ಬೆಂಗಳೂರು: ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳು ಕೊನೆಗೂ ಖಾತೆ ಹಂಚಿಕೆ ಮಾಡಿಕೊಂಡಿವೆ.
ಕಾಂಗ್ರೆಸ್ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಹಾಗೂ ಡಿಸಿಎಂ ಪರಮೇಶ್ವರ್ ಬೆಳಗ್ಗೆ ದೇವೇಗೌಡರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಈ ವೇಳೆ ಇಬ್ಬರ ನಡುವೆ ಖಾತೆ ಹಂಚಿಕೆ ನಿರ್ಧಾರಕ್ಕೆ ಬರಲಾಯ್ತು. ಇದೀಗ ಒಪ್ಪಂದ ಪ್ರಕಾರ ಜೆಡಿಎಸ್‌ಗೆ 12 ಹಾಗೂ ಕಾಂಗ್ರೆಸ್ 22 ಖಾತೆಗಳನ್ನು ಹಂಚಿಕೊಳ್ಳಲಾಗಿದೆ.
ಖಾತೆಗಳ ಹಂಚಿಕೆ ವಿವರ ಇಂತಿದೆ:
ಜೆಡಿಎಸ್:
1. ಮಾಹಿತಿ, ಇಂಟೆಲಿಜೆನ್ಸ್, ಪ್ಲಾನಿಂಗ್ ಆ್ಯಂಡ್ ಸ್ಟ್ಯಾಟಿಟಿಕ್ಸ್,
2. ಹಣಕಾಸು ಮತ್ತು ಅಬಕಾರಿ
3. ಪಿಡಬ್ಲ್ಯೂಡಿ
4. ಸಹಕಾರ
5. ಪ್ರವಾಸೋದ್ಯಮ
6. ಶಿಕ್ಷಣ
7. ಪಶುಸಂಗೋಪನೆ
8. ಹರ್ಟಿಕಲ್ಚರ್ ಮತ್ತು ಸಿರಿಕಲ್ಚರ್
9. ಸಣ್ಣ ಕೈಗಾರಿಕೆ
10. ಸಾರಿಗೆ
11. ಸಣ್ಣ ನೀರಾವರಿ
ಕಾಂಗ್ರೆಸ್:
1. ಗೃಹ
2. ನೀರಾವರಿ
3. ಬೆಂಗಳೂರು ನಗರಾಭಿವೃದ್ಧಿ
4. ಕೈಗಾರಿಕೆ, ಸಕ್ಕರೆ
5. ಆರೋಗ್ಯ
6. ಕಂದಾಯ
7. ನಗರಾಭಿವೃದ್ಧಿ
8. ಗ್ರಾಮೀಣಾಭಿವೃದ್ದಿ
9. ಕೃಷಿ
10. ವಸತಿ
11. ವೈದ್ಯಕೀಯ
12. ಸಮಾಜಕಲ್ಯಾಣ
13. ಅರಣ್ಯ, ಪರಿಸರ
14. ಕಾರ್ಮಿಕ
15. ಗಣಿ ಮತ್ತು ಭೂ ವಿಜ್ಞಾನ
16. ಮಹಿಳಾ ಮತ್ತು ಮಕ್ಕಳ ಕಲ್ಯಾಣ
17. ಆಹಾರ ಮತ್ತು ನಾಗರಿಕ ಸರಬರಾಜು
18. ಹಜ್
19. ಕಾನೂನು, ಸಂಸದೀಯ ವ್ಯವಹಾರಗಳ ಖಾತೆ
20. ವಿಜ್ಞಾನ ತಂತ್ರಜ್ಞಾನ
21. ಯುವಜನ, ಕನ್ನಡ ಮತ್ತು ಸಂಸ್ಕೃತಿ
22. ಬಂದರು, ಒಳನಾಡ ಸಾರಿಗೆ
Click this button or press Ctrl+G to toggle between Kannada and English