ಹುಬ್ಬಳ್ಳಿ: ಪತಿಯನ್ನು ಕೊಂದು ಸಹಜ ಸಾವು ಎಂದು ನಾಟಕವಾಡಿದ್ದ ಪತ್ನಿಯನ್ನು ವಿದ್ಯಾನಗರ ಪೊಲೀಸರು ಬಂಧಿಸಿದ್ದಾರೆ. ಕಾವ್ಯ ಅಲಿಯಾಸ್ ಭಾರತಿ(40) ಬಂಧಿತ ಮಹಿಳೆ.
ಮೇ 2 ರಂದು ಓಂ ನಗರದಲ್ಲಿ ನಿವಾಸದಲ್ಲಿ ಪತಿ ಶಿವಯೋಗಿ ಹಳೆಮನೆಯನ್ನ ಪತ್ನಿ ಕಾವ್ಯ ಕೊಲೆ ಮಾಡಿದ್ದಳು. ಕ್ರಿಕೆಟ್ ಬ್ಯಾಟ್‌ನಿಂದ ಹೊಡೆದು ಕೊಲೆ ಮಾಡಿದ್ದಳು.
ಬಳಿಕ ಮಂಚದ ಮೇಲಿಂದ ಬಿದ್ದು ಸತ್ತಿದ್ದಾರೆಂದು ಎಂದು ಕಥೆ ಕಟ್ಟಿದ್ದಳು. ಆದ್ರೆ ಶಿವಯೋಗಿ ಸಹೋದರಿ ರಾಜೇಶ್ವರಿ ಅವರು ಈ ಬಗ್ಗೆ ಅನುಮಾನ ವ್ಯಕ್ತಪಡಿಸಿ ವಿದ್ಯಾನಗರ ಪೊಲೀಸರಿಗೆ ದೂರು ನೀಡಿದ್ದರು.
ದೂರಿನ ಅನ್ವಯ ವಿದ್ಯಾನಗರ ಪೊಲೀಸರು ಕಾವ್ಯಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪೊಲೀಸರ ಮುಂದೆ ತಾನೇ ಕೊಲೆ ಮಾಡಿರೋದಾಗಿ ತಪ್ಪೊಪ್ಪಿಕೊಂಡಿದ್ದಾಳೆ. ಕೌಟುಂಬಿಕ ಕಲಹ ಹಿನ್ನೆಲೆ ಕೊಲೆ ಮಾಡಿರುವುದಾಗಿ ಆರೋಪಿ ಮಹಿಳೆ ಒಪ್ಪಿಕೊಂಡಿದ್ದಾಳೆ. ಬಂಧಿತ ಮಹಿಳೆಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
Click this button or press Ctrl+G to toggle between Kannada and English