ಸುವರ್ಣ ಗ್ರಾಮೋದಯದಲ್ಲಿ ಸಂಪರ್ಕ ವಲಯಕ್ಕೆ ರಾಜ್ಯ ಸರಕಾರದ ಆದ್ಯತೆ :ಪಾಲೆಮಾರ್‌

5:58 PM, Wednesday, November 2nd, 2011
Share
1 Star2 Stars3 Stars4 Stars5 Stars
(0 rating, 4 votes)
Loading...

Kannada Rajyotsava Mangalore

ಮಂಗಳೂರು: ನೆಹರೂ ಮೈದಾನದಲ್ಲಿ ಮಂಗಳವಾರ ಜರಗಿದ ಕರ್ನಾಟಕ ರಾಜ್ಯೋತ್ಸವ ದಿನಾಚಣೆಯ ರಾಷ್ಟ್ರಧ್ವಜಾರೋಹಣವನ್ನು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಜೆ. ಪಾಲೆಮಾರ್‌ ನೆರವೇರಿಸಿದರು. ಗೌರವ ವಂದನೆ ಸ್ವೀಕರಿಸಿದ ಅವರು ಪರೇಡ್‌ ವೀಕ್ಷಣೆ ನಡೆಸಿ ರಾಜ್ಯೋತ್ಸವದ ಸಂದೇಶ ನೀಡಿದರು. ಧ್ವಜಾರೋಹಣಕ್ಕೂ ಮೊದಲು ನಗರದ ಡಾ| ಅಂಬೇಡ್ಕರ್‌ ವೃತ್ತದಿಂದ ನೆಹರೂ ಮೈದಾನ ತನಕ ಕನ್ನಡ ಭುನೇಶ್ವರಿಯ ಮೆರವಣಿಗೆ ನಡೆಯಿತು.

ಸುವರ್ಣ ಗ್ರಾಮೋದಯದ 3ನೇ ಹಂತದಲ್ಲಿ 31 ಕೋಟಿ ರೂ. ಆರ್ಥಿಕ ಗುರಿ ನಿಗದಿಪಡಿಸಲಾಗಿದೆ. 1,467 ಲಕ್ಷ ರೂ. ವೆಚ್ಚದಡಿ 182 ರಸ್ತೆ ಕಾಮಗಾರಿ, 26 ಚರಂಡಿ ಕಾಮಗಾರಿ, 42 ಅಂಗನವಾಡಿ ಹಾಗೂ 6 ಸಮುದಾಯ ಭವನಗಳನ್ನು ನಿರ್ಮಿಸಲಾಗಿದೆ. ಇದಕ್ಕಾಗಿ ಒಟ್ಟು 33 ಗ್ರಾಮಗಳನ್ನು ಆಯ್ಕೆ ಮಾಡಲಾಗಿದೆ. ಗ್ರಾಮೀಣ ಪ್ರದೇಶಗಳ ಸರ್ವತೋಮುಖ ಅಭಿವೃದ್ಧಿಗೆ, ಅದರಲ್ಲೂ ಸಂಪರ್ಕ ವಲಯಕ್ಕೆ ರಾಜ್ಯ ಸರಕಾರ ಆದ್ಯತೆ ನೀಡುತ್ತಿದೆ. ಜಿಲ್ಲೆಯ ಪ್ರತೀ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ತಲಾ 20 ಕಿ.ಮೀ.ನಂತೆ 149 ಕಿ.ಮೀ. ರಸ್ತೆಯು 45.45 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಹೊಂದಲಿದೆ ಎಂದು ಪಾಲೆಮಾರ್‌ ತಮ್ಮ ರಾಜ್ಯೋತ್ಸವದ ಸಂದೇಶದಲ್ಲಿ ಹೇಳಿದರು.

Kannada Rajyotsava Mangalore

ಆರೋಗ್ಯ ಕವಚ ಯೋಜನೆಯಡಿ ಒಟ್ಟು 19 ಆಂಬುಲೆನ್ಸ್‌ಗಳು ಜಿಲ್ಲೆಗೆ ದೊರೆತಿದೆ, ತಾಯಿಭಾಗ್ಯ ಯೋಜನೆಯಡಿ 118 ಫ‌ಲಾನುಭವಿಗಳು ಪ್ರಯೋಜನ ಪಡೆದಿದ್ದಾರೆ. ಪ್ರಸೂತಿ ಆರೈಕೆ ಯೋಜನೆಯಡಿ 5,812, ಮಡಿಲು ಕಿಟ್‌ ಯೋಜನೆಯಡಿ 2,262 ಫ‌ಲಾನುಭವಿಗಳು ಯೋಜನೆಯ ಪ್ರಯೋಜನ ಪಡೆದಿದ್ದಾರೆ. ಗ್ರಾಮೀಣ ಆರೋಗ್ಯ ಅಭಿಯಾನದ ಬಳಿಕ ಆರೋಗ್ಯ ಉದ್ದೇಶಗಳಿಗೆ ಹಣದ ಅಡಚಣೆ ಇಲ್ಲ ಎಂದು ವಿವರಿಸಿದರು.

ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 43 ಸಾಧಕರನ್ನು ಹಾಗೂ 2 ಸಂಘಟನೆ ಪ್ರತಿನಿಧಿಗಳಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರದಾನಗೈದು ಸಮ್ಮಾನಿಸಲಾಯಿತು.

Kannada Rajyotsava Mangalore

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪರವಾಗಿ ನೇಹಾ ಬಿ., ಶುಭಂ ವರ್ಣೇಕರ್‌, ವೈಷ್ಣವಿ ಬಲ್ಲಾಳ್‌, ಕೆ. ಎನ್‌. ಭರತ್‌ ರಾವ್‌, ಶಾಲನ್‌ ಜೋಹ್ನ ಪಾçಸ್‌, ಅನಂತರಾಮ ಯು. ಆರ್‌., ಹಸ್ತಾ ಆರ್‌. ಐತಾಳ್‌ ಮತ್ತು ಚಿನ್ಮಯ (8 ಮಕ್ಕಳು) ಅವರಿಗೆ 2011- 12ನೇ ಸಾಲಿನಲ್ಲಿ ಅಸಾಧಾರಣ ಪ್ರತಿಭೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಧ್ವಜಾರೋಹಣ ಬಳಿಕ ದಂಡ ನಾಯಕ ಆರ್‌ಎಸ್‌ಐ ಸಿಎಆರ್‌ ವಿಠಲ ಸಿಂಧೆ ಅವರ ನೇತೃತ್ವದಲ್ಲಿ ವಿವಿಧ ತುಕಡಿಗಳ ಆಕರ್ಷಕ ಪಥಸಂಚಲನ ನಡೆಯಿತು.
ಪೊಲೀಸ್‌ ಬ್ಯಾಂಡ್‌, ದಿನೇಶ್‌ ಕುಮಾರ್‌, ಕೆ. ಸುಂದರ ರಾಜ್‌ ವಾದ್ಯ ವೃಂದ, ಕೆಎಸ್‌ಆರ್‌ಪಿ, ಡಿಎಆರ್‌, ಸಿವಿಲ್‌ ಪೊಲೀಸ್, ಸಂಚಾರಿ ಪೊಲೀಸ್‌, ಗೃಹರಕ್ಷಕ ದಳ, ಅಗ್ನಿಶಾಮಕ ಸೇವೆ, ಆರ್ಮಿ ಸೀನಿಯರ್‌, ಆರ್ಮಿ ಜೂನಿಯರ್‌ಸ ನೇವಲ್‌ ಜೂನಿಯರ್‌, ಗೈಡ್ಸ್‌, ರೋಡ್‌ ಸೇಫ್ಟಿ ಪೆಟ್ರೋಲಿಂಗ್‌ ಮತ್ತು ಭಾರತ ಸೇವಾದಳ (ಹುಡುಗಿಯರು- ಹುಡುಗಿಯರು), ಎನ್‌ಸಿಸಿ ಸೀನಿಯರ್‌ ವಿಂಗ್‌ ಮತ್ತು ತಂಡ ಪಥ ಸಂಚಲನದಲ್ಲಿ ಭಾಗವಹಿಸಿದವು.

ಅನಂತರ ವಿದ್ಯಾರ್ಥಿಗಳಿಂದ ಮೈದಾನದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಗಳು ಜರಗಿದವು.

ವಿಧಾನಸಭೆ ಉಪಸಭಾಧ್ಯಕ್ಷ ಎನ್‌. ಯೋಗೀಶ್‌ ಭಟ್‌, ಜಿಲ್ಲಾ ಪಂಚಾಯತ್‌ ಅಧ್ಯಕ್ಷೆ ಕೆ.ಟಿ. ಶೈಲಜಾ, ಶಾಸಕರಾದ ಯು.ಟಿ. ಖಾದರ್‌, ಕೆ. ಅಭಯಚಂದ್ರ ಜೈನ್‌, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ. ನಾಗರಾಜ ಶೆಟ್ಟಿ, ಕರ್ನಾಟಕ ರಾಜ್ಯ ಅಲ್ಪಸಂಖ್ಯಾಕರ ಆಯೋಗದ ಅಧ್ಯಕ್ಷ ಅನ್ವರ್‌ ಮಾಣಿಪ್ಪಾಡಿ, ಮೇಯರ್‌ ಪ್ರವೀಣ್‌, ಜಿಲ್ಲಾಧಿಕಾರಿ ಡಾ| ಚನ್ನಪ್ಪ ಗೌಡ, ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ಕೆ.ಎನ್‌. ವಿಜಯ ಪ್ರಕಾಶ್‌, ಜಿಲ್ಲಾ ಪೊಲೀಸ್‌ ವರಿಷ್ಠ ಲಾಬೂರಾಮ್‌, ಪೊಲೀಸ್‌ ಕಮೀಶನರ್‌ ಸೀಮಂತ್‌ ಕುಮಾರ್‌ ಸಿಂಗ್‌ ಅವರು ಮುಖ್ಯ ಅತಿಥಿಗಳಾಗಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English