ಜೆಡಿಎಸ್ -ಕಾಂಗ್ರೆಸ್ ಶಾಸಕರನ್ನು ರೆಸಾರ್ಟ್ ನಲ್ಲಿ ಒಂಬತ್ತು ದಿನಗಳಿಂದಲೂ ಕೂಡಿ ಹಾಕಿದರು

9:32 PM, Thursday, May 24th, 2018
Share
1 Star2 Stars3 Stars4 Stars5 Stars
(No Ratings Yet)
Loading...

resortಬೆಂಗಳೂರು : ಬಿಜೆಪಿ ವಿಶ್ವಾಸ ಮತ ಯಾಚನೆ ಮಾಡದೇ ಸದನ ದಿಂದ ಹೊರನಡೆದ ಮೇಲೆ ಕಾಂಗ್ರೆಸ್ ಜೆಡಿಎಸ್ ಜೊತೆ ಸೇರಿ ಕುಮಾರ ಸ್ವಾಮಿಗೆ ಮುಖ್ಯ ಮಂತ್ರಿ ಆಸೆ ತೋರಿಸಿ ಹೇಗಾದರೂ ಮಾಡಿ ರಾಜ್ಯಭಾರ  ಮಾಡಬೇಕು ಎನ್ನುವ ಆತುರದಲ್ಲಿರುವ ಕಾಂಗ್ರೆಸ್ ವಿಶ್ವಾಸಮತ ಯಾಚನೆ ವೇಳೆ ಶಾಸಕರು ತಪ್ಪಿಸಿಕೊಳ್ಳಬಾರದು ಎಂಬ ಉದ್ದೇಶದಿಂದ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರನ್ನು ನಗರದ ರೆಸಾರ್ಟ್ ವೊಂದರಲ್ಲಿ ಇರಿಸಿದ್ದಾರೆ, ಚುನಾವಣೆಯಲ್ಲಿ ಆತಂತ್ರ ಫಲಿತಾಂಶ ದೊರೆತ ನಂತರ ಕಳೆದ ಒಂಬತ್ತು ದಿನಗಳಿಂದಲೂ ಶಾಸಕರು ಅವರ ಕುಟುಂಬದಿಂದ ದೂರ ಉಳಿದಿದ್ದಾರೆ.

ದೊಮ್ಮಲೂರಿನ ಹಿಲ್ಟನ್ ಎಂಬೆಸಿ ಗಲ್ಪ್ ಲಿಂಕ್ಸ್ ನಲ್ಲಿ ಕಾಂಗ್ರೆಸ್ ಶಾಸಕರು ತಂಗಿದ್ದರೆ, ನಗರದ ಹೊರವಲಯ ದೇವನಹಳ್ಳಿಯ ಪ್ರಸ್ಟಿಜ್ ಗಲ್ಪ್ ಸೈರ್ ನಲ್ಲಿ ಜೆಡಿಎಸ್ ಶಾಸಕರು ವಾಸ್ತವ್ಯ ಹೂಡಿದ್ದಾರೆ.

ವಿಶ್ವಾಸಮತ ಯಾಚನೆವರೆಗೂ ಶಾಸಕರು ರೆಸಾರ್ಟ್ ನಲ್ಲಿ ಇರುತ್ತಾರೆ. ಬಳಿಕ ಅವರ ಕುಟುಂದವರೊಂದಿಗೆ ಸೇರುತ್ತಾರೆ. ನಮ್ಮ ಶಾಸಕರ ನಂಬಿಕೆ ಮೇಲೆ ತಪ್ಪಾದ ಅನಿಸಿಕೆ ವ್ಯಕ್ತಪಡಿಸಲಾಗುತ್ತಿದೆ. ಪಕ್ಷದ ನಿರ್ಧಾರವನ್ನು ಎಲ್ಲರೂ ಬೆಂಬಲಿಸುತ್ತಾರೆ ಎಂದು ಕಾಂಗ್ರೆಸ್ ಮುಖಂಡರೊಬ್ಬರು ಹೇಳಿದ್ದಾರೆ.

ಶಾಸಕರ ಮೊಬೈಲ್ ಪೋನ್ ಕೂಡಾ ವಶಪಡಿಸಿಕೊಂಡಿದ್ದು, ಹೊರ ಜಗತ್ತಿನ ಸಂಪರ್ಕವೇ ಸಿಗದಂತೆ ಮಾಡಲಾಗಿದೆ. ಅವರಿಂದಲೇ ಪಡೆದು ಮನೆಯವರ ಜೊತೆ ಮಾತನಾಡಲಾಗುತ್ತದೆ. ವಿಶ್ವಾಸ ಮತ ಯಾಚನೆ ವೇಳೆ ಹೊಸ ಸರ್ಕಾರವನ್ನು ಬೀಳಿಸಲಾಗುತ್ತದೆ ಎಂದು ಕೆಲವರು ವದಂತಿ ಹರಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ರೆಸಾರ್ಟ್ ಹೊರಗಡೆ ಯಾರೊಂದಿಗೂ ಮಾತನಾಡದಂತೆ ಶಾಸಕರನ್ನು ನಿರ್ಬಂಧಿಸಲಾಗಿದೆ. ವಿಶ್ವಾಸಮತ ಬಳಿಕ ಅವರ ಮನೆಗಳಿಗೆ ತೆರಳಲಿದ್ದಾರೆ. ಯಾರೂ ಮೊಬೈಲ್ ಪೋನ್ ಬಳಸುವಂತಿಲ್ಲ. ಆದರೆ, ಅವರ ಮನೆಯವರೊಂದಿಗೆ ಮುಕ್ತವಾಗಿ ಮಾತನಾಡಬಹುದಾಗಿದೆ ಎಂದು ಜೆಡಿಎಸ್ ಮಾಧ್ಯಮ ವಿಭಾಗದ ಮುಖ್ಯಸ್ಥ ಸದಾನಂದ ಹೇಳಿದ್ದಾರೆ.

ನೂತನ ಸಿಎಂ ಕುಮಾರಸ್ವಾಮಿ ಪದಗ್ರಹಣ ಕಾರ್ಯಕ್ರಮಕ್ಕೆ ಶಾಸಕರನ್ನು ಸಾಕಷ್ಟು ಬಿಗಿ ಭದ್ರತೆಯಲ್ಲಿ ವಿಧಾನಸೌಧದ ಬಳಿಗೆ ಕರೆತಂದು ಬಳಿಕ ರೆಸಾರ್ಟ್ ಹಾಗೂ ಹೋಟೆಲ್ ಗಳಿಗೆ ಕರೆದೊಯ್ಯಲಾಯಿತು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English