ಬೆಂಗಳೂರು : ಮೈತ್ರಿ ಸರ್ಕಾರ ನಡೆಸಿರುವ ಕಾಂಗ್ರೆಸ್- ಜೆಡಿಎಸ್ ನಾಯಕರು ಈಗಾಗಲೇ 22:12ರ ಅನುಪಾತದಲ್ಲಿ ಸಚಿವ ಸ್ಥಾನವನ್ನು ಪಡೆದಿದ್ದು, ಖಾತೆ ಹಂಚಿಕೆ ವಿಚಾರವಾಗಿ ಹಗ್ಗ ಜಗ್ಗಾಟ ನಡೆಸಿದ್ದಾರೆ.
ಪ್ರಮುಖ ಖಾತೆ ನಮಗೇ ಬೇಕೆಂದು ದೇವೇಗೌಡರಿಗೆ ಈಗಾಗಲೇ ಕಾಂಗ್ರೆಸ್ಗೆ ಪಟ್ಟಿ ಕಳುಹಿಸಿದ್ದು, ಉಭಯ ಪಕ್ಷಗಳ ನಡುವೆ ಪೈಪೋಟಿ ಆರಂಭವಾಗಿದೆ.
ಇನ್ನು ಹಣಕಾಸು, ಲೋಕೋಪಯೋಗಿ, ಸಮಾಜ ಕಲ್ಯಾಣ, ಇಂಧನ, ಗೃಹ ಇಲಾಖೆಗಳು ತಮಗೆ ಬಿಟ್ಟುಕೊಡುವಂತೆ ಕಾಂಗ್ರೆಸ್ ತಿಳಿಸಿದರೆ ಹಣಕಾಸು, ಲೋಕೋಪಯೋಗಿ, ಇಂಧನ ಖಾತೆಗೆ ಜೆಡಿಎಸ್ ಬೇಡಿಕೆ ಇಟ್ಟಿದೆ. ಸರ್ಕಾರ ರಚನೆಯಾಗಿನಿಂದ ಈ ಕುರಿತ ಚರ್ಚೆ ಎರಡು ಪಕ್ಷದಲ್ಲಿ ಮುಂದುವರೆದಿದ್ದುಖಾತೆಗಳ ಹಂಚಿಕೆಗೆ ವಿಚಾರ ಎರಡು ಪಕ್ಷದ ನಡುವೆ ಇನ್ನೂ ಒಮ್ಮತ ಮೂಡಿಲ್ಲ ಎಂಬ ಮಾಹಿತಿ ಕೂಡ ಇದೆ.
ಸಂಪುಟ ರಚನೆ ಹಿನ್ನೆಲೆ ಕಾಂಗ್ರೆಸ್ ನಾಯಕರು ಇಂದು ಖಾಸಗಿ ಹೊಟೇಲ್ ನಲ್ಲಿ ಸಭೆ ನಡೆಸಿದ್ದಾರೆ. ಸಚಿವ ಸ್ಥಾನಕ್ಕೆ ಶಾಸಕರಿಂದ ಬೇಡಿಕೆ ಹೆಚ್ಚಿದ್ದು, ಯಾರಿಗೆ ಯಾವ ಸ್ಥಾನ ಎಂಬುದರ ಕುರಿತು ಚರ್ಚೆ ಕೂಡ ಮುಂದುವರೆದಿದೆ. ಈ ಸಂಬಂಧ ಇಂದು ಕಾಂಗ್ರೆಸ್ ನಾಯಕರು ದೆಹಲಿಗೆ ತೆರಳಲಿದ್ದು ಹೈಕಮಾಂಡ್ ಜೊತೆ ಚರ್ಚೆ ನಡೆಸಲಿದ್ದಾರೆ. ಹೈಕಮಾಂಡ್ ಜತೆ ಮಾತುಕತೆಗೂ ಮುನ್ನ ಖಾತೆ ಹಂಚಿಕೆ ವಿಚಾರ ಕುರಿತು ಕಾಂಗ್ರೆಸ್ ನಾಯಕರು ಸಿಎಂ ಕುಮಾರಸ್ವಾಮಿ ಜೊತೆ ಚರ್ಚೆ ಕೂಡ ಮಾಡಲಿದ್ದಾರೆ
Click this button or press Ctrl+G to toggle between Kannada and English