ಬೆಂಗಳೂರು: ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಮೂರು ದಿನದ ಅಧಿಕಾರದ ಅಳಿವು ಉಳಿವಿನ ಇಂದಿನ ಸಂದರ್ಭದಲ್ಲಿ ಕಣ್ಮರೆಯಾಗಿರುವ ಇಬ್ಬರು ಶಾಸಕರು ಎಲ್ಲಿದ್ದಾರೆ ಎನ್ನುವ ಪ್ರಶ್ನೆ ಕಾಡುತ್ತಿದೆ.
ಕಣ್ಮರೆಯಾಗಿರುವ ಶಾಸಕರು ಸದ್ಯ ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್‌ನಲ್ಲಿ ಇರಬಹುದು ಎಂದು ಊಹಿಸಲಾಗುತ್ತಿದೆ. ಇವರಿಬ್ಬರೂ ಮಧ್ಯಾಹ್ನ 1 ಗಂಟೆಗೆ ಸದನಕ್ಕೆ ಆಗಮಿಸಬಹುದು, ಅವರನ್ನು ಕರೆತರಲು ಮಾಜಿ ಸಚಿವ ಎಂ.ಬಿ.ಪಾಟೀಲ್ ತೆರಳಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ.
ಮಸ್ಕಿ ಶಾಸಕ ಪ್ರತಾಪ್ ಗೌಡ ಮೂರನೇ ಸಾರಿ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. 2008ರಲ್ಲಿ ಬಿಜೆಪಿಯಿಂದ ಆಯ್ಕೆಯಾಗಿದ್ದ ಪ್ರತಾಪ್ ಗೌಡರು 2013 ಹಾಗೂ 2018ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದಾರೆ.
ಇನ್ನು ಬಳ್ಳಾರಿಯ ವಿಜಯನಗರ ವಿಧಾನಸಭೆ ಕ್ಷೇತ್ರದ ಶಾಸಕರಾಗಿ ಆನಂದ್ ಸಿಂಗ್ ಮೂರನೇ ಸಾರಿ ಆಯ್ಕೆಯಾಗಿದ್ದಾರೆ. 2008 ಹಾಗೂ 2013ರಲ್ಲಿ ಬಿಜೆಪಿಯಿಂದ ಆಯ್ಕೆಯಾಗಿದ್ದ ಅವರು 2018ರಲ್ಲಿ ಕಾಂಗ್ರೆಸ್‌ನಿಂದ ಗೆದ್ದಿದ್ದಾರೆ.
ಕಣ್ಮರೆಯಾಗಿರುವ ಶಾಸಕರು ಮಧ್ಯಾಹ್ನದ ಹೊತ್ತಿಗೆ ಆಗಮಿಸುತ್ತಾರೆ ಎನ್ನಲಾಗಿದೆ. ಒಂದೊಮ್ಮೆ ಅವರು ಆಗಮಿಸಿದರೆ ಮ್ಯಾಜಿಕ್ ಸಂಖ್ಯೆ 112 ಆಗಲಿದೆ. ಅವರಿಬ್ಬರು ಬಂದು ಕಾಂಗ್ರೆಸ್-ಜೆಡಿಎಸ್ ಪರ ಮತದಾನ ಮಾಡುತ್ತಾರೋ? ಬಿಜೆಪಿ ಪರ ಮತದಾನ ಮಾಡುತ್ತಾರೋ ಕಾದು ನೋಡಬೇಕು.
Click this button or press Ctrl+G to toggle between Kannada and English