ಕುಡಿದ ಮತ್ತಿನಲ್ಲಿ ಮಾವನಿಂದಲೇ ಅಳಿಯನ ಕೊಲೆ..!

5:26 PM, Saturday, June 2nd, 2018
Share
1 Star2 Stars3 Stars4 Stars5 Stars
(5 rating, 1 votes)
Loading...

murderedಬಂಟ್ವಾಳ: ಕುಡಿದ ಮತ್ತಿನಲ್ಲಿ ಮಾವನಿಂದಲೇ ಅಳಿಯನ ಕೊಲೆ ನಡೆದ ಘಟನೆ ಬಂಟ್ವಾಳ ತಾಲೂಕಿನ ಮಣಿನಾಲ್ಕೂರು ಗ್ರಾಮದ ಕಟ್ಟದಪಡ್ಪು ಎಂಬಲ್ಲಿ ನಡೆದಿದೆ.

ರಮಾನಂದ (50) ಮಾವನಿಂದಲೆ ಕೊಲೆಯಾದ ದುರ್ದೈವಿ. ರಮಾನಂದ ಅವರ ಪತ್ನಿಯ ತಂದೆ ಅಮನ್ನ ಪೂಜಾರಿ ಕೊಲೆಗೈದವರು.

ಕುಡಿದ ಮತ್ತಿನಲ್ಲಿದ್ದ ಆರೋಪಿ ಅಮನ್ನ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದಾರೆ. ಈ ಕೊಲೆಗೆ ಸಾಂಸಾರಿಕ ಕಲಹ ಕಾರಣವೆಂದು ಹೇಳಲಾಗಿದೆ.ಮಧ್ಯಾಹ್ನ ಸುಮಾರು 12 ಗಂಟೆಗೆ ಘಟನೆ ನಡೆದಿದ್ದು, ರಮಾನಂದರ ಪತ್ನಿ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ.

ಬಂಟ್ವಾಳ ಗ್ರಾಮಾಂತರ ಪೊಲೀಸರು, ಡಿವೈಎಸ್ಪಿ ಸ್ಥಳಕ್ಕೆ ಭೇಟಿ ನೀಡಿ ಪರಶೀಲನೆ ನಡೆಸುತ್ತಿದ್ದು, ಕೊಲೆ ಆರೋಪಿ ಅಮ್ಮನ್ ಪೂಜಾರಿ ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English