ಚಿಕ್ಕಮಗಳೂರು: ಹಾಲು ಕೊಡುವ ಹಸು ಯಾರಿಗೆ ಸೇರಬೇಕೆಂದು ರಾಜ್ಯದ ಮೈತ್ರಿ ಸರ್ಕಾರದಲ್ಲಿ ಕಿತ್ತಾಟ ನಡೆಯುತ್ತಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಖಾತೆಗಳಿಗಾಗಿ ಹಗ್ಗ-ಜಗ್ಗಾಟ ನಡೆಸ್ತಿರೋ ರಾಜ್ಯ ಸರ್ಕಾರದ ವಿರುದ್ಧ ವ್ಯಂಗ್ಯವಾಡಿದ್ದಾರೆ.
ಮುಖ್ಯಮಂತ್ರಿಯಂದ್ರೆ ಓರ್ವ ದೊರೆಯ ಜಾಗ. ಅಂತಹ ಜಾಗದಲ್ಲಿರೋ ಮುಖ್ಯಮಂತ್ರಿ ನಾನು ನಾಡಿನ ಜನರ ಮುಲಾಜಿನಲ್ಲಿ ಇಲ್ಲ, ಕಾಂಗ್ರೆಸ್ ಮುಲಾಜಿನಲ್ಲಿದ್ದೇನೆ ಎಂದಿರೋದು ರಾಜ್ಯದ ಜನತೆಗೆ ಮಾಡಿರೋ ಅಪಮಾನ. ಕೂಡಲೇ ಅವರು ರಾಜ್ಯದ ಜನರ ಕ್ಷಮೆ ಕೇಳಬೇಕೆಂದು ಆಗ್ರಹಿಸಿದ್ದಾರೆ.
ಕಾಂಗ್ರೆಸ್ಸಿಗೆ ಎಲ್ಲಾ ಇಲಾಖೆಯಲ್ಲಿ ಭ್ರಷ್ಟಾಚಾರ ಮಾಡಿ ಅಭ್ಯಾಸವಾಗಿದೆ. ಅದೇ ಪ್ರಯತ್ನ ಮುಂದುವರೆಸಲು ಅವರು ಶತಪ್ರಯತ್ನ ನಡೆಸುತ್ತಿದ್ದಾರೆ. ಮೊನ್ನೆವರೆಗೂ ರೆಸಾರ್ಟ್‍ನಲ್ಲಿದ್ದ ಮುಖಂಡರು ಈಗ ದೆಹಲಿಯಲ್ಲಿದ್ದಾರೆ ಎಂದು ವ್ಯಂಗ್ಯವಾಡಿದ್ರು.
Click this button or press Ctrl+G to toggle between Kannada and English