ಮಂಜೇಶ್ವರ : ವರ್ಕಾಡಿ ಸಮೀಪದ ಬೇಕರಿ ಜಂಕ್ಷನ್ ಬಳಿಯ ಮರದ ಮಿಲ್ಲೊಂದರ ಆವರಣದಲ್ಲಿ ರಾಶಿ ಹಾಕಲಾಗಿದ್ದ ಮರದ ಮೇಲೆ ಅಸ್ವಸ್ತನಾಗಿ ಮಲಗಿದ್ದ ರೀತಿಯಲ್ಲಿ ಕಂಡು ಬಂದ ಬಾಲಕನೋರ್ವ ಸಾವನ್ನಪ್ಪಿರುವ ಘಟನೆ ಕೊಲೆ ಎಂದು ಆತನ ಹೆತ್ತವರು ಆರೋಪಿಸಿದ್ದಾರೆ.
ಮೃತ ಬಾಲಕನನ್ನು ವರ್ಕಾಡಿ ಬೇಕರಿ ಜಂಕ್ಷನ್ ಸಮೀಪದ ಬಾಡಿಗೆ ಮನೆಯಲ್ಲಿ ವಾಸವಿರುವ ಗಂಗಾಧರ ಆಚಾರ್ಯರ ಪುತ್ರ ಶ್ರವಂತ್ ಆಚಾರ್ಯ(09) ಎಂದು ಗುರುತಿಸಲಾಗಿದೆ.
ಮೃತದೇಹದ ಮರಣೋತ್ತರ ಪರೀಕ್ಷೆ ಪೆರಿಯಾರಂ ಮೆಡಿಕಲ್ ಕಾಲೇಜಿನಲ್ಲಿ ನಡೆಸಲಾಯಿತು.
ರವಿವಾರ ಸಂಜೆ ವೇಳೆ ಗೆ ಶ್ರವಂತ್ ಅಂಗಡಿಗೆಂದು ಹೋದವ ಅಸ್ವಸ್ತನಾದ ರೀತಿಯಲ್ಲಿ ಇಲ್ಲಿನ ಮರದ ಮಿಲ್ಲೊಂದರ ಮರದ ರಾಶಿಯಲ್ಲಿ ಮಲಗಿದ್ದ. ಕೂಡಲೇ ಈತನನ್ನು ಉಪ್ಪಳದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ ಬಳಿಕ ಹೆಚ್ಚುವರಿ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಸಾವನ್ನಪ್ಪಿದ್ದಾನೆ.
ಬಾಲಕನನ್ನು ಲೈಂಗಿಕವಾಗಿ ಬಳಸಿ ಕೊಲೆ ಮಾಡಲಾಗಿದೆ ಎನ್ನಲಾಗಿದೆ. ಈ ಬಗ್ಗೆ ಸ್ಥಳೀಯರು ಮತ್ತು ಹೆತ್ತವರು ಸಂಶಯ ವ್ಯಕ್ತ ಪಡಿಸಿದ್ದು ಪೊಲೀಸರು ತಪ್ಪಿತಸ್ಥರನ್ನು ಬಂಧಿಸದಿದ್ದಲ್ಲಿ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಬಾಲಕನ ಕುತ್ತಿಗೆ ಮತ್ತು ಖಾಸಗಿ ಭಾಗದಲ್ಲಿ ಅಧಿಕ ರಕ್ತಸ್ರಾವ ಉಂಟಾಗಿದ್ದು ಇದರಿಂದಾಗಿ ಸಾವು ಸಂಭವಿಸಿದೆಯೆಂದು ಮರಣೋತ್ತರ ಪರೀಕ್ಷೆಯಲ್ಲಿ ಕಂಡು ಬಂದಿದೆ.
ಮಂಜೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Click this button or press Ctrl+G to toggle between Kannada and English