ವಿಕಾಸ್ ಕಾಲೇಜಿನಲ್ಲಿ ಪಿಯುಸಿ ವಿದ್ಯಾರ್ಥಿಗಳ ಪುನರ್ಮನನ ಶಿಬಿರ

1:42 PM, Monday, June 4th, 2018
Share
1 Star2 Stars3 Stars4 Stars5 Stars
(No Ratings Yet)
Loading...

vikas collegeಮಂಗಳೂರು :  ನಗರದ ವಿಕಾಸ್ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಪುನರ್ಮನನ ಶಿಬಿರವನ್ನು ಮೇರಿಹಿಲ್‌ನ ಮೌಂಟ್ ಕಾರ್ಮೆಲ್ ಸಭಾಂಗಣದಲ್ಲಿ ದಿನಾಂಕ 03-06-2018 ರಂದು ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಂಡ್ಯರಾಜ್ ಬಲ್ಲಾಳ್ ಎಜ್ಯುಕೇಶನ್ ಇನ್ಸ್ಟಿಟ್ಯುಶನ್ ಇದರ ಎಂ.ಡಿ ಆಂಡ್ ಟ್ರಸ್ಟಿ ಹಾಗೂ ಮಂಗಳೂರು ಕೆ ಎಂ ಸಿ ಇಲ್ಲಿನ ಒಬ್ಸ್‌ಟರ್‌ಟ್ರಿಕ್ಸ್ ಮತ್ತು ಗೈನ್ಯೊಕೋಲೊಜಿ ಡಾ. ಪ್ರಿಯ ಬಲ್ಲಾಳ್ ಕೆ ಆಗಮಿಸಿ ಭವಿಷ್ಯದಲ್ಲಿ ಏನಾಗಬೇಕೋ ಅದರ ನಿರ್ಧಾರ ಈ ಪಿ.ಯು.ಸಿ ಹಂತದಲ್ಲಿಯೇ ಮಾಡಿ, ಮುಂದಿನ ಜೀವನ ಸಮತೋಲನಗೊಳಿಸಿಕೊಳ್ಳಲು ಈ ನಿರ್ಧಾರ ಸಹಾಯಕ. ಕಠಿಣ ಪರಿಶ್ರಮವಿರಲಿ, ಯೋಗದಿಂದ ದಿನವನ್ನು ಪ್ರಾರಂಭಿಸಿ, ದಿನನಿತ್ಯ ಜೀವನದಲ್ಲಿ ಹಿರಿಯರನ್ನು, ಸ್ತ್ರೀಯರನ್ನು ಗೌರವಿಸುವ ಗುಣ ಬೆಳೆಸಿಕೊಳ್ಳಿ ಎಂದರು.

vikas collegeಗೌರವ ಅತಿಥಿಗಳಾಗಿ ನಿಟ್ಟೆ ವಿಶ್ವವಿದ್ಯಾಲಯದ ಪ್ರೊ ವೈಸ್ ಚಾನ್ಸಲರ್ ಆಗಿರುವ ಡಾ| ಎಂ ಎಸ್ ಮೂಡಿತ್ತಾಯ ಪ್ರತಿ ಮಗು ಜನಿಸುವುದು ತಿನ್ನುವುದಕ್ಕಾಗಿ ಅಲ್ಲ, ಪರಿಶ್ರಮ ಪಡುವುದಕ್ಕಾಗಿ. ಬೌದ್ಧಿಕ ಜ್ಞಾನವನ್ನು ಪಡೆಯುವುದರ ಜೊತೆಗೆ ಭಾವನಾತ್ಮಕ ಕೌಶಲ್ಯವನ್ನು ಬೆಳೆಸಿಕೊಳ್ಳುವುದು ಅತೀ ಅಗತ್ಯ ಎಂದರು. ನೀವು ಯಶಸ್ಸಿನ ಹಾದಿಯಲ್ಲಿ ನಡೆಯುತ್ತಿರುವಾಗ ಯಾರಾದರು ನಿಮ್ಮನ್ನು ಋಣಾತ್ಮಕವಾಗಿ ಪರಿಗಣಿಸಿದರೆ ನೀವು ಸಾಧನೆ ಮಾಡುವುದರ ಮೂಲಕ ಉತ್ತರ ಕೊಡಿ. ತಂತ್ರಜ್ಞಾನವನ್ನು ಬಳಸಿಕೊಳ್ಳಿ, ಆದರೆ ಅದರ ಗುಲಾಮರಾಗಬೀಡಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತನ್ನು ಹೇಳಿದರು.

ಅಧ್ಯಕ್ಷ ಸ್ಥಾನವನ್ನು ಮಾಜಿ ಸಚಿವರೂ, ಹಾಗೂ ಕಾಲೇಜಿನ ಸ್ಥಾಪಕ ಅಧ್ಯಕ್ಷರೂ ಆಗಿರುವ ಶ್ರೀಯುತ ಜೆ.ಕೃಷ್ಣ ಪಾಲೆಮಾರ್ ವಹಿಸಿದ್ದರು. ನಮ್ಮ ಕಾಲೇಜಿನಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯನ್ನು ವೈಯಕ್ತಿಕ ಕಾಳಜಿ ವಹಿಸಿ ಪಾಲನೆ ಮಾಡುತ್ತೇವೆ. ಹದಿಹರೆಯದಲ್ಲಾಗುವ ತಪ್ಪಿಗೆ ಇಡೀ ಜೀವನ ಹಾಳಾಗಬಾರದು. ಆ ಕಾರಣಕ್ಕಾಗಿ ವಿಶಿಷ್ಟ ರೀತಿಯಲ್ಲಿ ಶಿಕ್ಷಣವನ್ನು ನೀಡುತ್ತಿದ್ದೇವೆ. ಕಾಲೇಜಿನ ಆವರಣದಲ್ಲಿ ಬೆಳೆದ ಸಾವಯವ ಆಹಾರವನ್ನು ವಿದ್ಯಾರ್ಥಿಗಳಿಗೆ ನೀಡುತ್ತಿದ್ದೇವೆ. ಉತ್ತಮ ವಾತಾವರಣ, ಉತ್ತಮ ಜ್ಞಾನ, ಇವೆಲ್ಲವನ್ನು ನೀಡಿ ವಿದ್ಯಾರ್ಥಿಗಳು ಕಲಿತು ಹೊರಗೆ ಹೋಗುವಾಗ ಒಬ್ಬ ಉತ್ತಮ ಪ್ರಜೆಯನ್ನಾಗಿ ರೂಪಿಸುವ ಜವಾಬ್ಧಾರಿ ನಮ್ಮದು ಎಂದರು.

vikas collegeಪ್ರಾಂಶುಪಾಲರಾದ ಪ್ರೊಫೆಸರ್ ರಾಜಾರಾಮ್ ರಾವ್ ಟಿ ಕಾಲೇಜಿನ ರೂಪುರೇಷೆಯ ಬಗ್ಗೆ ತಿಳಿಸಿ, ಕಾಲೇಜಿನ ಶಿಸ್ತು ಮತ್ತು ಓದುವ ಅಭ್ಯಾಸದ ಬಗ್ಗೆ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು.

ಸಲಹೆಗಾರರಾದ ಡಾ|ಅನಂತ್‌ಪ್ರಭು ಜಿ. ವಿಕಾಸ್ ಕಾಲೇಜಿನ ಗುರಿಯನ್ನು ತಿಳಿಸುವುದರೊಂದಿಗೆ ಧನಾತ್ಮಕ ಯೋಚನೆಯಿರಬೇಕು. ಸತತ ಪರಿಶ್ರಮದಿಂದ ಎಲ್ಲವೂ ಸಾಧ್ಯ ಎಂದು ವಿದ್ಯಾರ್ಥಿಗಳನ್ನು ಪ್ರೇರೇಪಿಸಿದರು.
ಸಂಚಾಲಕರಾದ ಡಾ.ಡಿ ಶ್ರೀಪತಿರಾವ್ ಸ್ವಾಗತಿಸಿದರು. ವೇದಿಕೆಯಲ್ಲಿ ವಿಕಾಸ್ ಸಮೂಹ ಸಂಸ್ಥೆಯ ಸಮನ್ವಯಾಧಿಕಾರಿ ಶ್ರೀಯುತ ಪಾರ್ಥಸಾರಥಿ ಪಾಲೆಮಾರ್ ಉಪಸ್ಥಿತರಿದ್ದರು. ವಿಕಾಸ್ ಎಜ್ಯುಕೇಷನ್ ಟ್ರಸ್ಟ್‌ನ ಟ್ರಸ್ಟಿಗಳಾದ ಶ್ರೀಯುತ ಜೆ.ಕೊರಗಪ್ಪ, ಶ್ರೀಯುತ ಸೂರಜ್ ಕುಮಾರ್ ಕಲ್ಯ ಉಪಸ್ಥಿತರಿದ್ದರು. ಯೋಗರತ್ನ ಶ್ರೀಯುತ ಗೋಪಾಲಕೃಷ್ಣ ದೇಲಂಪಾಡಿ, ಸೇರಿದಂತೆ ಬೋಧಕ, ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು. ಉಪನ್ಯಾಸಕಿ ವೈಶಾಲಿ ವಂದಿಸಿದರು. ಕಾಮರ್ಸ್ ಇನ್‌ಚಾರ್ಜ್ ಶ್ರೀಮತಿ ಐಶ್ವರ್ಯ ರಾವ್ ಕೆ ಎಲ್ ಕಾರ್ಯಕ್ರಮ ನಿರೂಪಿಸಿದರು.

ಇದೇ ಹೊತ್ತಿನಲ್ಲಿ 2018 ಮಾರ್ಚ್‌ನಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅಧಿಕ ಅಂಕ ಪಡೆದ ವಿಜ್ಞಾನ ವಿಭಾಗದ ಅರ್ಜುನ್ ಎ ಎಸ್(600/585), ಅಪೇಕ್ಷಾ ಬಿ ಮಲಿಪಾಟೀಲ್(600/583), ರಚನಾ ಪಿ (600/583), ವಾಣಿಜ್ಯ ವಿಭಾಗದಲ್ಲಿ ಸಂಗೀತ್ ಶರತ್(600/584), ಪ್ರಜ್ಞಾ ಸಿ ಕೆ (600/582), ಹಾಗೂ ವಿಕಾಸ್ ಕಾಲೇಜಿಗೆ ನೊಂದಾವಣೆಗೊಂಡ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿಅಧಿಕ ಅಂಕ ಪಡೆದಿರುವ ವಿದ್ಯಾರ್ಥಿನಿ ಭಾಗ್ಯಶ್ರೀ(625/621)ಯವರನ್ನು ಸನ್ಮಾನಿಸಲಾಯಿತು.

vikas college

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English