ಕಾಂಗ್ರೆಸ್‌‌ ಮನವೊಲಿಸಲಿ ಬಿಡಲಿ ಗೊತ್ತಿಲ್ಲ, ಸಾಲ ಮನ್ನಾ ಮಾತ್ರ ಮಾಡಲಿ: ಶ್ರೀರಾಮುಲು

1:24 PM, Thursday, May 24th, 2018
Share
1 Star2 Stars3 Stars4 Stars5 Stars
(No Ratings Yet)
Loading...

shri-ramuluಬಳ್ಳಾರಿ: ತೃತೀಯ ರಂಗ ಕಟ್ಟಲು‌‌ ಹೊರಟಿದ್ದಾರೆ‌ ಹೊರತು ಅದು ಯುಪಿಎ ಒಗ್ಗಟ್ಟಲ್ಲ. ಮೋದಿ ಹೋರಾಟ ನಿಲ್ಲಿಸಬೇಕೆಂದು ಎಲ್ಲರು ಒಂದಾಗಿದ್ದಾರೆ ಹಾಗೂ ತೃತೀಯ ರಂಗ ಕಾಂಗ್ರೆಸ್ ವಿರುದ್ಧ ಇದೆ ಎಂದು ಶ್ರೀರಾಮುಲು ಹೇಳಿದರು.

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಮಾಣ ವಚನ ಕಾರ್ಯಕ್ರಮದಲ್ಲಿ ತೃತೀಯ ರಂಗ ರಚನೆಗೆ ಅಷ್ಟೊಂದು ‌ನಾಯಕರು ಬಂದಿದ್ರು. ಅದು ಕಾಂಗ್ರೆಸ್ ಅವನತಿಯ ಮೊದಲ ಮೆಟ್ಟಿಲು. ತೃತೀಯ ರಂಗದಲ್ಲಿ ಕಾಂಗ್ರೆಸ್ ಬೇರೆ ಎಂದು‌ ಮಮತಾ ಬ್ಯಾನರ್ಜಿ ಹೇಳಿದ್ದಾರೆ ಎಂದು ಹೇಳಿದರು.

ಪ್ರಾದೇಶಿಕ ‌ಹಿತಾಸಕ್ತಿಗಾಗಿ ಹೋರಾಟವಿದು. ಮಳೆಗಾಲದಲ್ಲಿ ‌ಅಣಬೆ ಹುಟ್ಟಿದಂತೆ ತೃತೀಯ ರಂಗ ಹುಟ್ಟಿದೆ. ಅದಕ್ಕೆ ಅಯುಷ್ಯ ಹೆಚ್ಚಾಗಿರಲ್ಲ. ಚುನಾವಣೆ ಸಂದರ್ಭದಲ್ಲಿ ಮಾತ್ರ ತೃತೀಯ ರಂಗ ಹುಟ್ಟಿಕೊಳ್ಳುತ್ತದೆ. ನಂತರ ಬೇರೆ ಬೇರೆ ಆಗುತ್ತಾರೆ ಎಂದು ಲೇವಡಿ ಮಾಡಿದರು.

ನಿನ್ನೆ ಬಂದವರೆಲ್ಲ ಸ್ವಾರ್ಥಕ್ಕಾಗಿ ಬಂದಿದ್ದಾರೆ. ಬದ್ಧತೆ ಇಲ್ಲದ ತೃತೀಯ ರಂಗವಿದು. ಪ್ರಧಾನಿ ಪ್ರಮಾಣ ವಚನದ ವೇಳೆ 13 ದೇಶದ ಪ್ರಧಾನಿಗಳು ಬಂದಿದ್ರು. ಅದೇ ರೀತಿ ‌ಮೋದಿ ವಿರೋಧಿ ಬಣ ಸೇರಿಸಿದ್ದಾರೆ. ಮೋದಿ ಕೈಯಲ್ಲಿ ಸೋತವರು ಇಲ್ಲಿಗೆ ಬಂದಿದ್ದಾರೆ ಎಂದು ಕಿಡಿಕಾರಿದರು.

ಕುಮಾರಸ್ವಾಮಿಗೆ ನೈತಿಕತೆ ಇದ್ರೆ ಮೊದಲು ಸಾಲ ಮನ್ನಾ ಮಾಡಲಿ. ಇದೀಗ ಯೂ ಟರ್ನ್ ಹೊಡೆಯುತ್ತಿದ್ದಾರೆ. ಪೂರ್ಣ ಬಹುಮತ ಇಲ್ಲವೆಂದು ನಾಟಕವಾಡ್ತಾ ಇದ್ದಾರೆ. ಬದ್ಧತೆ ಇಲ್ಲದ ನಾಯಕ ಕುಮಾರಸ್ವಾಮಿ ಎಂದು ಆಕ್ರೋಶ ಹೊರಹಾಕಿದರು.

ಪ್ರನಾಳಿಕೆಯಲ್ಲಿ‌ ಹೇಳಿದಂತೆ ನಡೆದುಕೊಳ್ಳಲಿ. ಸಾಲ ಮನ್ನಾ ಮಾಡಲೇಬೇಕು. ಕಾಂಗ್ರೆಸ್ ಮನವೊಲಿಸಲಿ ಬಿಡಲಿ ಗೊತ್ತಿಲ್ಲ. ಆದರೆ ಸಾಲ ಮನ್ನಾ ಮಾತ್ರ ಮಾಡಲಿ ಎಂದು ಎಚ್ಚರಿಕೆ ನೀಡಿದರು.

ಜಿಲ್ಲೆಯಲ್ಲಿ ಒಂದಷ್ಟು ಸೋಲಾಗಿದೆ. ನಾವು‌ ಹಿಂದೂತ್ವವಾದಿಗಳು. ಅದರಿಂದ ‌ಸೋಲಾಗಿದೆ ಅನ್ನೋದನ್ನು ನಾನು ‌ಒಪ್ಪಲ್ಲ. ಇನ್ನು ಡಿಕೆಶಿ ಭಿನ್ನಾಭಿಪ್ರಾಯ ‌ನಾವು ಬಳಸಿಕೊಳ್ಳಲ್ಲ. ಹಾಗೆಯೇ ನನ್ನ ಆಡಿಯೋ ಬೋಗಸ್. ಅದನ್ನೆಲ್ಲಾ ಕ್ರಿಯೇಟ್ ಮಾಡಲಾಗಿದೆ. ಹಣೆ ಬರಹದಲ್ಲಿ ಬರೆದಂಗೆ ಆಗುತ್ತದೆ. ಪಕ್ಷದ ತೀರ್ಮಾನಕ್ಕೆ ಬದ್ಧ ಎಂದು ಹೇಳಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English