ಶಾಂತಿಯುತ ಬಂಟ್ವಾಳವೇ ನನ್ನ ಗುರಿ : ರಾಜೇಶ್ ನಾಯ್ಕ್

4:25 PM, Tuesday, May 22nd, 2018
Share
1 Star2 Stars3 Stars4 Stars5 Stars
(No Ratings Yet)
Loading...

rajesh-naikಬಂಟ್ವಾಳ: ವಿಧಾನಸಭಾ ಚುನಾವಣೆಯಲ್ಲಿ ಏಳನೇ ಗೆಲುವಿನ ಉತ್ಸಾಹದಲ್ಲಿದ್ದ ಬಂಟ್ವಾಳ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ರಮಾನಾಥ ರೈ ಅವರ ನಾಗಾಲೋಟಕ್ಕೆ ಬ್ರೇಕ್ ಹಾಕಿದವರು ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು. 2013ರ ಚುನಾವಣೆಯಲ್ಲಿ ರೈ ವಿರುದ್ಧ 17,850 ಮತಗಳ ಅಂತರದಲ್ಲಿ ಸೋತಿದ್ದ ರಾಜೇಶ್ ನಾಯ್ಕ್ ಈ ಬಾರಿ 15,971 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ರಾಜೇಶ್ ನಾಯ್ಕ್ ಮಂಗಳೂರು ತಾಲೂಕಿನ ಗಂಜಿಮಠದ ತೆಂಕ ಎಡಪದವು ಗ್ರಾಮದ ನಿವಾಸಿ. ರಮೇಶ ನಾಯ್ಕ್ ಮತ್ತು ಸರೋಜಿನಿ ಆರ್. ನಾಯ್ಕ್ ದಂಪತಿಯ ಇಬ್ಬರು ಮಕ್ಕಳ ಪೈಕಿ ರಾಜೇಶ್ ನಾಯ್ಕ್ ಹಿರಿಯವರು. ಮಂಗಳೂರು ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ, ಮೈಸೂರು ಜೆಎಸ್ಸೆಸ್ಸ್ ಕಾಲೇಜಿನಲ್ಲಿ ಬಿಎಸ್ಸಿ ಪದವಿ ಗಳಿಸಿದ್ದಾರೆ. ಪತ್ನಿ ಉಷಾ ನಾಯ್ಕ್ ಮತ್ತು ಇಬ್ಬರು ಪುತ್ರರೊಂದಿಗೆ ತೆಂಕ ಎಡಪದವು ಗ್ರಾಮದ ಉಳಿಪ್ಪಾಡಿಗುತ್ತು ಒಡ್ಡೂರು ಫಾರ್ಮ್ ಹೌಸ್‌ನಲ್ಲಿ ವಾಸವಾಗಿದ್ದಾರೆ.

ಆರಂಭದಲ್ಲಿ ದಾವಣಗೆರೆಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ನಾಯ್ಕ್ ಬಳಿಕ ಮನೆಯವರ ಅಪೇಕ್ಷೆಯಂತೆ ಊರಿಗೆ ಮರಳಿ ಕೃಷಿಯಲ್ಲಿ ತೊಡಗಿಸಿಕೊಂಡರು. ಕೆಂಪು ಕಲ್ಲಿನ ಕ್ವಾರಿಗೆ ಮಾತ್ರ ಮೀಸಲು ಎಂಬಂತಿದ್ದ ಒಡ್ಡೂರಿನ ಸುಮಾರು ನೂರು ಎಕರೆ ಜಮೀನಿನಲ್ಲಿ ಅಡಿಕೆ, ತೆಂಗು, ಮಾವು, ಅರಶಿನ, ಅನನಾಸು, ವಿವಿಧ ಬಗೆಯ ತರಕಾರಿಗಳನ್ನು ಬೆಳೆದು ಸಾವಯವ ಕೃಷಿಯಲ್ಲಿ ಇತರ ರೈತರಿಗೆ ಮಾದರಿಯಾಗಿದ್ದಾರೆ. 200ಕ್ಕೂ ಹೆಚ್ಚು ಹಸುಗಳನ್ನು ಹೊಂದಿದ್ದು ದಿನವೊಂದಕ್ಕೆ ಸುಮಾರು 800ರಿಂದ 1,000 ಲೀಟರ್ ಹಾಲು ಉತ್ಪಾದನೆ ಆಗುತ್ತಿದೆ. ಪ್ರತೀದಿನ 60 ಕೆವಿ ಬಯೋಗ್ಯಾಸ್ ವಿದ್ಯುತ್ ಉತ್ಪಾದನೆ ಮೂಲಕ ಸ್ವಾವಲಂಬನೆ ಕಂಡುಕೊಂಡಿದ್ದಾರೆ. ಸುಮಾರು ಎರಡು ಎಕರೆ ಜಮೀನಿನಲ್ಲಿ 50 ಅಡಿ ಆಳಕ್ಕೆ ಕೆರೆ ನಿರ್ಮಿಸಿ ಇದರಲ್ಲಿ ವರ್ಷವಿಡೀ ನೀರು ತುಂಬಿರುತ್ತದೆ.

ಕ್ರೀಡಾಪಟುವಾಗಿರುವ ಅವರು ಒಡ್ಡೂರಿನ ತನ್ನ ಮನೆ ಯಂಗಳದಲ್ಲಿಯೇ ಕ್ರೀಡಾಂಗಣ ನಿರ್ಮಿಸಿ, ವಿವಿಧ ಕ್ರೀಡೆಗಳಿಗೆ ಪ್ರೋತ್ಸಾಹಿಸುತ್ತಿದ್ದಾರೆ.
ಮೊದಲನೆಯದಾಗಿ ಬಿಜೆಪಿ ಕಾರ್ಯಕರ್ತರ ಪರಿಶ್ರಮ. ಇಲ್ಲಿನ ಶಾಸಕರ ನಡವಳಿಕೆ ಹಾಗೂ ಅವರ ಕೆಲವೊಂದು ವರ್ತನೆಗಳು. ಜನರಿಗೆ ಬಿಜೆಪಿಯ ಮೇಲಿದ್ದ ಒಲವಿನಿಂದ ನಾನು ಗೆದ್ದಿದ್ದೇನೆ. ಅಲ್ಲದೆ, ಕಳೆದ ಬಾರಿಯ ಚುನಾವಣೆಯ ಸೋಲಿನ ಬಳಿಕ ನಿರಂತರವಾಗಿ ಕ್ಷೇತ್ರದ ಜನರ ಸಂಪರ್ಕದಲ್ಲಿದ್ದೇ ನನ್ನ ಗೆಲುವಿನ ಅಂಶಗಳು.

2013ರಲ್ಲಿ ರೈ ಎದುರು ಸೋತ ಬಳಿಕ ನಾನು ಸುಮ್ಮನೆ ಕೂರಲಿಲ್ಲ. ಕ್ಷೇತ್ರದಲ್ಲಿ ಪಾದಯಾತ್ರೆ ಮಾಡಿದ್ದೆ. ಮತ್ತೆ ಪಕ್ಷ ಸಂಘಟನೆಗಾಗಿ 2018ರ ಜ.14ರಂದು ಎರಡನೇ ಬಾರಿ ‘ಪರಿವರ್ತನೆಗೆ ನಮ್ಮ ನಡಿಗೆ’ ಎಂಬ ಪಾದಯಾತ್ರೆಯನ್ನು ಮಾಡಿದ್ದೆ. ಅರಳ ಶ್ರೀಗರುಡ ಮಹಾಂಕಾಳಿ ದೇವಸ್ಥಾನದಿಂದ ಹೊರಟು 59 ಗ್ರಾಮ ವ್ಯಾಪ್ತಿಯಲ್ಲಿ ಸಂಚರಿಸಿ ಕಾರ್ಯಕರ್ತರನ್ನು ಮತ್ತೆ ಹುರಿದುಂಬಿಸಿದ್ದೆ. ಇದರಿಂದ ಜನರ ನಾಡಿಮಿತವನ್ನು ಅರಿಯಲು ಸಾಧ್ಯವಾಯಿತು. ಇದರ ಜೊತೆ ಸಾಮಾಜಿಕ ತಾಣಗಳನ್ನು ಪರಿಣಾಮಕಾರಿಯಾಗಿ ಬಳಸಿದ್ದೇವೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English