ಉಡುಪಿ: ಭಾರತೀಯ ಕ್ರಿಕೆಟ್ ತಂಡದ ಕೋಚ್ ರವಿಶಾಸ್ತ್ರಿ ಇಂದು ತಮ್ಮ ತವರೂರಾದ ಉಡುಪಿ ಜಿಲ್ಲೆ ಕಾರ್ಕಳದ ಎರ್ಲಪಾಡಿಯ ಕರ್ವಾಲುಗೆ ಭೇಟಿ ನೀಡಿದ್ದರು.
ಈ ವೇಳೆ ಎರ್ಲಪಾಡಿಯ ಕರ್ವಾಲು ವಿಷ್ಣು ಮೂರ್ತಿ, ನಾಗ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ್ರು.
ಕಳೆದ 10 ವರ್ಷಗಳಿಂದ ಪ್ರತಿ ವರ್ಷ ಶಾಸ್ತ್ರಿ ಅವರು ಪೂಜೆ ಸಲ್ಲಿಸುತ್ತಾ ಬಂದಿದ್ದಾರೆ. ಮೂಲನಾಗನ ಪೂಜೆಯಿಂದ ಸಂತಾನ ಪ್ರಾಪ್ತಿ ನಂಬಿಕೆ ಹಿನ್ನೆಲೆಯಲ್ಲಿ ನಾಗ ಸನ್ನಿಧಿಯಲ್ಲಿ ಶಾಸ್ತ್ರಿ ಅವರು ತನು ತಂಬಿಲ ಅರ್ಪಿಸಿದರು.
ಪ್ರತಿವರ್ಷ ಮೂಲನಾಗ ದರ್ಶನ ಪಡೆಯುವ ಶಾಸ್ತ್ರಿ ಅವರ ಪೂರ್ವಿಕರು ಕರ್ವಾಲಿನಿಂದ ವಲಸೆ ಹೋಗಿದ್ದರು. ಇದೇ ಮೂಲನಾಗ ಪೂಜೆಯ ನಂತರ ಶಾಸ್ತ್ರಿ ಸಂತಾನ ಪಡೆದಿದ್ದು, ಸದ್ಯ ವರ್ಷಕ್ಕೊಮ್ಮೆ ತಂಬಿಲ ಅರ್ಪಿಸುತ್ತಿದ್ದಾರೆ.
Click this button or press Ctrl+G to toggle between Kannada and English