ರಾಜ್ಯ ಸಚಿವ ಸಂಪುಟದ ವಿಸ್ತರಣೆ : ಆರು ಮಂದಿ ಸಚಿವರಿಗೆ ಪ್ರಮಾನವಚನ

1:39 PM, Wednesday, September 22nd, 2010
Share
1 Star2 Stars3 Stars4 Stars5 Stars
(No Ratings Yet)
Loading...

ಶೋಭಾ ಕರಂದ್ಲಾಜೆ, ಸಿ.ಸಿ. ಪಾಟೀಲ, ವಿ. ಸೋಮಣ್ಣ, ಎ ನಾರಾಣಸ್ವಾಮಿ, ಎ. ರಾಮದಾಸ್ ಮತ್ತು ಸಿ. ಎಚ್. ವಿಜಯಶಂಕರ್ ಬೆಂಗಳೂರು : ರಾಜ್ಯ ಸರಕಾರವು ಸಚಿವ ಇಂದು ಬೆಳಗ್ಗೆ 9.30ಕ್ಕೆ ಸಂಪುಟದ ಪುನಾರಚನೆ ಮಾಡಿದೆ.  ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆರು ಮಂದಿ  ಸಚಿವರಿಗೆ ರಾಜ್ಯಪಾಲರು ಪ್ರಮಾನವಚನ ಭೋದಿಸಿದರು.
ನೂತನ ಸಂಪುಟದದಲ್ಲಿ ಶೋಭಾ ಕರಂದ್ಲಾಜೆ, ಸಿ.ಸಿ. ಪಾಟೀಲ, ವಿ. ಸೋಮಣ್ಣ, ಎ ನಾರಾಣಸ್ವಾಮಿ, ಎ. ರಾಮದಾಸ್ ಮತ್ತು ಸಿ. ಎಚ್. ವಿಜಯಶಂಕರ್ ಅವರು ರಾಜ್ಯಪಾಲರಿಂದ ಪ್ರಮಾನವಚನ ಸ್ವೀಕರಿಸಿದರು.
ಬಿ.ಜೆ.ಪಿ ಶಾಸಕರ ಮತ್ತು ಸಚಿವರುಗಳ ಬೆದರಿಕೆ ನಡುವೆಯೂ ಸಂಪುಟ ಪುನರ್ ರಚನೆ ಇಂದು ನಡೆಯಿತು. ಶೋಭಾ ಕರಂದ್ಲಾಜೆ ಮತ್ತು ವಿ. ಸೋಮಣ್ಣ ಸಂಪುಟಕ್ಕೆ ಮರು ಸೇರ್ಪಡೆಗೊಂಡರು.
ಕ್ರೀಡಾ ಖಾತೆ ಸಚಿವ ಗೂಳಿಹಟ್ಟಿ ಶೇಖರ್,  ಶಿಕ್ಷಣ ಸಚಿವ ಅರವಿಂದ ಲಿಂಬಾವಳಿ ಮತ್ತು ಗ್ರಂಥಾಲಯ ಸಚಿವ ಶಿವನಗೌಡ ನಾಯಕ್ ಅವರನ್ನು ಸಂಪುಟದಿಂದ ವಜಾಗೊಳಿಸಲಾಗಿದೆ.
ಅಪ್ಪಚ್ಚು ರಂಜನ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸಿಟಿ ರವಿ ಹಾಗು ಶಂಕರಲಿಂಗೇಗೌಡರಿಗೆ ಸಂಪುಟದಲ್ಲಿ ಸ್ಥಾನ ಸಿಗಲಿಲ್ಲ .
ಅಸಮಾಧಾನ ಗೊಂಡ ಶಾಸಕರನ್ನು ನಿಗಮ ಮಂಡಳಿಗಳಿಗೆ ನೇಮಕ ಮಾಡಲಾಗುವುದು.  ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ ಎಸ್ ಈಶ್ವರಪ್ಪ ಸ್ಪಷ್ಟಪಡಿಸಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English