ಭಾರತಕ್ಕೆ ಜಗತ್ತಿನಲ್ಲಿ ಅಗ್ರಸ್ಥಾನ ದೊರಕಲು ಭ್ರಷ್ಟಾಚಾರ ತೊಲಗಬೇಕು : ಆಡ್ವಾಣಿ

1:32 PM, Tuesday, November 1st, 2011
Share
1 Star2 Stars3 Stars4 Stars5 Stars
(5 rating, 1 votes)
Loading...

LK Advani Janachetana yatra
ಮಂಗಳೂರು: ಭ್ರಷ್ಟಾಚಾರ ವಿರೋಧಿಸಿ ಮಾಜಿ ಉಪಪ್ರಧಾನಿ ಲಾಲ್‌ಕೃಷ್ಣ ಆಡ್ವಾಣಿಯವರು ಕೈಗೊಂಡಿರುವ ರಾಷ್ಟ್ರೀಯ ಜನ ಚೇತನಾ ಯಾತ್ರೆಯು ಸೋಮವಾರ ನಗರವನ್ನು ತಲುಪಿತು .  ಮಂಗಳೂರಿನ  ಕೇಂದ್ರ ಮೈದಾನಿನಲ್ಲಿ ನಡೆದ  ಬೃಹತ್‌ ಸಮಾವೇಶದಲ್ಲಿ ಜಿಲ್ಲೆಯ ವಿವಿದೆಡೆಗಳಿಂದ ಬಂದ ಅಡ್ವಾಣಿ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ಸಹಸ್ರ ಸಂಖ್ಯೆಯಲ್ಲಿ ನೆರೆದಿದ್ದರು.

ಜನಚೇತನಾ ರಥ ಮಂಗಳೂರು ತಲುಪುತ್ತಿದ್ದಂತೆ ಸಾವಿರಾರು ಅಭಿಮಾನಿಗಳು ಮೆರವಣಿಗೆಯಲ್ಲಿ ಸಾಗಿದರು. ಭ್ರಷ್ಟಾಚಾರವನ್ನು ತೊಲಗಿಸಿ, ವಿದೇಶದಲ್ಲಿರುವ ಕಪ್ಪು ಹಣವನ್ನು ಹಿಂದೆ ತಂದು ಜಗತ್ತಿನ ಅಗ್ರಸ್ಥಾನದ ದೇಶವನ್ನಾಗಿ ಭಾರತವನ್ನು ರೂಪಿಸಲು ದೇಶದ ಜನತೆ ಪಣತೊಡಬೇಕು ಎಂದು ಬಿಜೆಪಿ ನಾಯಕ, ಮಾಜಿ ಉಪಪ್ರಧಾನಿ ಲಾಲ್‌ಕೃಷ್ಣ ಆಡ್ವಾಣಿ ಕರೆ ನೀಡಿದರು.

LK Advani Janachetana yatra

ಅತೀ ಭ್ರಷ್ಟತೆಯಿಂದ ಕೂಡಿದ ಡಾ| ಮನಮೋಹನ್‌ ಸಿಂಗ್‌ ಮತ್ತು ಸೋನಿಯಾ ಗಾಂಧಿ ನೇತೃತ್ವದ ಕೇಂದ್ರದ ಯುಪಿಎ ಸರಕಾರದ ವಿರುದ್ಧ ಸಾರ್ವಜನಿಕ ಜಾಗೃತಿಗಾಗಿ ತಾನು ಕೈಗೊಂಡಿರುವ ಈ ಯಾತ್ರೆಯುದ್ದಕ್ಕೂ ಜನತೆ ಅಪೂರ್ವ ರೀತಿಯಲ್ಲಿ ಸ್ಪಂದಿಸಿದ್ದಾರೆ. ಈ ಯಾತ್ರೆಯ ಮೂಲಕ ಜನಜಾಗೃತಿ ಉಂಟಾಗಿದೆ. ಈ ಯಾತ್ರೆಯ ಸಂದರ್ಭದಲ್ಲಿ ಕರ್ನಾಟಕದ ಜನತೆ ಅಪೂರ್ವವಾಗಿ ಸ್ಪಂದಿಸಿದ್ದಾರೆ. ಈ ಮೂಲಕ ಯಾತ್ರೆಯ ತನ್ನ ಆಶಯ ಸಫಲವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಸ್ವಿಸ್‌ಬ್ಯಾಂಕಿನಲ್ಲಿ ಭಾರತೀಯರ ಸುಮಾರು 25 ಲಕ್ಷ ಕೋಟಿ ರೂ. ಕಪ್ಪು ಹಣವಿದೆ. ಇದನ್ನು ಹಿಂದೆ ತಂದಲ್ಲಿ ದೇಶದ ಎಲ್ಲ 6 ಲಕ್ಷ ಗ್ರಾಮಗಳಿಗೆ ಸಂಪೂರ್ಣ ಮೂಲಸೌಕರ್ಯವನ್ನು ಒದಗಿಸಲು ಸಾಧ್ಯ ಎಂದರು.

LK Advani Janachetana yatra

ಜಮ್ಮು-ಕಾಶ್ಮೀರ ಕುರಿತು ಪ್ರಸ್ತಾವಿಸಿದ ಅವರು ಈ ರಾಜ್ಯಕ್ಕೆ ವಿಶೇಷ ಸ್ಥಾನಮಾನದ ಕುರಿತು ಭಾರತೀಯ ಜನಸಂಘದ ದಿನಗಳಿಂದಲೇ ಟೀಕಿಸಲಾಗಿದೆ. ಬಿಜೆಪಿಯು ಇದೇ ತಣ್ತೀ ಅನುಸರಿಸುತ್ತಿದೆ. ಶ್ಯಾಮ್‌ಪ್ರಸಾದ್‌ ಮುಖರ್ಜಿ ಅವರ ಹೋರಾಟದಿಂದಲೇ ಜಮ್ಮು-ಕಾಶ್ಮೀರ ಭಾರತದ ಸಾಂವಿಧಾನಿಕ ವ್ಯಾಪ್ತಿಗೆ ಒಳಪಡಲು ಸಾಧ್ಯವಾಗಿತ್ತು ಎಂದು ವಿವರಿಸಿದರು.

ಓಟಿಗಾಗಿ ನೋಟು ಎಂಬ ಕೇಂದ್ರ ಸರಕಾರದ ಹಗರಣವು ದೇಶದ ಅತ್ಯಂತ ಕೆಟ್ಟ ಹಗರಣವಾಗಿದೆ. 2ಜಿ, 3ಜಿ ಪ್ರಕರಣದಷ್ಟೇ ಇದು ಖಂಡನೀಯವಾಗಿದೆ. ಓಟಿಗಾಗಿ ನೋಟು ಎಂಬ ಮೂಲಕ ಯುಪಿಎ ಸರಕಾರ ದೇಶದ ಪ್ರಜಾತಾಂತ್ರಿಕ ವ್ಯವಸ್ಥೆಯನ್ನೇ ಅಪಾಯಕ್ಕೆ ಒಡ್ಡಿತು.

ಇದನ್ನು ಗಮನಿಸಿಯೇ ತಾನು ಜನಚೇತನ ಯಾತ್ರೆಗೆ ನಿರ್ಧಾರ ಮಾಡಿದೆ. ಈ ಮೂಲಕ ಜನತೆಯ ಬಳಿಗೆ ಮಹತ್ವದ ವಿಚಾರಗಳನ್ನು ತರಲು ತನಗೆ ಸಾಧ್ಯವಾಯಿತೆಂದು ಆಡ್ವಾಣಿ ವಿವರಿಸಿದರು.

ಆದರೆ ಕರ್ನಾಟಕದ ಜನತೆಗೆ ಸಮಗ್ರ ವಿಚಾರ ತಿಳಿಸಬೇಕೆಂಬ ಕಾರಣದಿಂದ ತಾನಿಲ್ಲಿ ಬಂದಿದ್ದೇನೆ. ನಿನ್ನೆ ಬೆಂಗಳೂರಿನಲ್ಲಿ ಮತ್ತು ಇಂದು ಮಂಗಳೂರಿನಲ್ಲಿ ಸಿಕ್ಕಿರುವ ಸ್ವಾಗತ ತನ್ನ ನಿರ್ಧಾರವನ್ನು ಸಮರ್ಥಿಸಿದೆ ಎಂದರು. ಕರ್ನಾಟಕದ ನೂತನ ಮುಖ್ಯಮಂತ್ರಿ ಸದಾನಂದ ಗೌಡ ಅವರು ಅತ್ಯುತ್ತಮ ಆಡಳಿತ ನೀಡುವ ನಿಟ್ಟಿನಲ್ಲಿ ಸಾಗಿದ್ದಾರೆ. ಅವರ ಕಾರ್ಯತತ್ಪರತೆ ಶ್ಲಾಘನೀಯ ಎಂದು ಆಡ್ವಾಣಿ ಅಭಿನಂದಿಸಿದರು.

ಮುಖ್ಯ ಮಂತ್ರಿ ಡಿ.ವಿ ಸದಾನಂದ ಗೌಡ, ಡಾ. ವಿ.ಎಸ್ ಆಚಾರ್ಯ, ಅನಂತಕುಮಾರ್, ನಳಿನ್ ಕುಮಾರ್ ಕಟೀಲು ಮಾತನಾಡಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English