ಮಂಗಳೂರು: ಬಿಜೆಪಿ ಕರೆ ನೀಡಿದ ರಾಜ್ಯ ಬಂದ್ ಗೆ ಯಾರು ಬೆಂಬಲಿಸಿಲ್ಲ ಎಂದು ಮಂಗಳೂರಿನಲ್ಲಿ ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ ಹೇಳಿದ್ದಾರೆ.
ನಿನ್ನೆಯಿಂದಲೆ ಸಂಘಸಂಸ್ಥೆಗಳು ಬೆಂಬಲಿಸುವುದಿಲ್ಲ ಎಂದು ತಿಳಿಸಿದೆ. ಯಡಿಯೂರಪ್ಪ ಕರೆ ನೀಡಿರುವ ಬಂದ್ ಸಂಪೂರ್ಣ ವಿಫಲ, ಯಡಿಯೂರಪ್ಪ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ. ಎಂದಿದ್ದಾರೆ.
ರಾಜ್ಯ ಬಂದ್ ಗೆ ಕರೆ ನೀಡಿ ಆಸ್ತಿಪಾಸ್ತಿ ಗೆ ನಷ್ಟವಾದರೆ ಯಡಿಯೂರಪ್ಪ ಅವರೆ ಹೊಣೆ .ಸಾಲಮನ್ನಾ ಮಾಡಲು ಸರಕಾರ ಬದ್ದವಿದೆ. ರಾಜ್ಯದ ಹಣಕಾಸು ಪರಿಸ್ಥಿತಿ ಚರ್ಚೆ ಮಾಡಿ ತೀರ್ಮಾನ ತೆಗದುಕೊಳ್ಳಬೇಕಾಗುತ್ತದೆ ಎಂದರು.
Click this button or press Ctrl+G to toggle between Kannada and English