ಮುಂಬೈ: ಅಂತಾರಾಷ್ಟ್ರೀಯ ಕ್ರಿಕೆಟ್ ಕಂಡ ಸ್ಪೋಟಕ ಆಟಗಾರ ಎಬಿ ಡಿ ವಿಲಿಯರ್ಸ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುವ ಮೂಲಕ ಕೋಟ್ಯಂತರ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದಾರೆ.
ಹೌದು,ಪ್ರಪಂಚದಾದ್ಯಂತ ಅಭಿಮಾನಿಗಳನ್ನು ಹೊಂದಿರುವ ಎಬಿಡಿ ವಿಲಿಯರ್ಸ್ ಈ ದಿಢೀರ್ ನಿವೃತ್ತಿ ಘೋಸಿಸುವ ಮೂಲಕ ಅವರ ಅಭಿಮಾನಿಗಳಿಗೆ ಬಿಗ್ ಶಾಕ್ ಕೊಟ್ಟಿದ್ದಾರೆ. ದಕ್ಷಿಣ ಆಫ್ರಿಕಾದ ಪರ 14 ವರ್ಷಗಳ ಕಾಲ ಕ್ರಿಕೆಟ್ ಆಡಿರುವ ವಿಲಿಯರ್ಸ್ 114 ಟೆಸ್ಟ್, 228 ಏಕದಿನ ಹಾಗೂ 78 ಟಿ20 ಪಂದ್ಯಗಳನ್ನಾಡಿದ್ದಾರೆ.
14 ವರ್ಷಗಳ ಸುದೀರ್ಘ ಕ್ರಿಕೆಟ್ ಜೀವನದಲ್ಲಿ ನನಗೆ ಬೆಂಬಲ ನೀಡಿದ ದ.ಆಫ್ರಿಕಾ ಕ್ರಿಕೆಟ್ ಮಂಡಳಿ, ವಿಶ್ವದಾದ್ಯಂತ ಇರುವ ಕ್ರಿಕೆಟ್ ಅಭಿಮಾನಿಗಳೆಲ್ಲರಿಗೂ ಎಬಿಡಿ ಭಾವಾನಾತ್ಮಕವಾಗಿ ಧನ್ಯವಾದ ಹೇಳಿದ್ದಾರೆ.
14 ವರ್ಷದ ಹಿಂದೆ ಎಬಿಡಿ ಯಾವುದೇ ಆಸೆ ಆಕಾಂಕ್ಷೆಗಳಿಲ್ಲದೇ ತಮ್ಮ ಕ್ರಿಕೆಟ್ ಜೀವನ ಆರಂಭಿಸಿದ್ದರು. ಪ್ರೆಟೋರಿಯಾದ ಟಕ್ಸ್ ಕ್ರಿಕೆಟ್ ಕ್ಲಬ್‌ನಲ್ಲಿ ಒಬ್ಬ ಸಾಧಾರಣ ಹಾಗೂ ಪೇಲವ ಯುವಕನಾಗಿ ತಮ್ಮ ಕ್ರಿಕೆಟ್ ಕೆರಿಯರ್ ಶುರು ಮಾಡಿದ್ದರು. ಬರೋಬ್ಬರಿ 14 ವರ್ಷಗಳ ಹಿಂದೆ ಶುರು ಮಾಡಿದ್ದ ಆಟಕ್ಕೆ ಅದೇ ಕ್ರೀಡಾಂಗಣದಲ್ಲಿ ಎಡಿಬಿ ಎಲ್ಲ ಮಾದರಿ ಕ್ರಿಕೆಟ್‌ಗೆ ವಿದಾಯ ಹೇಳಿ ಅಚ್ಚರಿ ಮೂಡಿಸಿದ್ದಾರೆ
ಎಲ್ಲ ಬಗೆಯ ಕ್ರಿಕೆಟ್‌ಗೆ ವಿದಾಯ ಹೇಳಿ ಮಾತನಾಡಿದ ಅವರು, ಯುವಕರಿಗೆ ಅವಕಾಶ ಒದಗಿಸಿಕೊಡಲು ಈ ತ್ವರಿತ ನಿರ್ಧಾರ ಕೈಗೊಂಡಿದ್ದೇನೆ. ನನಗೂ ಕೂಡ ವಿಶ್ರಾಂತಿ ಅವಶ್ಯಕತೆಯಿದೆ ಎನ್ನಿಸುತ್ತಿದ್ದು ಈ ನಿರ್ಧಾರ ಕೈಗೊಂಡಿದ್ದೇನೆ ಎಂದಿದ್ದಾರೆ.
ವಿಲಿಯರ್ಸ್ 114 ಟೆಸ್ಟ್ ಪಂದ್ಯಗಳಿಂದ 8765 228 ಏಕದಿನ ಪಂದ್ಯಗಳಿಂದ 9577 ಹಾಗೂ 78 ಟಿ20 ಪಂದ್ಯಗಳಿಂದ 1672 ರನ್‌ಗಳಿಸಿದ್ದಾರೆ.
Click this button or press Ctrl+G to toggle between Kannada and English