ನಟ ದುನಿಯಾ ವಿಜಯ್‌‌‌ ವಿರುದ್ಧ ಎಫ್‌ಐಆರ್

11:17 AM, Thursday, May 31st, 2018
Share
1 Star2 Stars3 Stars4 Stars5 Stars
(No Ratings Yet)
Loading...

duniya-vijayಬೆಂಗಳೂರು: ನಟ ದುನಿಯಾ ವಿಜಯ್‌‌‌ಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ಮಾಸ್ತಿಗುಡಿ ನಿರ್ಮಾಪಕ ತಪ್ಪಿಸಿಕೊಳ್ಳಲು ಸಹಾಯ ಮಾಡಿದ್ದಾರೆ ಎಂಬ ಆರೋಪದ ಮೇಲೆ ಪೊಲೀಸರು ವಿಜಯ್ ಮೇಲೆ ಎಫ್‌ಐಆರ್ ದಾಖಲಿಸಿದ್ದಾರೆ.

ಮಾಸ್ತಿಗುಡಿ ಚಿತ್ರದ ಸಾಹಸ ದೃಶ್ಯದ ಚಿತ್ರೀಕರಣದ ವೇಳೆ ತಿಪ್ಪಗೊಂಡನಹಳ್ಳಿ ಕೆರೆಯಲ್ಲಿ ಮುಳುಗಿ ಖಳ ನಟರಾದ ಅನಿಲ್ ಹಾಗೂ ಉದಯ್ ಸಾವನ್ನಪ್ಪಿದ್ದರು. ಚಿತ್ರದ ನಿರ್ಮಾಪಕ ಸುಂದರ್ ಪಿ. ಗೌಡ ಪ್ರಕರಣದ ವಿಚಾರಣೆಗೆ ಬರದ ಹಿನ್ನೆಲೆ ರಾಮನಗರ ಜೆಎಂಎಫ್‌‌‌ಸಿ ಕೋರ್ಟ್ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿತ್ತು. ಸುಂದರ್‌‌ನನ್ನು ಬಂಧಿಸಲು ನಿನ್ನೆ ತಡರಾತ್ರಿ ತಾವರೆಕೆರೆ ಪೊಲೀಸರು ಆತನ ಮನೆಗೆ ಹೋಗಿದ್ದರು.

ಈ ವೇಳೆ ಮಧ್ಯೆ ಬಂದ ದುನಿಯಾ ವಿಜಯ್‌, ಸುಂದರ್ ತಾಯಿಗೆ ಆರೋಗ್ಯ ಸರಿ ಇಲ್ಲ. ಸುಂದರ್‌‌ನನ್ನು ನಾನೇ ಪೊಲೀಸ್ ಠಾಣೆಗೆ ಕರೆತರುತ್ತೇನೆ ಎಂದು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಈ ನಡುವೆ ಬಟ್ಟೆ ಬದಲಿಸಿಕೊಂಡು ಬರುತ್ತೇನೆ ಎಂದು ಹೇಳಿ ಹೋದ ಸುಂದರ್ ಅಲ್ಲಿಂದ ತಪ್ಪಿಸಿಕೊಂಡಿದ್ದಾರೆ.

ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಯೊಂದಿಗೆ ಅನುಚಿತ ವರ್ತನೆ ತೋರಿದ ಆರೋಪ ಹಾಗೂ ಪ್ರಕರಣದ ಆರೋಪಿ ತಪ್ಪಿಸಿಕೊಳ್ಳಲು ಸಹಾಯ ಮಾಡಿದ ಆರೋಪದ ಮೇಲೆ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ವಿಜಯ್‌‌‌‌‌ ಮೇಲೆ ಎಫ್‌‌‌ಐಆರ್ ದಾಖಲಾಗಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English