ಮಲೆನಾಡಿಗೂ ಕಾಲಿಟ್ಟಿತೇ ಡೆಡ್ಲಿ ವೈರಸ್‌‌‌ ನಿಫಾ?

10:28 AM, Thursday, May 24th, 2018
Share
1 Star2 Stars3 Stars4 Stars5 Stars
(No Ratings Yet)
Loading...

shivamoggaಶಿವಮೊಗ್ಗ: ಜಿಲ್ಲೆಯ ಸಾಗರ ಸರ್ಕಾರಿ ಆಸ್ಪತ್ರೆಯಲ್ಲಿ ಶಂಕಿತ ನಿಫಾ ವೈರಸ್ ಪತ್ತೆಯಾಗಿದೆ ಎಂದು ಹೇಳಲಾಗಿದೆ.

ಮಿಥುನ್ ರಕ್ತದ ಮಾದರಿ ಸಂಗ್ರಹಿಸಿ ಪರೀಕ್ಷೆಗಾಗಿ ಪೂನಾದ ಪ್ರಯೋಗಾಲಯಕ್ಕೆ ರವಾನೆ ಮಾಡಲಾಗಿದ್ದು,ಮೂರು ದಿನದಲ್ಲಿ ರಕ್ತದ ಪರೀಕ್ಷೆ ವರದಿ ಬರಲಿದೆ. ಬಳಿಕವಷ್ಟೇ ಮಿಥುನ್‌ಗೆ ನಿಫಾ ವೈರಸ್ ಇದೆಯೇ ಎಂಬುದು ಗೊತ್ತಾಗಲಿದೆ.

ಸಾಗರದ ಉಪ ವಿಭಾಗೀಯ ಆಸ್ಪತ್ರೆಗೆ ಆರೋಗ್ಯ ಇಲಾಖೆ ಆಧಿಕಾರಿಗಳು ದೌಡಾಯಿಸಿದ್ದು, ಮಾಹಿತಿ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ‌ ನಿಫಾ ಸಂಬಂಧ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.

ನಿಫಾ ವೈರಸ್ ಬಗ್ಗೆ ಸಾಗರ ವೈಧ್ಯಾಧಿಕಾರಿ ಪ್ರಕಾಶ್ ಬೋಸ್ಲೆ ಸ್ಪಷ್ಟನೆ ನೀಡಿದ್ದು, ಎರಡು ದಿನಗಳ ಹಿಂದೆ ಶಿರವಂತೆ ಗ್ರಾಮದ ಮಿಥುನ್ ಅವರಿಗೆ ಜ್ವರ ಕಾಣಿಸಿಕೊಂಡಿದೆ. ಅವರನ್ನು ಅವರ ಮನೆಯಲ್ಲೇ ಪರೀಕ್ಷಿಸಿದಾಗ ಮಿಥುನ್ ಕೇರಳಕ್ಕೆ ಹೋಗಿ ಬಂದ ಮಾಹಿತಿ ನೀಡಿದ್ದರು. ಮಿಥುನ್ ರಕ್ತದ ಸ್ಯಾಂಪಲ್ ಪಡೆದುಕೊಂಡ ವೈದ್ಯರು ಮಹಾರಾಷ್ಟ್ರದ ಪುಣೆಗೆ ಕಳಿಸಿದ್ದಾರೆ. ಮಿಥುನ್‌ಗೆ ಆಸ್ಪತ್ರೆಗೆ ಬಂದು ದಾಖಲಾಗುವಂತೆ ವೈದ್ಯರು ತಿಳಿಸಿದರೂ ಇಲ್ಲಿಯವರೆಗೆ ಆಸ್ಪತ್ರೆಗೆ ದಾಖಲಾಗಿರಲಿಲ್ಲ ಎಂದು ಹೇಳಿದರು.

ಇನ್ನು ಮರತ್ತೂರು ಗ್ರಾಮದ ಬಾವಿಯಲ್ಲಿ ಎರಡು ಬಾವಲಿ ಸತ್ತು ಬಿದ್ದಿದ್ದು, ಇದರಿಂದ ಮನೆಯಲ್ಲಿ ವಾಸಿಸುತ್ತಿದ್ದ ಇಬ್ಬರ ರಕ್ತದ ಸ್ಯಾಂಪಲ್ ಕೂಡ ಪುಣೆಗೆ ಕಳಿಸಿದ್ದೇವೆ. ಸಾರ್ವಜನಿಕರು ವಿಪರೀತ ಜ್ವರ, ಕೆಮ್ಮು ಬಂದರೆ ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಿರಿ. ಯಾರು ಕೂಡ ಭಯ ಪಡುವ ಅವಶ್ಯಕತೆಯಿಲ್ಲ ಎಂದು ಮನವಿ ಮಾಡಿಕೊಂಡಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English