ಮಂಗಳೂರು : ಕರಾವಳಿ ಕೆನೆಲ್ ಕ್ಲಬ್ ವತಿಯಿಂದ ನಗರದ ಕದ್ರಿಪಾರ್ಕ್‌ನಲ್ಲಿ ಭಾನುವಾರ ಜರಗಿದ ರಾಜ್ಯಮಟ್ಟದ ಶ್ವಾನಗಳ ಪ್ರದರ್ಶನವನ್ನು ಜಿಲ್ಲಾ ಉಸ್ತುವಾರಿ ಸಚಿವ ಜೆ. ಕೃಷ್ಣ ಪಾಲೆಮಾರ್ ಅವರು ಉದ್ಘಾಟಿಸಿದರು. ರಾಜ್ಯದ ವಿವಿಧಡೆಗಳಿಂದ ಆಗಮಿಸಿದ ಸುಮಾರು 25 ಕ್ಕೂ ಅಧಿಕ ವಿವಿಧ ತಳಿಗಳ 275ಕ್ಕೂ ಮಿಕ್ಕಿ ಶ್ವಾನಗಳು ಪ್ರದರ್ಶನದಲ್ಲಿ ಭಾಗವಹಿಸಿದವು.
ಉದ್ಘಾಟನೆ ಬಳಿಕ ಮಾತನಾಡಿದ ಪಾಲೆಮಾರ್ ಅವರು ಮನೆಯಲ್ಲಿ ನಾಯಿಗಳಿದ್ದರೆ ಭದ್ರತೆ ಇರುತ್ತದೆ. ನಾಯಿ ಪ್ರಮಾಣಿಕತೆಗೆ ಹೆಸರುವಾಸಿಯಾದ ಜೀವಿಯಾದುದರಿಂದ ಮನೆಯ ಯಜಮಾನನಿಗೆ ನಾಯಿ ಒಬ್ಬ ನಂಬಿಗಸ್ಥ ಕೆಲಸದಾಳು ಇದ್ದಂತೆ ಎಂದು ಹೇಳಿದರು. ರಾಜ್ಯದ ವಿವಿದೆಡೆಗಳಿಂದ ಬಂದ ಹಲವಾರು ತಳಿಗಳ ನಾಯಿಗಳನ್ನು ಕಾಣುವ ಅವಕಾಶ ಈ ಪ್ರದರ್ಶನ ಒದಗಿಸಿದೆ ಎಂದರು.
ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ. ನಾಗರಾಜ ಶೆಟ್ಟಿ ಅವರು ಮುಖ್ಯ ಅತಿಥಿಯಾಗಿದ್ದರು. ಮುಂದಿನ ದಿನಗಳಲ್ಲಿ ರಾಜ್ಯದ ಕರಾವಳಿ ಜಿಲ್ಲೆಗಳಿಗೆ ಸೀಮಿತವಾಗಿ ಮತ್ತು ರಾಷ್ಟಮಟ್ಟದ ಶ್ವಾನ ಪ್ರದರ್ಶನಗಳನ್ನು ಆಯೋಜಿಸುವಂತೆ ಸಲಹೆ ಮಾಡಿದರು.
ಪಶುವೈದ್ಯಾಧಿಕಾರಿ ಡಾ| ಆಶೋಕ್ ಕುಮಾರ್ ಅತಿಥಿಯಾಗಿದ್ದರು. ತೀರ್ಪುಗಾರರಾದ ಪ್ರೀತಮ್, ಶಾಂತರಾಮ್ . ಕರಾವಳಿ ಕೆನೆಲ್ ಕ್ಲಬ್ ಅಧ್ಯಕ್ಷ ಟಿ . ಸುಬ್ಬಯ್ಯ ಶೆಟ್ಟಿ, ಕಾರ್ಯದರ್ಶಿ ಪ್ರಸಾದ್ ಐತಾಳ್, ಕೋಶಾಧಿಕಾರಿ ಪ್ರಶಾಂತ್ ಆಳ್ವ, ಉಪಸ್ಥಿತರಿದ್ದರು.
ಡಾಬರ್‌ಮನ್, ಲೆಬ್ರಾಡರ್, ಗೋಲ್ಡನ್ ರೆಟ್‌ರಿವರ್, ಜರ್ಮನ್‌ಶೆಫರ್ಡ್, ಗ್ರೇಟ್‌ಡೆನ್, ಬಾಕ್ಸರ್, ಪಗ್, ಸೈಂಟ್ ಬೆನಾರ್ಡ್, ಮುಧೋಳ್, ನೆಫೂಲಿಯನ್ ಮ್ಯಾಸ್ಟಿವ್, ಶಿಟ್ಸ್ ರಾಮ್‌ಪುರ್ ಹೌಂಡ, ಕ್ಯಾರವಾನ್ ಹೌಂಡ,ಡಾಲಿ¾ಯರ್ ಸೇರಿದಂತೆ ವಿವಿಧ ತಳಿಗಳ ಶ್ವಾನಗಳು ಪ್ರದರ್ಶನಗೊಂಡಿತು.
ಬೆಂಗಳೂರು, ಮೈಸೂರು, ಹಾಸನ, ತುಮಕೂರು, ಗುಲ್ಬರ್ಗಾ ಬಾಗಲಕೋಟೆ, ಉಡುಪಿ, ಉತ್ತರ ಕನ್ನಡ ಸೇರಿದಂತೆ ರಾಜ್ಯದ ವಿವಿದೆಡೆಗಳಿಂದ ಬಂದ ಶ್ವಾನಗಳು ಪ್ರದರ್ಶನದಲ್ಲಿ ಭಾಗವಹಿಸಿದವು.
Click this button or press Ctrl+G to toggle between Kannada and English