ನಕ್ಸಲ್‌ ಯುವತಿಯಾಗಿ ಬಂಧಿಸಲ್ಪಟ್ಟಿದ್ದ ಯಶೋದಾ ಬಿಡುಗಡೆ

1:48 PM, Saturday, October 29th, 2011
Share
1 Star2 Stars3 Stars4 Stars5 Stars
(0 rating, 5 votes)
Loading...

Yashodha Released

ಉಡುಪಿ: 2003 ರಲ್ಲಿ ಶಂಕಿತ ನಕ್ಸಲ್‌ ಯುವತಿಯಾಗಿ ಪೊಲೀಸರಿಂದ ಬಂಧಿಸಲ್ಪಟ್ಟಿದ್ದ ಕಳಸದ ಯಶೋದಾ ಅವರನ್ನು ಉಡುಪಿ ಜೆಎಂಎಫ್ ನ್ಯಾಯಾಲಯವು ದೋಷಮುಕ್ತಗೊಳಿಸಿದೆ. ನ್ಯಾಯಾಧೀಶ ನರೇಂದ್ರ ಕುಮಾರ್‌ ಗುಣಕಿ ಅವರು ಶುಕ್ರವಾರ (ಅ. ೨೮) ದಂದು ದೋಷಮುಕ್ತದ ತೀರ್ಪು ಪ್ರಕಟಿಸಿದ್ದಾರೆ.

ಎಂಟು ವರ್ಷಗಳ ಹಿಂದೆ ಬಜಗೋಳಿಯ ನಾರಾವಿ ಸಮೀಪದ ಈದುವಿನಲ್ಲಿ ನಡೆದ ಎನ್‌ಕೌಂಟರ್‌ ಗೆ ಸಂಭಂದಿಸಿದಂತೆ ಆಕೆಯನ್ನು ಬಂದಿಸಲಾಗಿತ್ತು.

2003ರ ನ. 16ರಂದು ರಾತ್ರಿ ಅಂದಿನ ಉಡುಪಿ ಎಸ್‌ಪಿ ಮುರುಗನ್‌ ಮತ್ತು ಡಿಸಿಐಬಿ ಇನ್ಸ್‌ಪೆಕ್ಟರ್‌ ಕೆ.ಸಿ. ಅಶೋಕನ್‌ ನೇತೃತ್ವದಲ್ಲಿ ಈದುವಿನ ಬೊಳ್ಳೊಟ್ಟು ಎಂಬಲ್ಲಿ ರಾಮ ಪೂಜಾರಿ ಅವರ ಮನೆಯಲ್ಲಿ ಶಂಕಿತ ನಕ್ಸಲರಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ಮನೆಯನ್ನು ಸುತ್ತುವರಿದು ಶಂಕಿತ ನಕ್ಸಲರ ಮೇಲೆ ಗುಂಡಿನ ದಾಳಿ ನಡೆಸಿದ್ದರು.

ಗುಂಡು ಹಾರಾಟದ ವೇಳೆ ಮನೆಯಲ್ಲಿದ್ದ ರಾಯಚೂರು ಜಿಲ್ಲೆಯ ಹಾಜಿಮಾ ಮತ್ತು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದ ಪಾರ್ವತಿ ಅವರು ಗಂಭೀರ ಗಾಯಗೊಂಡು ಕಾರ್ಕಳದ ಸರಕಾರಿ ಆಸ್ಪತ್ರೆಗೆ ದಾಖಲಾಗಿ ಬಳಿಕ ಮೃತಪಟ್ಟಿದ್ದರು. ಗುಂಡಿನ ಪ್ರತಿದಾಳಿಯಲ್ಲಿ ಪೊಲೀಸರಾದ ಮನೋಹರ ಮತ್ತು ಅಶೋಕ ಅವರು ಗಾಯಗೊಂಡಿದ್ದರು.

ಈ ಪ್ರಕರಣದಲ್ಲಿ ಗುಂಡು ತಗಲಿದ್ದ ಯಶೋದಾ ಪೊಲೀಸರಿಂದ ಬಂಧಿತಳಾಗಿ ಜೈಲು ಸೇರಿದ್ದರು. ಬಳಿಕ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು. ವಿಷ್ಣು ಮತ್ತು ಆನಂದ ಅವರು ಈ ವೇಳೆ ಪರಾರಿಯಾಗಿದ್ದರು.

ಪೊಲೀಸರ ಕೊಲೆ ಯತ್ನ, ಅಕ್ರಮವಾಗಿ ಶಸ್ತ್ರಾಸ್ತ್ರ ಹೊಂದಿದ್ದು, ನಕ್ಸಲರ ನಂಟು, ಇತ್ಯಾದಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್‌ಶೀಟ್‌ ಸಲ್ಲಿಸಿದ್ದರು. ಎಸ್‌ಪಿ ಮುರುಗನ್‌ ಸಹಿತ 40 ಸಾಕ್ಷಿಗಳನ್ನು ನ್ಯಾಯಾಧೀಶರು ವಿಚಾರಣೆ ನಡೆಸಿದ್ದರು.

ಯಶೋದಾ ಪರ ವಕೀಲರಾದ ಉಡುಪಿಯ ಎಂ. ಶಾಂತಾರಾಮ ಶೆಟ್ಟಿ ಮತ್ತು ಬೆಂಗಳೂರಿನ ಬಿ.ಎನ್‌. ಜಗದೀಶ್‌ ವಾದ ಮಂಡನೆ ನಡೆಸಿ, ಅಂದು ರಾಮ ಪೂಜಾರಿ ಅವರ ಮನೆಗೆ ಬಂದಿದ್ದ ಅವಳು ರಾಷ್ಟ್ರೀಯ ಉದ್ಯಾನದಲ್ಲಿ ಒಕ್ಕಲೆಬ್ಬಿಸುವ ಸರಕಾರದ ಕ್ರಮವನ್ನು ವಿರೋಧಿಸುವ ಸಂಘಟನೆಯ ಸದಸ್ಯೆಯಾಗಿ ರಾಮ ಪೂಜಾರಿ ಅವರ ಮನೆಗೆ ಮೀಟಿಂಗ್‌ಗೆ ಬಂದಿದ್ದರು. ಬಸ್‌ ಸಿಗದ ಕಾರಣ ಅಲ್ಲೇ ರಾತ್ರಿ ತಂಗಿದ್ದರು ಎಂಬಿತ್ಯಾದಿ ಬಲವಾದ ಕಾರಣಗಳನ್ನು ಮಂಡಿಸಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English