‌ ಆಯ್ಕೆ ಬಗೆಗಿನ ಪರಿಶೀಲನೆ, ನಿನ್ನೆ ನಾವು ಬಹುಮತ ಸಾಬೀತಿಗೆ ನೀಡಿದ ಆದೇಶಕ್ಕೆ ವಿರುದ್ಧವಾಗುತ್ತದೆ.: ಸುಪ್ರೀಂ ತ್ರಿಸದಸ್ಯ ಪೀಠ ಅಭಿಪ್ರಾಯ
11.02 ಸಿಎಂ ಯಡಿಯೂರಪ್ಪ, ಸದಾನಂದಗೌಡ ಸದನಕ್ಕೆ ಆಗಮನ
2011ರಲ್ಲಿ ರಾಜಸ್ಥಾನದಲ್ಲಿ ಸ್ಪೀಕರ್‌‌ ಆಯ್ಕೆ ಬಗ್ಗೆ ಸುಪ್ರೀಂ ಕೋರ್ಟ್‌ ನೀಡಿದ್ದ ಆದೇಶ ಓದಿ ಕಪಿಲ್‌ ಸಿಬಲ್‌ ವಾದ
ಇಂದೇ ವಿಶ್ವಾಸಮತ ನಡೆಯಬೇಕಿದೆ-ಕಪಿಲ್‌ಸಿಬಲ್‌ವಾದ
ಬೋಪಯ್ಯ ಆಯ್ಕೆಯನ್ನು ಪರಿಶೀಲಿಸಬೇಕಾದರೆ, ವಿಶ್ವಾಸಮತವನ್ನು ಮುಂದೂಡಬೇಕಾಗುತ್ತೆ.- ನ್ಯಾಯಮೂರ್ತಿ ಎಸ್‌.ಎ.ಬೋಬ್ಡೆ ಅಭಿಪ್ರಾಯ
ಹಿರಿತನವೆಂದರೆ ವಯಸ್ಸಲ್ಲ, ಹೆಚ್ಚು ಬಾರಿ ಶಾಸಕರಾಗಿ ಆಯ್ಕೆಯಾಗಿರುವುದನ್ನು ಪರಿಗಣಿಸಬೇಕು – ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಎಸ್‌.ಎ.ಬೋಬ್ಡೆ ಅಭಿಪ್ರಾಯ
ಹಂಗಾಮಿ ಸ್ಪೀಕರ್‌ ಆಗಿ ಕೆ.ಜಿ.ಬೋಪಯ್ಯ ಆಯ್ಕೆ ವಿಚಾರ. ಬಿಜೆಪಿ ಪರ ಸುಪ್ರೀಂ ಕೋರ್ಟ್‌ನಲ್ಲಿ ಮುಕುಲ್‌ ರೋಹ್ಟಗಿ ಪ್ರತಿವಾದ
10.51 ಸದನದಲ್ಲಿ ಆಸಿನರಾದ ಕಾಂಗ್ರೆಸ್‌-ಜೆಡಿಎಸ್‌ ಶಾಸಕರು
10.45 ಬೋಪಯ್ಯ ಕೇವಲ ಪ್ರಮಾಣವಚನ ಬೋಧಿಸಲಿ, ವಿಶ್ವಾಸಮತ ಯಾಚನೆ ವೇಳೆ ಬೋಪಯ್ಯ ಇರುವುದು ಬೇಡ. ಹಿರಿತನವನ್ನು ಕಡೆಗಡಿಸಿ ಬೋಪಯ್ಯರನ್ನು ಹಂಗಾಮಿ ಸ್ಪೀಕರ್‌ ಮಾಡಲಾಗಿದೆ ಎಂದು ಸಿಬಲ್‌ ಸುಪ್ರೀಂ ಕೋರ್ಟ್‌ನಲ್ಲಿ ವಾದ
10.42 ಸುಪ್ರೀಂ ಕೋರ್ಟ್‌ನಲ್ಲಿ ಕಪಿಲ್‌ ಸಿಬಲ್‌‌‌ ವಾದ , ಬೋಪಯ್ಯ ಪ್ರಮಾಣವಚನ ಬೋಧಿಸುವುದು ಸರಿಯೇ ಎಂದು ಪ್ರಶ್ನಿಸಿದ ಸಿಬಲ್‌‌. ಬೋಪಯ್ಯ ವಿರುದ್ಧ ಈ ಹಿಂದೆಯೂ ಸುಪ್ರೀಂ ಆದೇಶ ನೀಡಿದೆ ಎಂದು ಉಲ್ಲೇಖಿಸಿ ವಾದ
10.39 : ಬಿಜೆಪಿ ಶಾಸಕರಿರುವ ಬಸ್‌ನಲ್ಲಿ ವಿಧಾನಸೌಧದತ್ತ ಹೊರಟ ಸಿಎಂ ಬಿ.ಎಸ್‌.ಯಡಿಯೂರಪ್ಪ
10.36 : ಹಂಗಾಮಿ ಸ್ಪೀಕರ್‌ ಆಗಿ ಕೆ.ಜಿ.ಬೋಪಯ್ಯ ಆಯ್ಕೆ ಪ್ರಶ್ನಿಸಿ ಕಾಂಗ್ರೆಸ್‌ ಸಲ್ಲಿಸಿರುವ ಅರ್ಜಿಯ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ಆರಂಭ.
10.35 : ವಿಧಾನಸೌಧಕ್ಕೆ ಆಗಮಿಸಿದ ಕಾಂಗ್ರೆಸ್‌ ಶಾಸಕರು
ಬಹುಮತ ಸಾಬೀತುಪಡಿಸುವಾಗ ಎಚ್‌.ಡಿ.ಕುಮಾರಸ್ವಾಮಿ 2 ಕ್ಷೇತ್ರಗಳಲ್ಲಿ ಗೆದ್ದಿದ್ದರೂ ಒಂದೇ ಮತ ಚಲಾಯಿಸಬಹುದು. ಸ್ಪೀಕರ್‌ ಸಹ ಮತ ಚಲಾಯಿಸುವಂತಿಲ್ಲ. ಹೀಗಾಗಿ ಇಂದು 220 ಮತಗಳು ಮಾತ್ರ ಚಲಾವಣೆಗೆ ಅರ್ಹವಾಗಿವೆ.
10.21 : ಬಿಜೆಪಿಯವರು ಭ್ರಮೆಯಲ್ಲಿದ್ದಾರೆ, ಸಂಜೆ 4 ಗಂಟೆವರೆಗೂ ಬಿಜೆಪಿಯವರು ನಮ್ಮ ಶಾಸಕರನ್ನು ಸೆಳೆಯಲು ಯತ್ನಿಸುತ್ತಾರೆ. ನಾವೆಲ್ಲಾ ಒಗ್ಗಟ್ಟಿನಿಂದ ಇದ್ದೇವೆ. ಬಹುಮತ ಸಾಬೀತು ಮಾಡುವಲ್ಲಿ ಯಡಿಯೂರಪ್ಪ ಸೋಲುವುದರಲ್ಲಿ ಅನುಮಾನವೇ ಇಲ್ಲ – ಹೆಚ್‌.ಡಿ.ಕುಮಾರಸ್ವಾಮಿ
10.20 : ವಿಧಾನಸೌಧದತ್ತ ಹೊರಟ ಕಾಂಗ್ರೆಸ್‌-ಜೆಡಿಎಸ್‌ ಶಾಸಕರಿರುವ ಬಸ್‌
10.15 : ವಿಧಾನಸೌಧದತ್ತ ಬಿಜೆಪಿ ಶಾಸಕರಿರುವ ಬಸ್‌
9.52 ವಿಧಾನಸೌಧಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ, ಕೆ.ಜೆ.ಜಾರ್ಜ್‌‌ ಆಗಮನ
9.33 : ಲಿ ಮೆರಿಡಿಯನ್‌ ಹೋಟೆಲ್‌ ಬಳಿ ಕಾಣಿಸಿಕೊಂಡು ಕುತೂಹಲ ಮೂಡಿಸಿದ ಇಂಟೆಲಿಜೆನ್ಸ್‌‌ ಅಧಿಕಾರಿಗಳು
9.27 : ಮೋದಿ, ಅಮಿತ್‌ ಶಾರ ಯಾವ ಕುತಂತ್ರವೂ ನಡೆಯೋಲ್ಲ, ನಮ್ಮ ಸಮಿಶ್ರ ಸರ್ಕಾರ ಬರುವುದು ಖಚಿತ : ರಾಮಲಿಂಗಾರೆಡ್ಡಿ
9.20 : ಶಾಂಗ್ರಿಲಾ ಹೋಟೆಲ್‌ನಲ್ಲಿ ಬಿಜೆಪಿ ಶಾಸಕರ ಸಭೆ, ಯಡಿಯೂರಪ್ಪ, ಅನಂತ ಕುಮಾರ್, ಸದಾನಂದ ಗೌಡ ಸೇರಿದಂತೆ ಹಲವು ಮುಖಂಡರು ಭಾಗಿ
9.00: ಬಹುಮತ ಸಾಬೀತಿನಲ್ಲಿ ಶೇ.100ರಷ್ಟು ಯಶಸ್ವಿಯಾಗುತ್ತೇವೆ, ಸರ್ಕಾರ ಉಳಿಸಿಕೊಳ್ಳುತ್ತೇವೆ – ಸಿಎಂ ಬಿ.ಎಸ್‌.ಯಡಿಯೂರಪ್ಪ
ಬೆಳಗ್ಗೆ 7 ಗಂಟೆಗೆ ಹೈದ್ರಾಬಾದ್‌ನಿಂದ ಬೆಂಗಳೂರಿಗೆ ಬಸ್‌ನಲ್ಲಿ ಆಗಮಿಸಿ ಕಾಂಗ್ರೆಸ್‌-ಜೆಡಿಎಸ್‌ ಶಾಸಕರು

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English