ಐಶ್ವರ್ಯ ರೈ ಮಗುವಿಗಾಗಿ 150 ಕೋಟಿ ಬೆಟ್

6:20 PM, Wednesday, November 9th, 2011
Share
1 Star2 Stars3 Stars4 Stars5 Stars
(4 rating, 1 votes)
Loading...

aishwarya-rai

ಮಂಗಳೂರು : ಬಾಲಿವುಡ್ ತಾರೆ ಐಶ್ವರ್ಯ ರೈಗೆ ಹುಟ್ಟಲಿರುವ ಮಗು ಹೆಣ್ಣಾ ಗಂಡಾ ಎಂದು ಈ ಮೊದಲು ಬಾಜಿ ಕಟ್ಟಿದ್ದರು. ಈಗ ಐಶ್ವರ್ಯ ಡೆಲಿವರಿ ಡೇಟ್ ಮೇಲೆ ಬಾಜಿ ಕಟ್ಟಲು ಭಾರಿ ಬೇಡಿಕೆ ಶುರುವಾಗಿದೆಯಂತೆ. ಬೆಟ್ ಕಟ್ಟಿರುವ ಮೊತ್ತ ಬರೋಬ್ಬರಿ 150 ಕೋಟಿ ರೂಪಾಯಿಗಳು.

ಐಶ್ವರ್ಯ ರೈ ನವೆಂಬರ್ 9 ಅಥವಾ 14ಕ್ಕೆ ಪ್ರಸವಿಸಲಿದ್ದಾರೆ ಎಂಬುದು ವೈದ್ಯರು ನೀಡಿರುವ ದಿನಾಂಕ. ನವೆಂಬರ್ 14ರಂದು ಮಕ್ಕಳ ದಿನಾಚರಣೆ. ಆದರೆ ಜೋತಿಷ್ಯದ ಸಂಖ್ಯಾಶಾಸ್ತ್ರಜ್ಞರ ಪ್ರಕಾರ 11.11.11ರಂದೇ ಐಶ್ವರ್ಯ ರೈ ಮಗುವಿಗೆ ಜನ್ಮ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಈ ಎರಡು ದಿನಾಂಕಗಳಿಗಾಗಿ ಸರಿಸುಮಾರು ರು.150 ಕೋಟಿ ಬೆಟ್ಟಿಂಗ್ ಮಾಡಲಾಗಿದೆಯಂತೆ.

ಐಶ್ವರ್ಯ ರೈಗೆ ಹೆರಿಗೆ ನವೆಂಬರ್ ಹನ್ನೊಂದು ಅಥವಾ ಹದಿನಾಲ್ಕುರಂದು ಹಾಗಬೇಕೆಂದೇನಿಲ್ಲ. ಅಕೆಗೆ ನವೆಂಬರ್ ತಿಂಗಳಲ್ಲಿ ಪ್ರಸವ ಆಗಲಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ ಅಷ್ಟೇ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English